ಬಿಹಾರ ಚುನಾವಣೆ ಗೆಲ್ಲೋರ್‍ಯಾರು?

Published : Nov 11, 2025, 06:48 AM IST
Bihar elections 2025

ಸಾರಾಂಶ

ಎನ್‌ಡಿಎ ಮತ್ತು ಇಂಡಿಯಾ ಕೂಟದ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗಿದ್ದ ಬಿಹಾರದಲ್ಲಿ 2ನೆಯ ಹಾಗೂ ಕೊನೆಯ ಹಂತದ ಚುನಾವಣೆ ನ.11ರಂದು ನಡೆಯಲಿದೆ. ಈ ಹಂತದಲ್ಲಿ 122 ಕ್ಷೇತ್ರಗಳಲ್ಲಿ 1302 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

 ಪಟನಾ: ಎನ್‌ಡಿಎ ಮತ್ತು ಇಂಡಿಯಾ ಕೂಟದ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗಿದ್ದ ಬಿಹಾರದಲ್ಲಿ 2ನೆಯ ಹಾಗೂ ಕೊನೆಯ ಹಂತದ ಚುನಾವಣೆ ನ.11ರಂದು ನಡೆಯಲಿದೆ. ಈ ಹಂತದಲ್ಲಿ 122 ಕ್ಷೇತ್ರಗಳಲ್ಲಿ 1302 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮತದಾನದ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ 4 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಚುನಾವಣಾ ಫಲಿತಾಂಶವು ನ.14ರಂದು ಪ್ರಕಟ

ರಾಜ್ಯದಲ್ಲಿ ನ.6ರಂದು 121 ಕ್ಷೇತ್ರಗಳಿಗೆ ಮೊದಲ ಹಂತದ ಚುನಾಚಣೆ ನಡೆದಿದ್ದು, ಇತಿಹಾಸದಲ್ಲೇ ಅತ್ಯಧಿಕ ಶೇ.65ರಷ್ಟು ಮತದಾನವಾಗಿತ್ತು. ಚುನಾವಣಾ ಫಲಿತಾಂಶವು ನ.14ರಂದು ಪ್ರಕಟವಾಗಲಿದೆ.

ಇಂದು ಸಮೀಕ್ಷೆ: 

ಮತದಾನ ಮುಗಿಯುತ್ತಲೇ ಸಂಜೆ 5 ಗಂಟೆ ಬಳಿಕ ಚುನಾವಣಾಪೂರ್ವ ಸಮೀಕ್ಷೆಗಳು ಪ್ರಕಟವಾಗಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ- ಜೆಡಿಯು ಮೈತ್ರಿಯ ಎನ್‌ಡಿಎ ಕೂಟಕ್ಕೆ ಸ್ಪಷ್ಟ ಬಹುಮತದ ಸುಳಿವು ನೀಡಿವೆ. 243 ಕ್ಷೇತ್ರಗಳ ಪೈಕಿ ಎನ್‌ಡಿಎ ಕೂಟವು 153-164 ಸ್ಥಾನಗಳನ್ನು, ಇಂಡಿಯಾ ಕೂಟ (ಮಹಾಘಠಬಂಧನ) 76-87 ಸ್ಥಾನಗಳನ್ನು ಬಾಚಿಕೊಳ್ಳಲಿದೆ ಎಂದು ಐಎಎನ್‌ಎಸ್‌-ಮ್ಯಾಟ್ರಿಕ್ಸ್‌ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹೇಳಿತ್ತು. 243 ಕ್ಷೇತ್ರಗಳಲ್ಲಿ ಆಡಳಿತ ನಡೆಸಲು 122 ಕ್ಷೇತ್ರಗಳ ಬಹುಮತ ಅಗತ್ಯವಿದೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು
ಬೀದೀಲಿ ಹೆಣವಾದ ಪುಣೆ ಬಾಂಬ್‌ ಸ್ಫೋಟದ ಉಗ್ರ!