ಟಾಟಾಸ್ಟೀಲ್ ಕಂಪನಿ ಕಾರ್ಮಿಕರ ಜತೆಗೂಡಿ ಕೆಲಸ : ಬೆವರಿನಲ್ಲಿ ನಿತ್ಯ ಸ್ನಾನ ಮಾಡಿ ವೃತ್ತಿ ಆರಂಭ

ಸಾರಾಂಶ

ರತನ್ ಟಾಟಾ ತಮ್ಮ ವೃತ್ತಿ ಬದುಕು ಆರಂಭಿಸಿದ್ದು, ಜೆಮ್‌ಶೆಡ್‌ಪುರದ ಟಾಟಾ ಸ್ಟೀಲ್ ಕಂಪೆನಿಯ ಐಷಾರಾಮಿ ಕೊಠಡಿಯೊಂದರಲ್ಲಿ ಕುಳಿತು ಫೈಲ್‌ಗಳನ್ನು ನೋಡಿ ಆರ್ಡರ್‌ಗಳನ್ನು ಪಾಸ್ ಮಾಡುವ ಕೆಲಸದಿಂದಲ್ಲ. ಬದಲಾಗಿ ಬೆವರಿನಲ್ಲಿ ನಿತ್ಯ ಸ್ನಾನ ಮಾಡಿ ಕೆಲಸ ಮಾಡುವ ಇಂಥ ಕಾರ್ಮಿಕರೊಂದಿಗೆ

ಗಣಿಗಾರಿಕೆ ನಡೆಸುವ ಪ್ರದೇಶಗಳಲ್ಲಿ ಭೂಮಿ ತೋಡುವ ಕಾರ್ಮಿಕರನ್ನು ನೀವು ನೋಡಿರಬಹುದು. ನೀಲಿ ಬಟ್ಟೆಗಳನ್ನು ಧರಿಸಿ ತಲೆ ಮೇಲೆ ಹೆಲ್ಮೆಟ್ ಹಾಕಿಕೊಂಡು ಸದಾ ತಮ್ಮ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರಿವರು.

ರತನ್ ಟಾಟಾ ತಮ್ಮ ವೃತ್ತಿ ಬದುಕು ಆರಂಭಿಸಿದ್ದು, ಜೆಮ್‌ಶೆಡ್‌ಪುರದ ಟಾಟಾ ಸ್ಟೀಲ್ ಕಂಪೆನಿಯ ಐಷಾರಾಮಿ ಕೊಠಡಿಯೊಂದರಲ್ಲಿ ಕುಳಿತು ಫೈಲ್‌ಗಳನ್ನು ನೋಡಿ ಆರ್ಡರ್‌ಗಳನ್ನು ಪಾಸ್ ಮಾಡುವ ಕೆಲಸದಿಂದಲ್ಲ. ಬದಲಾಗಿ ಬೆವರಿನಲ್ಲಿ ನಿತ್ಯ ಸ್ನಾನ ಮಾಡಿ ಕೆಲಸ ಮಾಡುವ ಇಂಥ ಕಾರ್ಮಿಕರೊಂದಿಗೆ ತಮ್ಮ ವೃತ್ತಿ ಆರಂಭಿಸಿದ್ದರು ರತನ್.

ಅಂದರೆ ಕಚ್ಚಾ ಉಕ್ಕು ಹಾಗೂ ಕಬ್ಬಿಣದ ಅದಿರುಗಳನ್ನು ತೋಡುವುದು. ಗುಡ್ಡೆ ಮಾಡಿದ ಅದಿರನ್ನು ಹೊತ್ತುಕೊಂಡು ಬೇರೆಡೆ ಸಾಗಿಸುವುದು. ಅಷ್ಟೇ ಅಲ್ಲ ಸುಡುವ ಕುಲುಮೆಗಳ ಬಳಿ ನಿಂತು ಕಾರ್ಮಿಕರಂತೆಯೇ ಮತ್ತೊಬ್ಬ ಕಾರ್ಮಿಕನ ರೀತಿ ಅದಿರು ಸಂಸ್ಕರಣೆ ಕೆಲಸ ಮಾಡಿದ್ದರು ರತನ್ ಟಾಟಾ. ಕೋಟಿಕೋಟಿ ಲೆಕ್ಕದಲ್ಲಿ ಬಂಡವಾಳ ಹೂಡಿ ಉದ್ದಿಮೆ ನಡೆಸುತ್ತಿರುವ ಮಾಲೀಕರ ಮಗ ತಮ್ಮದೇ ಕಂಪೆನಿಯಲ್ಲಿ ಮೊದಲಿಗೆ ಕಾರ್ಮಿಕರಂತೆ ದುಡಿದಿದ್ದರು ಎಂದರೆ ಅಂದರೆ ಎಂಥವರಿಗೂ ನಂಬುವುದಕ್ಕೆ ಕಷ್ಟ. ಆದರೆ ಇದು ನಿಜ.

Share this article