ಇಂದು ಸಾವಿರಾರು ಸ್ಮಾರಕಗಳಿರುವ ಕಾರಣ ಪ್ರವಾಸೋದ್ಯಮ ವಿಫುಲವಾಗಿ ಬೆಳೆದಿದೆ, ಶತಶತಮಾನಗಳಿಂದಲೂ ಸ್ಮಾರಕಗಳ ಉಪಯೋಗ ಸಾಧ್ಯವಾಗುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸ್ಮಾರಕಗಳಿಂದ ಕೇವಲ ಇತಿಹಾಸ ಅಷ್ಟೇ ಅಲ್ಲದೇ ಅನೇಕ ಸಂಗತಿಗಳ ಪರಿಚಯವಾಗುತ್ತದೆ. ಸ್ಮಾರಕಗಳು ಇತಿಹಾಸ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪದ ಭವ್ಯತೆ ಪ್ರತಿಬಿಂಬಿಸುವ ಸ್ವರೂಪಗಳು ಎಂದು ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಹೇಳಿದರು.ನಗರದಲ್ಲಿ ಇಂಟ್ಯಾಚ್ವಿ ಜಿಲ್ಲಾ ಘಟಕ, ಡಾ.ಫ.ಗು.ಹಳಕಟ್ಟಿ ಇಂಜನಿಯರಿಂಗ್ ಮಹಾವಿದ್ಯಾಲಯ ಹಾಗೂ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ವತಿಯಿಂದ ನಡೆದ ಐತಿಹಾಸಿಕ ಸ್ಮಾರಕಗಳ ಪ್ರಗತಿ ಕುರಿತು ಚಿಂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದು ಸಾವಿರಾರು ಸ್ಮಾರಕಗಳಿರುವ ಕಾರಣ ಪ್ರವಾಸೋದ್ಯಮ ವಿಫುಲವಾಗಿ ಬೆಳೆದಿದೆ, ಶತಶತಮಾನಗಳಿಂದಲೂ ಸ್ಮಾರಕಗಳ ಉಪಯೋಗ ಸಾಧ್ಯವಾಗುತ್ತಿದೆ ಎಂದರು. ವಿಜಯಪುರದ ಪ್ರಾಚೀನ ಸ್ಮಾರಕಗಳು ನಮ್ಮ ಸಾಂಸ್ಕೃತಿಕ ಹಿರಿಮೆ ಎತ್ತಿತೋರಿಸುತ್ತವೆ. ಆಗಿನ ಕಾಲದ ಅವರ ದೃಷ್ಟಿಕೋನ, ಕಲಾಕೌಶಲ್ಯ ಮತ್ತುಅಭಿವ್ಯಕ್ತಿ ಸಾಮರ್ಥ್ಯ ಈ ಗುಣಗಳು ನಮ್ಮ ಕಲಿಕೆಯಲ್ಲಿ ಮತ್ತು ಬದುಕಿನಲ್ಲಿ ಅಳವಡಿಸಿಕೊಂಡರೆ ಸಾರ್ಥಕ ಬದುಕು ಸಾಧಿಸಿದಂತೆ ಎಂದರು.
ದಿನದರ್ಶಿಕೆ ಬಿಡುಗಡೆ ಮಾಡಿದ ಡಾ.ಫ.ಗು. ಹಳಕಟ್ಟಿ ಇಂಜನಿಯರಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿ.ಜಿ. ಸಂಗಮ ಮಾತನಾಡಿ, ಸ್ಮಾರಕಗಳು ಇತಿಹಾಸದ ಪ್ರತಿಬಿಂಬ, ಆಗಿನ ಕಾಲದ ರಾಜರ ಭವ್ಯ ವಾಸ್ತುಶೈಲಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಐತಿಹಾಸಿಕ ಸ್ಮಾರಕಗಳನ್ನು ಮುಂದಿನ ಪೀಳಿಗೆಗಳು ನೋಡುವಂತೆ ಅವುಗಳನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ಅವುಗಳ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದರು.
ದಿನದರ್ಶಿಕೆಯನ್ನ ವಿನ್ಯಾಸಗೊಳಿಸಿದ ಪ್ರೊ.ಮಂಥನ ಜೋಶಿ ಅವರನ್ನು ಸತ್ಕರಿಸಲಾಯಿತು. ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಂ.ಎಸ್. ಮದಭಾವಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಜಲ ಹೋರಾಟಗಾರ ಪೀಟರ್ ಅಲೆಕ್ಸಾಂಡರ್, ವಿಶಾಲ ಕುಂಬಾರ, ಡಾ.ವಿ.ಡಿ. ಐಹೊಳ್ಳಿ, ಪ್ರೊ.ವಿಠ್ಠಲ ಟಂಟಕಸಾಲಿ, ಪ್ರೊ.ಎ.ಬಿ.ಬೂದಿಹಾಳ, ಸತೀಶ ನಡುವಿನಮನಿ, ಪ್ರೊ. ಗಂಗಾರೆಡ್ಡಿ, ಪ್ರೊ.ಅಖಿಲಾ ಹಾವರಗಿ, ಪ್ರೊ.ಸೃತಿ ಪಂಥ, ಪ್ರೊ.ಸಹಿವಾ ಪಠಾಣ, ಪ್ರೊ.ದೇಶಮುಖ, ಗೌತಮ ಇನಾಮದಾರ, ಅಮೀನ ಹುಲ್ಲೂರ, ಇನಾಮದಾರ ಮುಂತಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.