- ಸೇನಾ ತಂತ್ರಜ್ಞ ಮೊಹಮ್ಮದ್ ಜಾಫರಿ ಶಕ್ತಿ
-ಸರ್ವೋಚ್ಚ ನಾಯಕ ಸತ್ತರೂ ದೇಶಕ್ಕಿಲ್ಲ ಸಮಸ್ಯೆಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್, ಜಂಟಿಯಾಗಿ ಇರಾನ್ ಮೇಲೆ ಭಾರೀ ವಾಯುದಾಳಿ ನಡೆಸಿ, ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಹೊಡೆದುರುಳಿಸಿ ವೆನಿಜುವೆಲಾ ರೀತಿಯಲ್ಲೇ ಆಡಳಿತ ಬದಲಾವಣೆಯನ್ನು ನಿರೀಕ್ಷಿಸಿದ್ದವು. ಆದರೆ ಯುದ್ಧ ಆರಂಭವಾದ 2 ವಾರಗಳ ನಂತರವೂ ಇರಾನ್ ಹೋರಾಟ ಮುಂದುವರೆಸಿದೆ. ತನ್ನ ಹಲವು ಉನ್ನತ ನಾಯಕರು ಸಾವನ್ನಪ್ಪಿದರೂ ಧೃತಿಗೆಡದೆ ಸಮರೋತ್ಸಾಹ ತೋರುತ್ತಿದೆ. ಇದು ಅಮೆರಿಕವನ್ನು ದಂಗುಬಡಿಸಿದೆ.
ಇದಕ್ಕೆ ಕಾರಣ ಇರಾನಿಗೆ ಬೆನ್ನೆಲುಬಾಗಿ ನಿಂತಿರುವ ಸೇನಾ ತಂತ್ರಜ್ಞ ಮೇಜರ್ ಜನರಲ್ ಮೊಹಮ್ಮದ್ ಅಲಿ ಜಾಫರಿ ಹಾಗೂ ಆತ ನಿರ್ಮಿಸಿರುವ ‘ಮೊಸೈಕ್’ ಎಂಬ ವಿಶಿಷ್ಟ ರಕ್ಷಣಾ ವ್ಯವಸ್ಥೆ ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.ಯಾರಿವರು ಜಾಫರಿ?:ಇರಾನ್ ಸೇನೆಯು ‘ಮೊಸೈಕ್ ಡಿಫೆನ್ಸ್’ ಎಂಬ ವಿಶೇಷ ಮಾದರಿಯನ್ನು ಅಳವಡಿಸಿಕೊಂಡಿದೆ. ಇದು ಎಂಥದ್ದೇ ದಾಳಿ ಎದುರಾದರೂ ಸಮರ್ಥವಾಗಿ ಎದುರಿಸಿ ನಿಲ್ಲುವ ಶಕ್ತಿ ಒದಗಿಸಿದೆ. ಮೊಹಮ್ಮದ್ ಅಲಿ ಜಾಫರಿ ಈ ವ್ಯವಸ್ಥೆಯ ರೂವಾರಿ ಎನ್ನಲಾಗುತ್ತದೆ. ಅವರು 2007ರಿಂದ 2019ರವರೆಗೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (ಐಆರ್‌ಜಿಸಿ) ಮುಖ್ಯಸ್ಥರಾಗಿದ್ದರು. ಇರಾನ್-ಇರಾಕ್ ಯುದ್ಧದಲ್ಲಿ (1980-1988) ಹೋರಾಡಿದ್ದರು. 1992ರಲ್ಲಿ ಗಾರ್ಡ್ಸ್ ಗ್ರೌಂಡ್ ಫೋರ್ಸ್‌ಗಳ ಮುಖ್ಯಸ್ಥರಾದರು. 2005ರಲ್ಲಿ ಐಆರ್‌ಜಿಸಿಯ ಸ್ಟ್ರ್ಯಾಟಜಿಕ್ ಸ್ಟಡೀಸ್ ಸೆಂಟರ್‌ನ ನಿರ್ದೇಶಕರಾದರು. ಅಲ್ಲಿ ಇರಾನ್-ಇರಾಕ್ ಯುದ್ಧ ಮತ್ತು 2003ರಲ್ಲಿ ಅಮೆರಿಕ ಇರಾಕ್ ಮೇಲೆ ನಡೆಸಿದ ಆಕ್ರಮಣ ತಂತ್ರಗಳನ್ನು ಅಧ್ಯಯನ ಮಾಡಿದರು. ಅದರ ಆಧಾರದ ಮೇಲೆ ‘ಮೊಸೈಕ್’ ವ್ಯವಸ್ಥೆಯನ್ನು ರೂಪಿಸಿದರು. 2007ರಲ್ಲಿ ಐಆರ್‌ಜಿಸಿ ಕಮಾಂಡರ್-ಇನ್-ಚೀಫ್ ಆದ ನಂತರ ಈ ವ್ಯವಸ್ಥೆಯನ್ನು ದೇಶದಲ್ಲಿ ಸಂಪೂರ್ಣವಾಗಿ ಅಳವಡಿಸಿದರು ಎನ್ನಲಾಗಿದೆ. ಏನಿದು ಮೊಸೈಕ್ ರಕ್ಷಣಾ ವ್ಯವಸ್ಥೆ?: