ಶ್ರವಣಬೆಳಗೊಳಕ್ಕೆ ಮುನಿಗಳ ತಂಡ ಆಗಮನ

KannadaprabhaNewsNetwork |  
Published : Jun 27, 2025, 12:48 AM IST
26ಎಚ್ಎಸ್ಎನ್4 :  | Kannada Prabha

ಸಾರಾಂಶ

ಶ್ರವಣಬೆಳಗೊಳ ಕ್ಷೇತ್ರಕ್ಕೆ ಆಗಮಿಸಿದ ಆಚಾರ್ಯಶ್ರೀ 108 ವರ್ಧಮಾನ ಸಾಗರ ಮಹಾರಾಜರು ಮತ್ತು ಮುನಿಶ್ರೀ 108 ವಿದ್ಯಾಸಾಗರ ಮಹಾರಾಜರು ಹಾಗೂ ಸಂಘಸ್ಥ ತ್ಯಾಗಿ ವೃಂದದವರನ್ನು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಗುರುವಾರ ಮೆರವಣಿಗೆ ಮೂಲಕ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ಪೂರ್ಣಕುಂಭ, ಮಂಗಳ ಕಲಶ, ನಾದಸ್ವರ, ಚಂಡೆವಾದ್ಯ, ನಗಾರಿ, ಚಿಟ್ಟಿಮೇಳ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಧರ್ಮಧ್ವಜ ಹಿಡಿದ ನೂರಾರು ಶ್ರಾವಕ-ಶ್ರಾವಕಿಯರು ಚಂದ್ರಗಿರಿ ಹಾಗೂ ವಿಂಧ್ಯಗಿರಿ ಮಹಾದ್ವಾರದ ಮೂಲಕ ಶ್ರೀಮಠದ ವರೆಗೆ ಜೈಕಾರದೊಂದಿಗೆ ಮೆರವಣಿಗೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶ್ರವಣಬೆಳಗೊಳ

ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಆಚಾರ್ಯಶ್ರೀ 108 ವರ್ಧಮಾನ ಸಾಗರ ಮಹಾರಾಜರು ಮತ್ತು ಮುನಿಶ್ರೀ 108 ವಿದ್ಯಾಸಾಗರ ಮಹಾರಾಜರು ಹಾಗೂ ಸಂಘಸ್ಥ ತ್ಯಾಗಿ ವೃಂದದವರನ್ನು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಗುರುವಾರ ಮೆರವಣಿಗೆ ಮೂಲಕ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು.

ಪಟ್ಟಣದ ಬಾಹುಬಲಿ ಕಾಲೇಜು ವೃತ್ತದಿಂದ ಪೂರ್ಣಕುಂಭ, ಮಂಗಳ ಕಲಶ, ನಾದಸ್ವರ, ಚಂಡೆವಾದ್ಯ, ನಗಾರಿ, ಚಿಟ್ಟಿಮೇಳ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಧರ್ಮಧ್ವಜ ಹಿಡಿದ ನೂರಾರು ಶ್ರಾವಕ-ಶ್ರಾವಕಿಯರು ಚಂದ್ರಗಿರಿ ಹಾಗೂ ವಿಂಧ್ಯಗಿರಿ ಮಹಾದ್ವಾರದ ಮೂಲಕ ಶ್ರೀಮಠದ ವರೆಗೆ ಜೈಕಾರದೊಂದಿಗೆ ಮೆರವಣಿಗೆ ನಡೆಸಿದರು. ಆಚಾರ್ಯಶ್ರೀ ಸುವಿಧಿಸಾಗರ ಮಹಾರಾಜರು, ಮುನಿಶ್ರೀ ಅನುಪಮಕೀರ್ತಿ ಮಹಾರಾಜರು, ಮುನಿಶ್ರೀ ಸುದೇಯಸಾಗರ ಮಹಾರಾಜರು, ಶ್ರಮಣಶ್ರೀ ಧರ್ಮಸಾಗರ ಮಹಾರಾಜರು, ಶ್ರಮಣಶ್ರೀ ವಿದ್ಯಾಸಾಗರ ಮಹಾರಾಜರು, ಶ್ರಮಣಶ್ರೀ ಸಿದ್ಧಾಂತಸಾಗರ ಮಹಾರಾಜರು, ಮುನಿಶ್ರೀ ಪ್ರಶಾಂತಸಾಗರ ಮಹಾರಾಜರು, ಮುನಿಶ್ರೀ ಗುಣಸಾಗರ ಮಹಾರಾಜರು, ಮುನಿಶ್ರೀ ಶ್ರುತಸಾಗರ ಮಹಾರಾಜರು, ಮುನಿಶ್ರೀ ನಿರ್ಭಯಸಾಗರ ಮಹಾರಾಜರು, ಮುನಿಶ್ರೀ ಅಮಿತಸಾಗರ ಮಹಾರಾಜರು, ಮುನಿಶ್ರೀ ಅವಿಚಲಸಾಗರ ಮಹಾರಾಜರು, ಮುನಿಶ್ರೀ ವೃಷಭಸಾಗರ ಮಹಾರಾಜರು, ಮುನಿಶ್ರೀ ಶಾಶ್ವತಸಾಗರ ಮಹಾರಾಜರು, ಮುನಿಶ್ರೀ ನಮಿಸಾಗರ ಮಹಾರಾಜರು, ಮುನಿಶ್ರೀ ನಿರ್ಲೋಭಸಾಗರ ಮಹಾರಾಜರು, ಮುನಿಶ್ರೀ ಸಿದ್ಧಸಾಗರ ಮಹಾರಾಜರು, ಮುನಿಶ್ರೀ ಸುಪ್ರಭಸಾಗರ ಮಹಾರಾಜರು, ಮುನಿಶ್ರೀ ಸುಚರ್ಯಸಾಗರ ಮಹಾರಾಜರು, ಮುನಿಶ್ರೀ ಸುಖಸಾಗರ ಮಹಾರಾಜರು, ಮುನಿಶ್ರೀ ಆಧ್ಯಾತ್ಮಸಾಗರ ಮಹಾರಾಜರು, ಮುನಿಶ್ರೀ ಆಗಮಸಾಗರ ಮಹಾರಾಜರು, ಮುನಿಶ್ರೀ ವಿರಾಟಸಾಗರ ಮಹಾರಾಜರು, ಮುನಿಶ್ರೀ ಅನೇಕಾಂತಸಾಗರ ಮಹಾರಾಜರು, ಗಣಿನಿ ಆರ್ಯಕಾಶ್ರೀ ಸುವಿಧಿಮತಿ ಮಾತಾಜಿ, ಆರ್ಯಿಕಾಶ್ರೀ ಶಿವಮತಿ ಮಾತಾಜಿ, ಆರ್ಯಿಕಾಶ್ರೀ ನಿರ್ಮಲಮತಿ ಮಾತಾಜಿ, ಆರ್ಯಿಕಾಶ್ರೀ ಸುಸ್ನೇಹಮತಿ ಮಾತಾಜಿ, ಆರ್ಯಿಕಾಶ್ರೀ ಸುತೀರ್ಥಮತಿ ಮಾತಾಜಿ, ಆರ್ಯಿಕಾಶ್ರೀ ಸುಲಕ್ಷಮತಿ ಮಾತಾಜಿ, ಆರ್ಯಕಾಶ್ರೀ ಸುಲಭ್ಯಮತಿ ಮಾತಾಜಿ, ಕ್ಷುಲ್ಲಕಾಶ್ರೀ ಸುದ್ಯೇಯಮತಿ ಮಾತಾಜಿ, ಕ್ಷುಲ್ಲಕಾಶ್ರೀ ಅಮೃತಮತಿ ಮಾತಾಜಿ, ಕ್ಷುಲ್ಲಕಾಶ್ರೀ ಅಮರಜ್ಯೋತಿ ಮಾತಾಜಿಯವರನ್ನು ಕ್ಷೇತ್ರಕ್ಕೆ ಆಗಮಿಸಿದ್ದು, ಮುಂದಿನ 4 ತಿಂಗಳು ಕ್ಷೇತ್ರದಲ್ಲಿ ವಾಸ್ತವ್ಯವಿದ್ದು ಚಾತುರ್ಮಾಸ್ಯ ವ್ರತ ಆಚರಿಸಲಿದ್ದಾರೆ.

ಈ ಸಂದರ್ಭದಲ್ಲಿ ಕಂಬದಹಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಕ್ಷುಲ್ಲಕ ಶ್ರೀ ಆನಂದಕೀರ್ತಿ ಸ್ವಾಮೀಜಿ ಹಾಗೂ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ