ಗೋದಾವರಿ: ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಸೊಂಟ ಮಟ್ಟದ ಆಳಕ್ಕೆ, ನೆರೆಯ ನೀರಿನಲ್ಲಿ ಮುಳುಗಿ ಸಂತ್ರಸ್ತರ ಅಹವಾಲು ಆಲಿಸಿದರು. ಬುಧವಾರ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೆಪಲ್ಲಿ ಗ್ರಾಮಾಂತರ ಮಂಡಲದ ನಂದಮೂರು ಗ್ರಾಮದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಬೆಳೆಗಳನ್ನು ಅವರು ಪರಿಶೀಲಿಸಿದರು ಹಾಗೂ ನಂತರ ಪ್ರವಾಹದ ನೀರಿನಲ್ಲಿ ಸೊಂಟ ಮಟ್ಟದ ಆಳಕ್ಕೆ ಇಳಿದು ಜನರ ಕಷ್ಟ ಸುಖ ವಿಚಾರಿಸಿದರು.
ಚಿನ್ನದ ಮೇಲಿನ ಸುಂಕ ಕಡಿತ:ಎರಡು ದಿನದಲ್ಲಿ ₹4000 ಇಳಿಕೆನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಚಿನ್ನ ಬೆಳ್ಳಿ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿದ ಫಲವಾಗಿ ಸತತ ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆಯಾಗಿದೆ. ಬುಧವಾರ 650 ರು. ಇಳಿಕೆಯಾಗಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 71,650 ರು.ಗೆ ತಲುಪಿದೆ. ಮಂಗಳವಾರ 3350 ರು. ಕಡಿಮೆಯಾಗಿತ್ತು. ಶೇ.99.9 ಶುದ್ಧ ಚಿನ್ನ 10 ಗ್ರಾಂಗೆ 71,650 ರು., ಮತ್ತು ಶೇ.99.5 ಶುದ್ಧತೆಯದ್ದು 10 ಗ್ರಾಂಗೆ 71,300 ರು.ಗೆ ತಲುಪಿದೆ. ಎರಡೂ ದಿನ ಸೇರಿ ಒಟ್ಟು 4000 ರು. ಇಳಿದಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.