ನಾಗರಿಕ ವೇದಿಕೆಯಿಂದ ಬೃಹತ್‌ ತಿರಂಗಾ ಯಾತ್ರೆ

KannadaprabhaNewsNetwork |  
Published : May 27, 2025, 01:52 AM IST
26ಡಿಡಬ್ಲೂಡಿ1ಪಹಲ್ಗಾಂನಲ್ಲಿ ಭಾರತೀಯರ ಮೇಲೆ ನಡೆದ ಭಯೋತ್ಪಾದನಾ ದಾಳಿ ಖಂಡಿಸಿ, ಆಪರೇಶನ್ ಸಿಂದೂರ ಹೆಮ್ಮೆಯ ಕುರಿತಾಗಿ ಧಾರವಾಡ ನಾಗರಿಕರ ವೇದಿಕೆಯು ಸೋಮವಾರ ಬೃಹತ್ ತಿರಂಗಾ ಯಾತ್ರೆ ನಡೆಸಿತು.  | Kannada Prabha

ಸಾರಾಂಶ

ದೇಶದ ರಕ್ಷಣೆಗೋಸ್ಕರ ಸೈನಿಕರು ಗಡಿಯಲ್ಲಿ ಹಗಲು- ರಾತ್ರಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಗಡಿಯೊಳಗಿನ ನಾವು ಅವರ ಕಾರ್ಯಕ್ಕೆ ಬೆಂಬಲ ನೀಡುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಮಾಡಿರುವ ತಿರಂಗಾ ಯಾತ್ರೆ ಯಶಸ್ವಿಯಾಗಿದೆ ಎಂದು ಮಾಜಿ ಸೈನಿಕರು ಹೇಳಿದರು.

ಧಾರವಾಡ: ಪಹಲ್ಗಾಂನಲ್ಲಿ ಭಾರತೀಯರ ಮೇಲೆ ನಡೆದ ಭಯೋತ್ಪಾದನಾ ದಾಳಿ ಖಂಡಿಸಿ, ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ದಾಳಿ ಮಾಡಿ, ಯೋಧರ ಪರಾಕ್ರಮ ಹಾಗೂ ಜಗತ್ತಿಗೆ ಭಾರತದ ಶಕ್ತಿಯನ್ನು ತೋರಿಸಿದ ಆಪರೇಶನ್ ಸಿಂದೂರ ಹೆಮ್ಮೆಯ ಕುರಿತಾಗಿ ಇಲ್ಲಿಯ ನಾಗರಿಕ ವೇದಿಕೆಯು ಸೋಮವಾರ ಬೃಹತ್ ತಿರಂಗಾ ಯಾತ್ರೆ ನಡೆಸಿತು.

ನಗರದ ಕೆಸಿಸಿ ಬ್ಯಾಂಕ್ ವೃತದಿಂದ ಆರಂಭವಾದ ತಿರಂಗಾ ಯಾತ್ರೆ ಮೆರವಣಿಗೆ, ವಿವೇಕಾನಂದ ವೃತ್ತದ ಮೂಲಕ ಕಲಾಭವನದ ವರೆಗೂ ಪಾದಯಾತ್ರೆ ಮಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಮಾಜಿ‌ ಸೈನಿಕರು, ವಿದ್ಯಾರ್ಥಿಗಳು ನಾಗರಿಕರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡು ತಿರಂಗಾ ಯಾತ್ರೆಯನ್ನು ಯಶಸ್ವಿಗೊಳಿಸಿದರು.

ದೇಶದ ರಕ್ಷಣೆಗೋಸ್ಕರ ಸೈನಿಕರು ಗಡಿಯಲ್ಲಿ ಹಗಲು- ರಾತ್ರಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಗಡಿಯೊಳಗಿನ ನಾವು ಅವರ ಕಾರ್ಯಕ್ಕೆ ಬೆಂಬಲ ನೀಡುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಮಾಡಿರುವ ತಿರಂಗಾ ಯಾತ್ರೆ ಯಶಸ್ವಿಯಾಗಿದೆ ಎಂದು ಮಾಜಿ ಸೈನಿಕರು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರನ್ನು ಧಾರವಾಡ ನಾಗರಿಕರ ವೇದಿಕೆಯಿಂದ ಸನ್ಮಾನಿಸಲಾಯಿತು.

ಈ ಯಾತ್ರೆಯಲ್ಲಿ ಶಾಸಕ, ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಪಾಲಿಕೆ ಸದಸ್ಯ ಶಂಕರ ಶೇಳಕೆ, ವಿಜಯಾನಂದ ಶೆಟ್ಟಿ ಹಾಗೂ ಬಿಜೆಪಿ ಮುಖಂಡರಾದ ಬಸವರಾಜ ಗರಗ, ಮಂಜು ಮಲ್ಲಿಗವಾಡ, ರಾಜೇಶ್ವರಿ ಸಾಲಗಟ್ಟಿ, ಪುಷ್ಪಾ ನವಲಗುಂದ, ಮಲ್ಲಿಕಾರ್ಜುನ ಹೊರಕೇರಿ, ಮೋಹನ ರಾಮದುರ್ಗ, ಶಕ್ತಿ ಹಿರೇಮಠ, ವಿಷ್ಣು ಕೊರ್ಲಹಳ್ಳಿ, ಪ್ರಮೋದ ಕಾರಕೂನ, ಮಂಜುನಾಥ ನಡ್ಡಟ್ಟಿ, ಸಿದ್ದು ಕಲ್ಯಾಣ ಶಟ್ಟಿ, ಅಮಿತ ಪಾಟೀಲ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ