ಕನ್ನಡಪ್ರಭ ವಾರ್ತೆ ಹರಿಹರ
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ಒಟ್ಟು 2,755 ಪ್ರಕರಣಗಳಲ್ಲಿ, 353 ಪ್ರಕರಣಗಳನ್ನು ಲೋಕ್ ಅದಲತ್‍ಗೆ ನಿಗಧಿಪಡಿಸಲಾಗಿತ್ತು. ಇವುಗಳಲ್ಲಿ 47.95 ಲಕ್ಷ ರು. ಮೌಲ್ಯದ 27 ಪ್ರಕರಣಗಳು ಇತ್ಯರ್ಥವಾಗಿದ್ದು, ವ್ಯಾಜ್ಯ ಪೂರ್ವದ 37 ಪ್ರಕರಣಗಳಲ್ಲಿ 2.5 ಲಕ್ಷ ಮೌಲ್ಯದ 2 ಪ್ರಕರಣ ಇತ್ಯರ್ಥವಾಗಿವೆ.
ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ಒಟ್ಟು 1,156 ಪ್ರಕರಣಗಳಲ್ಲಿ, 890 ಪ್ರಕರಣಗಳನ್ನು ಲೋಕ ಅದಾಲತ್‍ಗೆ ನಿಗಧಿಪಡಿಸಲಾಗಿತ್ತು. ಇವುಗಳಲ್ಲಿ 9.6 ಲಕ್ಷ ರು.ಮೌಲ್ಯದ 33 ಪ್ರಕರಣಗಳು ಇತ್ಯರ್ಥವಾಗಿವೆ. ವ್ಯಾಜ್ಯ ಪೂರ್ವದ 12,844 ಪ್ರಕರಣಗಳಲ್ಲಿ 3.01 ಕೋಟಿ ರು. ಮೌಲ್ಯದ 12,528 ಪ್ರಕರಣಗಳು ಇತ್ಯರ್ಥವಾಗಿವೆ.1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ಒಟ್ಟು 2,373 ಪ್ರಕರಣಗಳಲ್ಲಿ, 1,096 ಪ್ರಕರಣಗಳನ್ನು ಲೋಕ ಅದಲತ್‍ಗೆ ನಿಗಧಿಪಡಿಸಲಾಗಿತ್ತು. ಇವುಗಳಲ್ಲಿ 16 ಲಕ್ಷ ರು. ಮೌಲ್ಯದ 45 ಪ್ರಕರಣಗಳು ಇತ್ಯರ್ಥವಾಗಿವೆ. ವ್ಯಾಜ್ಯ ಪೂರ್ವದ 12,835 ಪ್ರಕರಣಗಳಲ್ಲಿ 3.04 ಕೋಟಿ ರು.ಮೌಲ್ಯದ 12,520 ಪ್ರಕರಣ ಇತ್ಯರ್ಥವಾಗಿವೆ.
ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ವೀಣಾ ಕೋಳೇಕರ, ಜ್ಯೋತಿ ಅಶೋಕ ಪತ್ತಾರ ಮತ್ತು ಹಿರಿ-ಕಿರಿಯ ವಕೀಲರು, ಕಕ್ಷಿದಾರರು ಭಾಗವಹಿಸಿದ್ದರು.
ಕೆನರಾ ಬ್ಯಾಂಕ್‍ನಲ್ಲಿ 8.18 ಲಕ್ಷ ಸಾಲ ಪಡೆದಿದ್ದ ತಾಲೂಕಿನ ಬನ್ನಿಕೋಡು ಗ್ರಾಮದ ಕಾಡಸಿದ್ದಪ್ಪ ಎಂಬುವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರಿಂದ ಸಾಲ ತೀರಿಸಲಾಗಿರಲಿಲ್ಲ. ಅವರ ವಿರುದ್ಧ ಸಾಲ ವಸೂಲಾತಿಗೆ ದಾಖಲಿಸಿದ್ದ ಪ್ರಕರಣದಲ್ಲಿ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಿಗೆ ಕಾಡಸಿದ್ದಪ್ಪನ ಅಸಹಾಯಕತೆ ವಿವರಿಸಿದ ಕರೆಣ್ಣನವರ್ ಸಹಕರಿಸುವಂತೆ ಕೇಳಿದ್ದರಿಂದ 1.35 ಲಕ್ಷ ರು.ಗೆ ಪ್ರಕರಣ ರಾಜಿಯಾಯಿತು.