ಹಿಂದು ಕಾರ್ಯಕರ್ತನ ಬಂಧನ ಖಂಡನೀಯ

KannadaprabhaNewsNetwork |  
Published : Jan 04, 2024, 01:45 AM IST
ಕೂಚಬಾಳ ಆಕ್ರೋಶ  | Kannada Prabha

ಸಾರಾಂಶ

ಳೆದ 30 ವರ್ಷ ಹಳೆಯ ಕೇಸನ್ನು ಮತ್ತೆ ಪ್ರಾರಂಭಿಸಿ ಶ್ರೀಕಾಂತ ಪೂಜಾರಿ ಎಂಬ ಹಿಂದು ಕಾರ್ಯಕರ್ತನ ಬಂಧನ ನಾವು ಉಗ್ರವಾಗಿ ಖಂಡಿಸುತ್ತೇವೆ. ಅಯೋಧ್ಯೆಯಲ್ಲಿ ಜ.೨೨ ರಂದು ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗುವ ಶುಭ ಸಂದರ್ಭದಲ್ಲಿ ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಇರುವುದು ಕಾಂಗ್ರೆಸ್ಸಿಗರಿಗೆ ನೋಡಲಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ 30 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಅಯೋಧ್ಯೆ ರಾಮ ಮಂದಿರಕ್ಕಾಗಿ ನಡೆದ ಪ್ರತಿಭಟನೆ ಹಳೆಯ ಪ್ರಕರಣ ಮತ್ತೆ ಪ್ರಾರಂಭಿಸಿ ಹಿಂದು ಕಾರ್ಯಕರ್ತರನ್ನು ಬಂಧಿಸಿರುವುದು, ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂಬುದನ್ನು ಸಾಬೀತು ಪಡಿಸುತ್ತಿದೆ ಎಂದು ಜಿಲ್ಲಾಧ್ಯಕ್ಷ ಆರ್‌.ಎಸ್.ಪಾಟೀಲ ಕೂಚಬಾಳ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಹಳೆಯ ಪ್ರಕರಣದವೊಂದಕ್ಕೆ ಸಂಬಂಧಿಸಿದಂತೆ ಹಿಂದು ಕಾರ್ಯಕರ್ತ ಶ್ರೀಕಾಂತ ಪೂಜಾರಿಯ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ರ್ಯಾಲಿ ನಡೆಸಿದರು. ಕಾರ್ಯಕರ್ತರು ನಗರದ ಗಾಂಧಿ ವೃತ್ತದಿಂದ ಹಲಗಿ ಬಾರಿಸುವ ಮೂಲಕ ಪ್ರಮುಖ ರಸ್ತೆ ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತದ ಮೂಲಕ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಕಳೆದ 30 ವರ್ಷ ಹಳೆಯ ಕೇಸನ್ನು ಮತ್ತೆ ಪ್ರಾರಂಭಿಸಿ ಶ್ರೀಕಾಂತ ಪೂಜಾರಿ ಎಂಬ ಹಿಂದು ಕಾರ್ಯಕರ್ತನ ಬಂಧನ ನಾವು ಉಗ್ರವಾಗಿ ಖಂಡಿಸುತ್ತೇವೆ. ಅಯೋಧ್ಯೆಯಲ್ಲಿ ಜ.೨೨ ರಂದು ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗುವ ಶುಭ ಸಂದರ್ಭದಲ್ಲಿ ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಇರುವುದು ಕಾಂಗ್ರೆಸ್ಸಿಗರಿಗೆ ನೋಡಲಾಗುತ್ತಿಲ್ಲ. ಮೊದಲಿನಿಂದ ಶ್ರೀರಾಮನ ಅಸ್ತಿತ್ವ ಪ್ರಶ್ನೆ ಮಾಡುತ್ತಾ ಬಂದಿರುವ ಕಾಂಗ್ರೆಸ್, ಈಗ ಅಯೋಧ್ಯೆಯಲ್ಲಿನ ಭವ್ಯ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ದೇಶದ ವಾತಾವರಣ ಕೆಡಿಸಲು ಹುನ್ನಾರ ನಡೆಸಿದೆ ಎಂದು ದೂರಿದರು.ಮೊದಲಿನಿಂದಲೂ ಮೊಘಲರು, ಡಚ್ಚರು, ಪೋರ್ಚುಗೀಸರು ಹಾಗೂ ಬ್ರಿಟಿಷರು ಈ ದೇಶದ ಸಂಪತ್ತು ಹಾಗೂ ನಮ್ಮ ಸಂಸ್ಕೃತಿ ಹಾಳುಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಸ್ವಾತಂತ್ರ ನಂತರ ಕಾಂಗ್ರೆಸ್ ಈ ಕೆಲಸವನ್ನು ದೇಶವಿರೋಧಿ ಶಕ್ತಿಗಳ ಜೊತೆಗೂಡಿ ಮಾಡುವ ಮೂಲಕ ಅಸಂಖ್ಯಾತ ಹಿಂದುಗಳಿಗೆ ಅಪಮಾನ ಮಾಡುತ್ತಿದೆ. ಆದಿಕಾಲದಲ್ಲಿ ಒಳ್ಳೆಯ ಕೆಲಸವಾಗುತ್ತಿರುವಾಗ ಅಸುರ ಶಕ್ತಿಗಳು ಅದನ್ನು ಹಾಳುಗೆಡುವಲು ಪ್ರಯತ್ನಿಸುತ್ತಿದ್ದವು. ಹಾಗೆಯೇ ಪ್ರಸ್ತುತ ಕಾಂಗ್ರೆಸ್ ಸರ್ಕಾರ ರಾಮಜನ್ಮಭೂಮಿಯ ಉದ್ಘಾಟನೆಯ ಸಮಯದಲ್ಲಿ ಈ ರೀತಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿ ದಬ್ಬಾಳಿಕೆ ಮಾಡುತ್ತಿರುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಸುರೇಶ ಬಿರಾದಾರ, ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ಬಸವರಾಜ ಬಿರಾದಾರ, ಸಂಜೀವ ಐಹೊಳ್ಳಿ, ಸಂಜಯ ಪಾಟೀಲ ಕನಮಡಿ, ಭೀಮಾಶಂಕರ ಹದನೂರ, ಉಮೇಶ ಕೋಳಕೂರ, ಬಾಬುರಾಜೇಂದ್ರ ನಾಯಕ, ಕೃಷ್ಣಾ ಗುನಾಳಕರ, ವಿಜಯ ಜೋಶಿ, ಶಿಲ್ಪಾ ಕುದರಗೊಂಡ, ಮಲ್ಲಮ್ಮ ಜೋಗುರ, ಲಕ್ಷ್ಮೀ ಕನ್ನೊಳ್ಳಿ, ಮಹಾನಗರ ಪಾಲಿಕೆ ಸದಸ್ಯ ರಾಜು ಕುರಿಯವರ, ರಾಹುಲ ಜಾಧವ, ಎಂ.ಎಸ್.ಕರಡಿ, ಪ್ರೇಮಾನಂದ ಬಿರಾದಾರ, ಹಾಗೂ ಈರಣ್ಣ ರಾವುರ, ಭೀಮನಗೌಡ ಸಿದ್ದರಡ್ಡಿ, ಬಸವರಾಜ ಹೂಗಾರ, ರಾಜೇಶ ತವಸೆ, ಸಂದೀಪ ಪಾಟೀಲ, ಕಾಂತು ಶಿಂಧೆ, ಶ್ರೀಧರ ಬಿಜ್ಜರಗಿ, ಪಾಪುಸಿಂಗ ರಜಪೂತ, ಸಂಗಮೇಶ ಹೌದೆ, ವಿಜಯಕುಮಾರ ಕುಡಿಗನೂರ, ವಿಕ್ರಮ ಗಾಯಕವಾಡ, ಜಗದೀಶ ಮುಚ್ಚಂಡಿ, ವಿಠ್ಠಲ ನಡುವಿನಕೇರಿ, ವಿನಾಯಕ ದಹಿಂಡೆ, ಆನಂದ ಮುಚ್ಚಂಡಿ, ವಿಕಾಸ ಪದಕಿ, ಸಂಪತ್ ಕೋಹಳ್ಳಿ, ಎ.ಎಸ್.ಪಾಟೀಲ, ಶರಣು ಕಾಖಂಡಕಿ, ವಿಜಯ ಹಿರೇಮಠ, ಮಧು ಕಲಾದಗಿ, ಗುರು ದೇಶಪಾಂಡೆ, ರವಿ ಬಿರಾದಾರ ನಾಗಠಾಣ, ಸುಶ್ಮಿತಾ ವಾಡಕರ, ವಿಜಯಲಕ್ಷ್ಮೀ ರೂಗಿಮಠ, ಗಾಯತ್ರಿ ದೇವೂರ, ಮಿತಾ ದೇಸಾಯಿ, ಶರಣಬಸು ಕುಂಬಾರ, ವಾರೀಶ ಕುಲಕರ್ಣಿ, ಉದಯ ಕನ್ನೊಳ್ಳಿ, ಸೈನಾಜ, ಮಾಯಾ ಚೌಧರಿ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ