ಕನ್ನಡ ಪರ ಹೋರಾಟಗಾರರ ತಕ್ಷಣ ಬಿಡುಗಡೆಗೊಳಿಸಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ । ಕಾಂಗ್ರೆಸ್ ಸರ್ಕಾರದಿಂದ ಇಬ್ಬಗೆ ನೀತಿ
ಕನ್ನಡ ಪರ ಹೋರಾಟಗಾರರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ರಾಜ್ಯ ಸರ್ಕಾರದ ಕ್ರಮ ಅತ್ಯಂತ ಖಂಡನೀಯ. ಹೋರಾಟಗಾರರ ನ್ಯಾಯಾಂಗ ಬಂಧನಕ್ಕೊಪ್ಪಿಸುವ ಅವಶ್ಯಕತೆಯೇ ಇರಲಿಲ್ಲ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ದಾಂಧಲೆ ಮಾಡಿದವರ ಮೇಲಿನ ಪ್ರಕರಣಗಳ ಹಿಂಪಡೆಯಲು ಹೇಳುವ ಕಾಂಗ್ರೆಸ್ ಸರ್ಕಾರವು ಕನ್ನಡಕ್ಕಾಗಿ ಹೋರಾಟ ನಡೆಸಿದವರ ಬಂಧನಕ್ಕೆ ಒಪ್ಪಿಸಿದ್ದು ಸರಿಯಲ್ಲ ಎಂದರು. ಕನ್ನಡ ಪರ ಹೋರಾಟಗಾರರ ಹೋರಾಟ ನ್ಯಾಯಯುತವಾಗಿದೆ. ಭಾಷೆಗಾಗಿ ಹೋರಾಡಿದ ಹೋರಾಟಗಾರರ ಮೇಲೆ ಮತ್ತೆ ಎಂದಿಗೂ ಹೋರಾಟ ಮಾಡಬಾರದೆಂದು ಎಲ್ಲಾ ಸೆಕ್ಷನ್‌ನಡಿ ಪ್ರಕರಣ ದಾಖಲಿಸಿ ಕಾಂಗ್ರೆಸ್ ಸರ್ಕಾರ ಏನು ಸಾಧಿಸಲು ಹೊರಟಿದೆ? ಕನ್ನಡ ಭಾಷೆ ನಾಮಫಲಕದಲ್ಲಿ ಬರೆಸುವಂತೆ ಹೋರಾಡುವುದೂ ತಪ್ಪೇ ಎಂದು ಪ್ರಶ್ನಿಸಿದರು.ಆರೋಪ ಪಟ್ಟಿಯಲ್ಲೇ ಉಲ್ಲೇಖ:
ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಶಾಸಕ ಬಿ.ಪಿ.ಹರೀಶ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಯಶವಂತರಾವ್ ಜಾಧವ್, ಬಿ.ಎಸ್.ಜಗದೀಶ, ಟಿ.ಶ್ರೀನಿವಾಸ ದಾಸಕರಿಯಪ್ಪ, ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ, ಬಿ.ಟಿ.ಸಿದ್ದಪ್ಪ, ಪಿ.ಸಿ.ಶ್ರೀನಿವಾಸ ಭಟ್, ಜಿ.ಎಸ್.ಶ್ಯಾಮ ಮಾಯಕೊಂಡ, ರಾಜನಹಳ್ಳಿ ಶಿವಕುಮಾರ, ಧನಂಜಯ ಕಡ್ಲೇಬಾಳು, ಎನ್.ರಾಜಶೇಖರ, ಕರಾಟೆ ತಿಮ್ಮೇಶ, ಸಂಗನಗೌಡ್ರು, ಎಚ್.ಎನ್. ಗುರುನಾಥ, ಬಾತಿ ದೊಗ್ಗಳ್ಳಿ ವೀರೇಶ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ ಇತರರಿದ್ದರು. ಬಿಎಸ್‌ವೈ, ವಿಜಯೇಂದ್ರ ಬಗ್ಗೆ ಹಗುರ ಮಾತು ಸಲ್ಲದು
ಕಾಂಗ್ರೆಸ್ ವೈಫಲ್ಯ ಮರೆಮಾಚಲು ಸಿದ್ದರಾಮಯ್ಯ ಯತ್ನ
ರಾಜ್ಯ ಸರ್ಕಾರದ ನೂನ್ಯತೆಗಳ ಮುಚ್ಚಲು, ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರವನ್ನ ಬುರುಡೇ ಸರ್ಕಾರವೆಂದು ಟೀಕಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರದ ಹಣೆಬರಹಕ್ಕೆ ಜನರಿಗೆ ಗ್ಯಾಸ್ ಕೊಡುವ ಯೋಗ್ಯತೆಯೂ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಿಹಾಯ್ದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಕಾದರೆ ಚಾಲೆಂಜ್ ಮಾಡಲಿ. ಸೂರಿಲ್ಲದವರಿಗೆ ಸೂರು ಅಂತಾ 3 ಕೋಟಿ ಮನೆ ಕಟ್ಟಿದ್ದಾಗಿ ಹೇಳುತ್ತಾರೆ. ಆದರೆ, ಮೋದಿ ಸರ್ಕಾರ ಕಳೆದೊಂದು ದಶಕದಲ್ಲಿ 4 ಕೋಟಿ ಮನೆ ಕೊಟ್ಟಿದೆ. ಇದನ್ನು ಸಹಿಸದ ಸಿಎಂ ಬುರುಡೇ ಸರ್ಕಾರವೆನ್ನುತ್ತಾರೆ ಎಂದರು. ಯುಪಿಎ ಆಳ್ವಿಕೆಯಲ್ಲಿ ಶೇ.12ರಷ್ಟು ವಿದ್ಯುತ್ ಕೊರತೆ ಇತ್ತು. ಈಗ ನರೇಂದ್ರ ಮೋದಿ ಸರ್ಕಾರ ಬಂದ ನಂತರ ಬೇರೆ ದೇಶಗಳಿಗೆ ಪೂರೈಸುವಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ಮುದ್ರಾ, ಸ್ವನಿಧಿ ಯೋಜನೆ, ಡಿಬಿಟಿ ಕೇಂದ್ರ ಸರ್ಕಾರದ ಸಾಧನೆಗಳಾಗಿವೆ ಹೀಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಹತ್ತಾರು ಉದಾಹರಣೆ ಕೊಡಬಹುದು ಎಂದು ತಿರುಗೇಟು ನೀಡಿದರು.ಜನರಿಗೆ ಟೋಪಿ ಹಾಕುವುದರಲ್ಲಿ, ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿನವರು ನಂಬರ್ ಒನ್. ಸುಳ್ಳು ಹೇಳುವ ಸ್ಪರ್ಧೆಯಲ್ಲಿ ಕಾಂಗ್ರೆಸ್ ಪ್ರಥಮ ಸ್ಥಾನದಲ್ಲಿದೆ. ಕಾಂಗ್ರೆಸ್ಸಿನ ನಾಯಕರು 30 ವರ್ಷದಿಂದ ಒಂದು ವಾಚ್ ಬಾವಿಗೆ ಬಿದ್ದಿತ್ತು ಎಂದು ಕತೆ ಹೇಳುತ್ತಾರೆ.