ಬೆಂಗಳೂರಿನ ಕರಗ ಇಡೀ ವಿಶ್ವದಲ್ಲೇ ಪ್ರಸಿದ್ಧಿ ಪಡೆದುಕೊಂಡಿದೆ. ಇಂತಹ ಸಂಪ್ರದಾಯ, ಪರಂಪರೆಯುಳ್ಳ ಸಮಾಜ ಸಮಾಜ ಮುಖ್ಯವಾಹಿನಿ ಬರಬೇಕು. ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಸಮಾಜಕ್ಕೆ ಸರ್ಕಾರ ಶಕ್ತಿ ತುಂಬಬೇಕಿದೆ.
ದೇವನಹಳ್ಳಿ: ದ್ರೌಪದಿ ತಾಯಿಯನ್ನು ಭಕ್ತಿದಾಯಕವಾಗಿ ಆರಾಧಿಸುವ ಸಮಾಜವೇ ಕ್ಷತ್ರಿಯ ಸಮಾಜ. ಅಲ್ಲದೇ ಭಕ್ತಿಗೆ, ಧೈರ್ಯಕ್ಕೆ ಹಾಗೂ ನಂಬಿಕೆಗೆ ಅರ್ಹವಾದ ಸಮುದಾಯ ಅಂದರೆ ವಹ್ನಿಕುಲ ತಿಗಳ ಸಮಾಜ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
ಇಲ್ಲಿನ ಡಾ. ಅಂಬೇಡ್ಕರ್ ಭವನದಲ್ಲಿ ತಾಲೂಕು ತಿಗಳ ವಹ್ನಿಕುಲ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಡಾ. ಸುಧಾಕರ್ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಬೆಂಗಳೂರಿನ ಕರಗ ಇಡೀ ವಿಶ್ವದಲ್ಲೇ ಪ್ರಸಿದ್ಧಿ ಪಡೆದುಕೊಂಡಿದೆ. ಇಂತಹ ಸಂಪ್ರದಾಯ, ಪರಂಪರೆಯುಳ್ಳ ಸಮಾಜ ಸಮಾಜ ಮುಖ್ಯವಾಹಿನಿ ಬರಬೇಕು. ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಸಮಾಜಕ್ಕೆ ಸರ್ಕಾರ ಶಕ್ತಿ ತುಂಬಬೇಕಿದೆ ಎಂದು ಹೇಳಿದರು. ಕ್ಷೇತ್ರದಲ್ಲಿ 21 ಲಕ್ಷ ಮತದಾರರಿದ್ದು, 9 ಲಕ್ಷ ಜನ ನನಗೆ ಮತ ನೀಡಿದ್ದಾರೆ. ಈ ಎಲ್ಲ ಮತದಾರರ ಕಷ್ಟ- ಸುಖಗಳಿಗೆ ಅಲ್ಲದೇ ಆಶೋತ್ತರಗಳಿಗೆ ಸ್ಪಂದಿಸಬೇಕಾದದ್ದು ನನ್ನ ಜವಾಬ್ದಾರಿ. ಜನರ ಬೇಡಿಕೆಗಳನ್ನು ಈಡೇರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಯಾವುದೇ ಸಂದರ್ಭದಲ್ಲಿಯಾದರೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಮು. ಕೃಷ್ಣಮೂರ್ತಿ, ಸಂಸದರಿಗೆ ಭಿನ್ನವತ್ತಳೆ ಅರ್ಪಿಸಿದರು. ಸಮಾರಂಭದಲ್ಲಿ ಬುಳ್ಳಹಳ್ಳಿ ಆದಿ ಪರಾಶಕ್ತಿ ಮಹಾ ಸಂಸ್ಥಾನ ಮಂಜುನಾಥ್ ಮಹರಾಜ್ ಆಶೀರ್ವಚನ ನೀಡಿದರು. ಮಾಜಿ ಶಾಸಕ ಜಿ.ಚಂದ್ರಣ್ಣ, ಮುಖಂಡರಾದ ದೇ.ಸೂ.ನಾಗರಾಜ್, ತಾಲೂಕು ಸಂಘದ ಅಧ್ಯಕ್ಷ ವಿ. ಗೋಪಾಲಕೃಷ್ಣ, ದೇವಾಲಯ ಸಂಘದ ಅಧ್ಯಕ್ಷ ವಿಜಯಕುಮಾರ್ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.