ಗದಗ: ನಗರದ ಸಮಗ್ರ ಅಭಿವೃದ್ಧಿ, ಶಾಶ್ವತ ಕುಡಿಯುವ ನೀರಿನ ಪರಿಹಾರ, ಯುವಕರಿಗೆ ಉದ್ಯೋಗಾವಕಾಶ ಹಾಗೂ ರೈತರ ಹಿತದೃಷ್ಟಿಯಿಂದ ಜಿಲ್ಲೆಯನ್ನು ಬರಗಾಲ ಘೋಷಿಸಬೇಕೆಂದು ಒತ್ತಾಯಿಸಿ ನಗರದ 20ನೇ ವಾರ್ಡ್‌ನಲ್ಲಿ ಮೋಹನ್ ವರವಿ ಅವರ ನೇತೃತ್ವದಲ್ಲಿ ರಕ್ತ ಸಹಿ ಅಭಿಯಾನ ನಡೆಯಿತು.
ಈ ವೇಳೆ ಪ್ರವೀಣ್ ಕರಬಿಷ್ಟಿ, ಮಂಜು ವರವಿ, ಮಲ್ಲು ಜಂತ್ಲಿ, ಮಂಜುನಾಥ ಜುಟ್ಲರ, ಪರಶುರಾಮ ಗೊಂದಿ, ಅಮಸಿದ್ದ ಗೌಡರ, ಅನಿಲ ಬಳ್ಳಾರಿ, ಮನೋಜ ಕಿರಟಗೇರಿ, ಲಕ್ಷ್ಮಣ ಮುರುಗೋಡ, ಪ್ರಶಾಂತ ವರವಿ, ಬಸವರಾಜ ಕಮತರ, ನಿಖಿಲ ಅಣ್ಣಿಗೇರಿ, ಪ್ರಕಾಶ ಬರಾಡ, ಸಮೀರ್ ಪಿತ್ತೂರು, ಕಿರಣ ಹುನಗುಂಡಿ, ಕುನಲ ಪವಾರ, ಸಚಿನ ಕಾಂಬಳೆ, ಲೋಕೇಶ ಹೂವಿನಹಡಗಲಿ, ಪ್ರಜ್ವಲ ಕರಿ, ಸಂತೋಷ ಕುರಿ, ನೂತನ ಮುರುಗೋಡ, ಶಿವು ಮುಳುಗುಂದ, ಸೋಹಿಲ ಮುಳಗುಂದ, ಆರ್ಯನ ಬಾದಾಮಿ, ಉಮೇಶ್ ರೆಡ್ಡಿ ಹಳ್ಯಳ, ತನ್ಮಯ ದೊಡ್ಡಮನಿ, ಮದನಸಿಂಗ್ ರಜಪೂತ ಸೇರಿದಂತೆ ಯುವಕರು ಇದ್ದರು.ತಿಂಗಳ ಬಳಿಕ ಗದಗದಲ್ಲಿ ಮಳೆ
ಗದಗ: ಗದಗ- ಬೆಟಗೇರಿ ಅವಳಿ ನಗರದಲ್ಲಿ ತಿಂಗಳ ಬಳಿಕ ಮಳೆ ಪ್ರತ್ಯಕ್ಷವಾಗಿದ್ದು, ಮಂಗಳವಾರ ಅವಳಿ ನಗರದಲ್ಲಿ 20 ನಿಮಿಷಕ್ಕೂ ಹೆಚ್ಚು ಕಾಲ ರಭಸದ ಮಳೆ ಸುರಿಯಿತು.ದಿಢೀರ್ ಸುರಿದ ಮಳೆಯಿಂದ ನಗರದ ಹಲವು ರಸ್ತೆಗಳು ತೇವಗೊಂಡಿದ್ದು, ವಾತಾವರಣ ತಂಪಾಗಿದೆ. ದೀರ್ಘ ಕಾಲದಿಂದ ಮಳೆಯ ನಿರೀಕ್ಷೆಯಲ್ಲಿದ್ದ ರೈತಾಪಿ ವರ್ಗದಲ್ಲಿ ಈ ಮಳೆ ಹೊಸ ಭರವಸೆ ಮೂಡಿಸಿದೆ. ಬಿತ್ತನೆ ಮಾಡಿದ ಬೆಳೆಗಳಿಗೆ ಮಳೆಯ ಅಗತ್ಯವಿದ್ದ ಸಂದರ್ಭದಲ್ಲಿ ಸುರಿದಿರುವ ಅಲ್ಪ ಮಳೆ ಕೂಡಾ ರೈತರಲ್ಲಿ ಸಂತಸ ಮೂಡಿಸಿದೆ.