ದಿಲ್ಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಮಹಿಳೆಯರಿಗೆ 2500 ರು. ಮಾಸಾಶನಕ್ಕೆ ಅಸ್ತು

ಸಾರಾಂಶ

ದೆಹಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಮಹಿಳೆಯರಿಗೆ ಮಾಸಿಕ 2500 ರು. ನೆರವು ನೀಡುವ ಮಹಿಳಾ ಸಮೃದ್ಧಿ ಯೋಜನೆಗಾಗಿ 5100 ಕೋಟಿ ರು. ಅನುದಾನ ಮೀಸಲಿಡಲು ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ.

 ನವದೆಹಲಿ: ದೆಹಲಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಮಹಿಳೆಯರಿಗೆ ಮಾಸಿಕ 2500 ರು. ನೆರವು ನೀಡುವ ಮಹಿಳಾ ಸಮೃದ್ಧಿ ಯೋಜನೆಗಾಗಿ 5100 ಕೋಟಿ ರು. ಅನುದಾನ ಮೀಸಲಿಡಲು ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ.

ಮಹಿಳಾ ದಿನಾಚರಣೆ ವೇಳೆಯೇ ಈ ವಿಷಯ ತಿಳಿಸಿದ ದೆಹಲಿ ಸಿಎಂ ರೇಖಾ ಗುಪ್ತಾ, ಅವರು, ‘ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನಾವು ನೀಡಿದ್ದ ಭರವಸೆಗೆ ಸಭೆಯಲ್ಲಿ ಸಂಪುಟ ಅನುಮೋದನೆ ನೀಡಿದೆ. ದೆಹಲಿಯ ಬಡ ಮಹಿಳೆಯರಿಗೆ ಬೆಂಬಲ ನೀಡುವ ಯೋಜನೆಗೆ ಅನುಮೋದನೆ ದೊರೆತಿದೆ’ ಎಂದರು.

ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾ.8ರಂದೇ ಯೋಜನೆ ಜಾರಿಗೆ ತರಬೇಕು ಎನ್ನುವ ಆಗ್ರಹವಿತ್ತು. ಅದರೆ ಅದು ಸಾಧ್ಯವಾಗಲಿಲ್ಲ.

ನಡ್ಡಾ ಶ್ಲಾಘನೆ:

ಮಹಿಳಾ ಸಮೃದ್ಧಿ ಯೋಜನೆಗೆ 5100 ಕೋಟಿ ರು. ಅನುದಾನ ಮೀಸಲಿರಿಸುವುದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶ್ಲಾಘಿಸಿದ್ದು, ‘ದೆಹಲಿಯಲ್ಲಿ ಮಹಿಳಾ ಸಬಲೀಕರಣ ಈಗ ಪ್ರಾರಂಭವಾಗಿದೆ. ಮಹಿಳೆಯರಿಲ್ಲದೆ ದೆಹಲಿ ಗೆಲುವು ಸಾಧ್ಯವಾಗುತ್ತಿರಲಿಲ್ಲ’ ಎಂದಿದ್ದಾರೆ.

Share this article