ಪರ್ಮಿಟ್‌ ಇಲ್ಲದೆ ಸಂಚರಿಸುತ್ತಿದ್ದ 32 ಖಾಸಗಿ ಬಸ್ಸುಗಳ ವಶ

KannadaprabhaNewsNetwork |  
Published : Nov 27, 2025, 01:02 AM IST
೨೬ಕೆಎಲ್‌ಆರ್-೭ಆಲ್ ಇಂಡಿಯಾ ಅನುಮತಿ ಪಡೆದು ರಾಜ್ಯದ ಪರವಾನಗೆ ಇಲ್ಲದೆ ಸಂಚಾರ ಮಾಡುತ್ತಿದ್ದ ಐಷರಾಮಿ ಸ್ಲೀಪರ್ ಕೋಚ್, ಅಂತರರಾಜ್ಯ ಖಾಸಗಿ ಪ್ರವಾಸಿ ಬಸ್‌ಗಳನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿರುವುದು. | Kannada Prabha

ಸಾರಾಂಶ

ಆಲ್ ಇಂಡಿಯಾ ಪರ್ಮಿಟ್‌ ಪಡೆದು ರಾಜ್ಯದ ಪರ್ಮಿಟ್‌ ಇಲ್ಲದೆ ಸಂಚಾರ ಮಾಡುತ್ತಿದ್ದ ಐಷರಾಮಿ ಸ್ಲೀಪರ್ ಕೋಚ್, ಅಂತರರಾಜ್ಯ ಖಾಸಗಿ ಪ್ರವಾಸಿ ಬಸ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ನೋಂದಣಿ ಆಗಿರುವ, ಸಮರ್ಪಕ ಹಾಗೂ ಸುಸ್ಥಿಯಲ್ಲಿ ಇಲ್ಲದೆ ಸ್ಲೀಪರ್ ಹಾಗೂ ಹೈಟೆಕ್ ಬಸ್‌ಗಳಿಗೆ ದಂಡ ವಿಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಬೆಳಂಬೆಳಗ್ಗೆ ಆರ್‌ಟಿಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ರಾಜ್ಯಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದ ಖಾಸಗಿ ಬಸ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಮುಂಜಾನೆ ೪ ಗಂಟೆಗೆ ಬೆಂಗಳೂರು- ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಚರಣೆ ನಡೆಸಿ ಸುಮಾರು ೩೨ ಬಸ್‌ಗಳನ್ನ ಸೀಜ್ ಮಾಡಿದರು.ಆಲ್ ಇಂಡಿಯಾ ಪರ್ಮಿಟ್‌ ಪಡೆದು ರಾಜ್ಯದ ಪರ್ಮಿಟ್‌ ಇಲ್ಲದೆ ಸಂಚಾರ ಮಾಡುತ್ತಿದ್ದ ಐಷರಾಮಿ ಸ್ಲೀಪರ್ ಕೋಚ್, ಅಂತರರಾಜ್ಯ ಖಾಸಗಿ ಪ್ರವಾಸಿ ಬಸ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ನೋಂದಣಿ ಆಗಿರುವ, ಸಮರ್ಪಕ ಹಾಗೂ ಸುಸ್ಥಿಯಲ್ಲಿ ಇಲ್ಲದೆ ಸ್ಲೀಪರ್ ಹಾಗೂ ಹೈಟೆಕ್ ಬಸ್‌ಗಳಿಗೆ ದಂಡ ವಿಧಿಸಲಾಗಿದೆ.

ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ

ಒಂದೊಂದು ಬಸ್ ಲಕ್ಷಾಂತರ ರುಪಾಯಿ ತೆರಿಗೆ ಹಣ ಬಾಕಿ ಉಳಿಸಿಕೊಂಡಿದ್ದು, ಬಸ್ ಮಾಲೀಕರಿಗೆ ಬಿಸಿ ಮುಟ್ಟಿಸಿರುವ ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಗಾಯತ್ರಿ ದೇವಿ ನೇತೃತ್ವದ ೧೫ ಮಂದಿ ಆರ್‌ಟಿಓಗಳಿದ್ದ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ ೩೫ ಕ್ಕೂ ಹೆಚ್ಚು ಐಶಾರಾಮಿ, ಸ್ಲೀಪರ್, ಹೈಟೆಕ್ ಬಸ್‌ಗಳನ್ನ ಜಪ್ತಿ ಮಾಡಿದೆ. ಈ ಬಸ್ಸುಗಳಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕರನ್ನ ಸಾರಿಗೆ ಇಲಾಖೆ ಅಧಿಕಾರಿಗಳು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಳುಹಿಸುವ ವ್ಯವಸ್ಥೆ ಮಾಡಿದರು.

ಇದೇ ವೇಳೆ ಮಾತನಾಡಿದ ಜಂಟಿ ಆಯುಕ್ತೆ ಗಾಯತ್ರಿ ದೇವಿ, ಆಲ್ ಇಂಡಿಯಾ ಟೂರಿಸ್ಟ್ ಪರ್ಮಿಟ್ ಪಡೆದು ರಾಜ್ಯದಲ್ಲಿ ಕೆಲ ಬಸ್‌ಗಳು ಓಡಾಟ ನಡೆಸುತ್ತಿವೆ ಅನ್ನೋ ಮಾಹಿತಿ ಆಧರಿಸಿ ಇಂದು ಕಾರ್ಯಚರಣೆ ನಡೆಸಲಾಗಿದೆ. ರಾಜ್ಯ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಪಾವತಿಸುತ್ತಿಲ್ಲ, ನಮ್ಮ ರಸ್ತೆಗಳನ್ನು ಬಳಸುತ್ತಾರೆ ಆದರೆ ತೆರಿಗೆ ಕಟ್ಟುತ್ತಿಲ್ಲ ಕೆಲ ಬಸ್‌ಗಳು ಎಫ್‌ಸಿ ಕೂಡ ಮಾಡಿಲ್ಲ, ರಾಜ್ಯದ ಬಹುತೇಕ ಚೆಕ್ ಪೋಸ್ಟ್‌ಗಳಲ್ಲಿ ಪರಿಶೀಲನೆ ಆರಂಭಿಸಲಾಗಿದೆ ಎಂದರು.ಬಸ್‌ನಲ್ಲಿ ಸೌಲಭ್ಯ ಕೊರತೆ

ಅಪಘಾತ ಅವಘಡ ಸಂದರ್ಭದಲ್ಲಿ ಇರಬೇಕಾದ ಕನಿಷ್ಠ ಸೌಲಭ್ಯಗಳನ್ನೂ ಈ ಪ್ರವಾಸಿ ಬಸ್‌ಗಳಲ್ಲಿ ಅಳವಡಿಸಿಲ್ಲ, ತುರ್ತು ನಿರ್ಗಮನ ದ್ವಾರಗಳು ಅಸಮರ್ಪಕವಾಗಿವೆ. ಅಲ್ಲದೆ ನಿಯಮಗಳನ್ನ ಪಾಲಿಸದೆ, ಅವಘಡ ಅನಾಹುತ ಸಂದರ್ಭಗಳಲ್ಲಿ ಬಳಕೆ ಮಾಡಬೇಕಾದ ವಸ್ತುಗಳನ್ನು ಇಟ್ಟಿಲ್ಲ, ಬಸ್ ಮಾಲೀಕರಿಗೆ ಕೇವಲ ಆದಾಯದ ಬಗ್ಗೆ ಮಾತ್ರ ಗಮನ ಇದೆ. ಪ್ರಯಾಣಿಕರ ಸುರಕ್ಷತೆಗೆ ಗಮನ ನೀಡುತ್ತಿಲ್ಲ ಎಂದರು.ಕೋಲಾರದಲ್ಲಿ ೩೦ ಬಸ್‌ಗಳನ್ನ ಜಪ್ತಿ ಮಾಡಿದ್ದೇವೆ, ಈ ಕಾರ್ಯಾಚರಣೆ ಇಲ್ಲಿಗೆ ನಿಲ್ಲುವುದಿಲ್ಲ, ಇದು ಮುಂದುವರೆಯಲಿದ್ದು, ರಾಜ್ಯಕ್ಕೆ ನೀಡಬೇಕಾದ ತೆರಿಗೆ ವಸೂಲಿ ಮಾಡಲಾಗುವುದು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ