ರಾಮ ಜನ್ಮಭೂಮಿ ವಿಚಾರದಲ್ಲಿ ಕಾಂಗ್ರೆಸ್‌ ಪಾತ್ರ ಇಲ್ಲ: ಪ್ರತಾಪ್ ಸಿಂಹ

KannadaprabhaNewsNetwork |  
Published : Jan 14, 2024, 01:33 AM ISTUpdated : Jan 14, 2024, 03:53 PM IST
30 | Kannada Prabha

ಸಾರಾಂಶ

ಸಂಸದ ಪ್ರತಾಪ್ ಸಿಂಹ ಟೀಕೆ -ರಥಯಾತ್ರೆ ಮಾಡಿದವರು ಅಡ್ವಾಣಿ. ಕೋರ್ಟ್ ಹೋರಾಟ ಮಾಡಿದವರು ರವಿಶಂಕರ್ ಪ್ರಸಾದ್

ಕನ್ನಡಪ್ರಭ ವಾರ್ತೆ ಮೈಸೂರು

ರಾಮ ಜನ್ಮಭೂಮಿ ವಿಚಾರದಲ್ಲಿ ಕಾಂಗ್ರೆಸ್ ದು ಯಾವ ಪಾತ್ರವೂ ಇಲ್ಲ. ಹೀಗಾಗಿ, ಅವರಿಗೆ ಅಪರಾಧಿ ಪ್ರಜ್ಞೆ ಇದೆ. ಅಪರಾಧಿ ಪ್ರಜ್ಞೆ ಕಾರಣ ಅವರು ಉದ್ಘಾಟನೆಯಿಂದ ಹಿಂದೆ ಸರಿದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಜನ್ಮಭೂಮಿಗಾಗಿ ರಥಯಾತ್ರೆ ಮಾಡಿದವರು ಅಡ್ವಾಣಿ. ಕೋರ್ಟ್ ಹೋರಾಟ ಮಾಡಿದವರು ರವಿಶಂಕರ್ ಪ್ರಸಾದ್. 

ನಂತರ ದೇಶಾದ್ಯಂತ ಈ ಬಗ್ಗೆ ಅಭಿಪ್ರಾಯ ಮೂಡಿಸಿದವರು ಮೋದಿ. ಅಡ್ವಾಣಿ ಅವರಿಂದ ಮೋದಿ ಅವರಿಗೆ ರಾಮಜನ್ಮ ಭೂಮಿ ವಿಚಾರದಲ್ಲಿ ಬಿಜೆಪಿ ಪಾತ್ರ ದೊಡ್ಡದಿದೆ ಎಂದು ತಿಳಿಸಿದರು.

ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದ ಕಾಂಗ್ರೆಸ್ ನಾ ಪಾಪಾ ತೊಳೆದುಕೊಳ್ಳಲು ಸಿದ್ದರಾಮಯ್ಯ ಅವರು ತಮ್ಮ ಶಿಷ್ಯರ ಜೊತೆ ಅಯೋಧ್ಯೆಗೆ ಹೋಗಿ ಬರಲಿ ಎಂದು ಅವರು ಕುಟುಕಿದರು.

ನನ್ನ ತಮ್ಮನ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಸವಿಸ್ತಾರವಾಗಿ ಸತ್ಯ ಹೇಳಿದ್ದರು. ಈ ಕಾರಣ ಅವರಿಗೆ ಕೃತಜ್ಞತೆ ಸಲ್ಲಿಕೆ ಮಾಡಲು ಅವರ ಮನೆಗೆ ತೆರಳಿದ್ದೆ. ನಾನು ಎರಡು ಬಾರಿ ಬಿಜೆಪಿ ಅಭ್ಯರ್ಥಿ ಆದರೂ ನಾನು ಆಲ್ ಪಾರ್ಟಿ ಕ್ಯಾಂಡಿಡೆಟ್. ಮೋದಿ ಅವರು ಬಗ್ಗೆ ಪ್ರೀತಿ ಇರುವವರು ಎಲ್ಲಾ ಪಕ್ಷದಲ್ಲೂ ಇದ್ದಾರೆ. ಅವರೆಲ್ಲಾ ನನಗೆ ಮತ ಹಾಕುತ್ತಿದ್ದರು ಎಂದರು.

ಡಾ. ಯತೀಂದ್ರ ತಮ್ಮ ಎದುರಾಳಿಯಾದರೆ ಒಳ್ಳೆಯದು: ಡಾ. ಯತೀಂದ್ರ ಸಿದ್ದರಾಮಯ್ಯ ನಿಮ್ಮ ಎದುರಾಳಿಯ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ನಾನು ಯಾವತ್ತೂ ನನ್ನ ಎದುರಾಳಿಯನ್ನು ನೋಡಲ್ಲ. 

ಮೋದಿ ಅವರ ಹೆಸರಿನ ಮುಂದೆ ಯಾವ ಎದುರಾಳಿ ಹೆಸರು ನಡೆಯಲ್ಲ. ಕಾಂಗ್ರೆಸ್ ಗೆ ನಮ್ಮ ಚಿಂತೆ ಯಾಕೆ. ಕಾಂಗ್ರೆಸ್ ಗೆ ಊರ ಉಸಾಬರಿ ಯಾಕೆ? ತಮ್ಮ ಅಭ್ಯರ್ಥಿ ಯಾರು ಎಂಬುದನ್ನು ನೋಡಿಕೊಳ್ಳಲಿ ಎಂದು ಹೇಳಿದರು.

ಲೋಕಸಭೆಗೆ ಅಭ್ಯರ್ಥಿಗಳು ಇಲ್ಲದೆ ಮಂತ್ರಿಗಳ ನಿಲ್ಲಿಸಿವ ದೈನಾಸಿ ಸ್ಥಿತಿ ಕಾಂಗ್ರೆಸ್ ಗೆ ಬಂದಿದೆ. ಬಿಜೆಪಿ- ಜೆಡಿಎಸ್ ನಡುವೆ ಗೊಂದಲ ಇಲ್ಲ. ಈ ಕ್ಷೇತ್ರದಲ್ಲಿ ನನ್ನ ಪರ ಎರಡು ಪಕ್ಷದ ನಾಯಕರ ಆಶೀರ್ವಾದವಿದೆ. 

ಡಾ. ಯತೀಂದ್ರ ಸಿದ್ದರಾಮಯ್ಯ ತಮ್ಮ ಎದುರಾಳಿಯಾದರೆ ಒಳ್ಳೆಯದು. ಡಾ. ಯತೀಂದ್ರ ಸನ್ ಆಫ್ ಸಿದ್ದರಾಮಯ್ಯ ವರ್ಸಸ್ ಪತ್ರಕರ್ತ ಪ್ರತಾಪ್ ಸಿಂಹ ನಡುವೆ ಫೈಟ್ ನಡೆಯುತ್ತೆ ಎಂದು ಅವರು ತಿಳಿಸಿದರು.

ಕೊಚ್ಚೆಗೆ ಕಲ್ಲು ಹಾಕಲ್ಲ: ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೊಚ್ಚೆಗೆ ನಾನು ಯಾವತ್ತೂ ಕಲ್ಲು ಹಾಕಲ್ಲ. ತಿಳಿಗೇಡಿಗಳು ಮಾತ್ರ ಕೊಚ್ಚೆಗೆ ಕಲ್ಲು ಹಾಕುತ್ತಾರೆ. ನಾನು ತಿಳಿಗೇಡಿಯಲ್ಲ. ನಾನು ಆ ಕೊಚ್ಚೆಗೆ ಕಲ್ಲು ಹಾಕಲ್ಲ ಎಂದು ತಿರುಗೇಟು ನೀಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ