ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ದಿಗಂತರ ಕಂಪನಿಯ ವಿಶ್ವದ ಮೊದಲ ಬಾಹ್ಯಾಕಾಶ ಸರ್ವೇಕ್ಷಣಾ ಉಪಗ್ರಹ ಕಾರ್ಯಾರಂಭ

Published : Mar 09, 2025, 06:54 AM IST
Startup Digantara Research and Technologies

ಸಾರಾಂಶ

ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ದಿಗಂತರ ಕಂಪನಿಯು ವಿಶ್ವದ ಮೊದಲ ಬಾಹ್ಯಾಕಾಶ ಕಣ್ಗಾವಲು (ಸರ್ವೇಕ್ಷಣಾ) ಉಪಗ್ರಹವನ್ನು ನಿಯೋಜಿಸಿದ್ದು, ಅದು ಶನಿವಾರದಿಂದ ಕಾರ್ಯನಿರ್ವಹಿಸಲು ಆರಂಭಿಸಿದೆ

ನವದೆಹಲಿ: ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ದಿಗಂತರ ಕಂಪನಿಯು ವಿಶ್ವದ ಮೊದಲ ಬಾಹ್ಯಾಕಾಶ ಕಣ್ಗಾವಲು (ಸರ್ವೇಕ್ಷಣಾ) ಉಪಗ್ರಹವನ್ನು ನಿಯೋಜಿಸಿದ್ದು, ಅದು ಶನಿವಾರದಿಂದ ಕಾರ್ಯನಿರ್ವಹಿಸಲು ಆರಂಭಿಸಿದೆ. ಇದು ಭೂಮಿಯ ಸುತ್ತ ಇರುವ ಕಕ್ಷೆಯಲ್ಲಿನ 5 ಸೆಂ.ಮೀ.ನಷ್ಟು ಸಣ್ಣ ವಸ್ತುವಿನ ಮೇಲೆಯೂ ಕಣ್ಣಿಡುವ ಸಾಮರ್ಥ್ಯ ಹೊಂದಿದೆ.

ದಿಗಂತರದ ಎಸ್‌ಸಿಒಟಿ( ವಸ್ತುಗಳ ಜಾಡು ಹಿಡಿಯಲು ಬಾಹ್ಯಾಕಾಶ ಕ್ಯಾಮೆರಾ) ಉಪಗ್ರಹವನ್ನು ಅಮೆರಿಕದ ಸ್ಪೇಸ್‌ಎಕ್ಸ್‌ನ ಟ್ರಾನ್ಸ್‌ಪೋರ್ಟರ್‌-12 ರಾಕೆಟ್‌ನಲ್ಲಿ ಜ.14ರಂದು ಉಡಾವಣೆ ಮಾಡಲಾಗಿತ್ತು. ಈ ಉಪಗ್ರಹವು ದಕ್ಷಿಣ ಅಮೆರಿಕದಲ್ಲಿರುವ ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನ ಮೊದಲ ಚಿತ್ರವನ್ನು ಸೆರೆಹಿಡಿದು ರವಾನಿಸಿದೆ.

ಈ ಕುರಿತು ಮಾತನಾಡಿದ ದಿಗಂತರದ ಸಿಇಒ ಅನಿರುದ್ಧ್‌ ಶರ್ಮಾ, ‘ಎಸ್‌ಸಿಒಟಿ ಉಪಗ್ರಹದ ಮೊದಲ ಫೋಟೋ ತಾಂತ್ರಿಕ ಮೈಲುಗಲ್ಲಿಗೂ ಮಿಗಿಲಾದುದು. ಇದು ನಮ್ಮ ತಂಡದ ಸ್ಥಿತಿಸ್ಥಾಪಕತ್ವ ಹಾಗೂ ಭವಿಷ್ಯದ ಪೀಳಿಗೆಗಳಿಗಾಗಿ ಭೂಮಿಯ ಕಕ್ಷೆಯನ್ನು ಕಾಪಾಡುವ ಬದ್ಧತೆಯ ಚಿಹ್ನೆಯಾಗಿದೆ’ ಎಂದಿದ್ದಾರೆ.

ಇದರ ಪ್ರಯೋಜನವೇನು?:

ಬಾಹ್ಯಾಕಾಶದಲ್ಲಿ ಬಳಕೆಗೆ ಬಾರದ ಉಪಗ್ರಹಗಳ ಭಾಗಗಳಂತಹ ಕಸ ಹೆಚ್ಚಿದ್ದು, ಅದರ ಮೇಲೆ ಕಣ್ಣಿಡಲು ಈ ಉಪಗ್ರಹ ಸಹಕಾರಿಯಾಗಿದೆ. ಪ್ರಸ್ತುತವಿರುವ ಸೆನ್ಸರ್‌ಗಳಿಗೆ ಇರುವ ಹವಾಮಾನ, ಭೌಗೋಳಿಕ ವ್ಯತ್ಯಾಸಗಳು ಸೇರಿದಂತೆ ಹಲವು ಅಡಚಣೆಗಳು ಎಸ್‌ಸಿಒಟಿ ಉಪಗ್ರಹಕ್ಕಿರುವುದಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಾರತದಲ್ಲಿ ಹಲವರ ವಾಟ್ಸಾಪ್‌ಖಾತೆ ದಿಢೀರ್‌ ಬ್ಲಾಕ್‌, ಆಕ್ರೋಶ
ಚಂದ್ರನ ಮೇಲೆ ನಾಳೆ ಸ್ಪೇಸ್‌ ಎಕ್ಸ್‌ನ ರಾಕೆಟ್‌ ಕ್ರ್ಯಾಶ್‌