ಕರ್ನಾಟಕ ಸರ್ಕಾರಿ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಡಿಕೇರಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ವಾರ್ಷಿಕ ವಿಶೇಷ ಶಿಬಿರ 7 ದಿನಗಳ ಕಾಲ ಹಾಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ನಾಪೋಕ್ಲು: ಕರ್ನಾಟಕ ಸರ್ಕಾರಿ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಡಿಕೇರಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ವಾರ್ಷಿಕ ವಿಶೇಷ ಶಿಬಿರ 7 ದಿನಗಳ ಕಾಲ ಹಾಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಸಮಾರೋಪ ಸಮಾರಂಭದ ಸಭಾ ಕಾರ್‍ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ವಿರಾಜಪೇಟೆ ಸೈಂಟ್ ಆನ್ಸ್ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಪ್ರತಿಮಾ ಹರೀಶ ರೈ ಮಾತನಾಡಿ, ಮಕ್ಕಳಲ್ಲಿ ಸೇವಾ ಮನೋಭಾವನೆ ಬೆಳೆಯಬೇಕು. ಸಾಲು ಮರದ ತಿಮ್ಮಕ್ಕ ಮತ್ತು ಹರೇಕಳ ಹಾಜಬ್ಬ ಅವರನ್ನು ಉಲ್ಲೇಖಿಸಿ ನಾವು ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದು ಹೇಳಿದರು.ಹಾಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಕುಮಾರಸ್ವಾಮಿ ಟಿ.ಬಿ. ಮಾತನಾಡಿ, ಮಕ್ಕಳಲ್ಲಿ ವಿಚಾರವಂತಿಕೆ, ನೀತಿವಂತಿಕೆ ಇರುವ ವಿದ್ಯೆಯು ಗಳಿಕೆಯಾಗಬೇಕು. ತಮ್ಮ ನಿಸ್ವಾರ್ಥ ಸೇವೆಯು ಸಮಾಜಕ್ಕೆ ಸಲ್ಲಿಕೆಯಾಗಬೇಕು ಎಂದರು. ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ನಿರ್ಮಲಾ ಎಚ್.ಪಿ. ಅಧ್ಯಕ್ಷತೆ ವಹಿಸಿದ್ದರು. ಎನ್ನೆಸ್ಸೆಸ್ ಶಿಬಿರ ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮ, ಸರಳತೆ, ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಸಹಕಾರಿ ಎಂದು ಹೇಳಿದರು.ಶಿಬಿರಾಧಿಕಾರಿ ಉಪನ್ಯಾಸಕ ಡಾಕ್ಟರ್ ವೇಣುಗೋಪಾಲ ಅವರು ಏಳು ದಿನಗಳ ಶಿಬಿರದ ವರದಿ ವಾಚಿಸಿದರು. ಸಹ ಯೋಜನಾಧಿಕಾರಿ ರಾಕಿ ಪೊನ್ನಣ್ಣ, ಶಿಬಿರದ ನಾಯಕಿ ಆಶಿತಾ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.