205 ಸಾರ್ವಜನಿಕ ಗಣೇಶ ಮೂರ್ತಿಗಳ ಅದ್ಧೂರಿ ವಿಸರ್ಜನೆ

KannadaprabhaNewsNetwork |  
Published : Sep 16, 2024, 01:53 AM IST
ಹಳೇ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಳೇ ಹುಬ್ಬಳ್ಳಿ ಕಾ ಮಹಾರಾಜಾ ಗಣೇಶ ಮೂರ್ತಿಯ ಅದ್ಧೂರಿ ವಿಸರ್ಜನಾ ಮೆರವಣಿಗೆ ಭಾನುವಾರ ಸಂಜೆ ನಡೆಯಿತು. | Kannada Prabha

ಸಾರಾಂಶ

ವಿವಿಧ ಸಾರ್ವಜನಿಕ ಗಜಾನನ ಮಂಡಳಿಗಳು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು 9ನೇ ದಿನವಾದ ಭಾನುವಾರ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ವಿಸರ್ಜಿಸಲಾಯಿತು.

ಹುಬ್ಬಳ್ಳಿ: ಕಳೆದ ಸೆ. 7 ರಂದು ವಿವಿಧ ಸಾರ್ವಜನಿಕ ಗಜಾನನ ಮಂಡಳಿಗಳು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು 9ನೇ ದಿನವಾದ ಭಾನುವಾರ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ವಿಸರ್ಜಿಸಲಾಯಿತು.

ಹಳೇ ಹುಬ್ಬಳ್ಳಿ, ಮಂಗಳವಾರ ಪೇಟೆ, ಆನಂದ ನಗರ, ಬೊಮ್ಮಾಪುರ ಓಣಿ, ವಿದ್ಯಾನಗರ, ಉಣಕಲ್ಲ, ತಾಜ್‌ ನಗರ, ಬಿಡ್ನಾಳ, ಗೋಕುಲ ರಸ್ತೆ, ಕೇಶ್ವಾಪುರ, ಗೋಪನಕೊಪ್ಪ, ಸಿಬಿಟಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ 205 ಗಣಪತಿಗಳ ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜನಾ ಕಾರ್ಯಕ್ರಮ ನೆರವೇರಿತು.

ಎಲ್ಲಡೆ ಡಿಜೆ ಸದ್ದು

ಗಣೇಶ ಮೂರ್ತಿ ಪ್ರತಿಷ್ಠಾಪನೆಯ 9ನೇ ದಿನವಾದ ಭಾನುವಾರ ಗಣೇಶ ಮೂರ್ತಿಗಳ ಅದ್ಧೂರಿ ವಿಸರ್ಜನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಈ ವೇಳೆ ಎಲ್ಲಡೆಯೂ ಡಿಜೆ ಸದ್ದು ಜೋರಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಮಕ್ಕಳು, ಯುವಕರು ಬಣ್ಣಬಣ್ಣದ ರುಮಾಲು ಸುತ್ತಿಕೊಂಡು, ಹಣೆಗೆ ಕೇಸರಿ ಪಟ್ಟಿ ಧರಿಸಿ, ಕೇಸರಿ ಧ್ವಜಗಳು ಹಿಡಿದು ಕುಣಿದು ಕುಪ್ಪಳಿಸುತ್ತಿರುವುದು ಕಂಡುಬಂದಿತು.

9ನೇ ದಿನವಾದ ಭಾನುವಾರ ಇಲ್ಲಿನ ಹಳೇ ಹುಬ್ಬಳ್ಳಿ ಭಾಗದಲ್ಲಿ ಪ್ರತಿಷ್ಠಾಪಿಸಲಾದ ಬಹುತೇಕ ಸಾರ್ವಜನಿಕ ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು. ಮೆರವಣಿಗೆಯು ಹಳೇ ಹುಬ್ಬಳ್ಳಿಯ ದುರ್ಗದ ಬೈಲ್‌ನಿಂದ ಪ್ರಾರಂಭವಾಗಿ ಚನ್ನಪೇಟ, ಅರವಿಂದ ನಗರ, ಕಾರವಾರ ರಸ್ತೆಯ ಮೂಲಕ ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಗಣೇಶ ಬಾವಿ ಹಾಗೂ ಹೊಸೂರಿನ ಗಣೇಶ ಬಾವಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು.

ಪೊಲೀಸ್ ಬಂದೋಬಸ್ತ್‌

ಭಾನುವಾರ ಮಧ್ಯಾಹ್ನದಿಂದ ಆರಂಭವಾದ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಹಳೇ ಹುಬ್ಬಳ್ಳಿ, ಮಂಗಳವಾರಪೇಟೆ ಸೇರಿದಂತೆ ಪ್ರಮುಖ ಸ್ಥಳಗಳಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಹಚ್ಚಿದ್ದ ಡಿಜೆಗೆ ಯುವಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರಿಂದ ಅಗತ್ಯ ಬಂದೋಬಸ್ತ್‌ ಕೈಗೊಳ್ಳಲಾಯಿತು.

ಶಾಸಕ ಅಬ್ಬಯ್ಯ ಚಾಲನೆ

ಇದಕ್ಕೂ ಪೂರ್ವದಲ್ಲಿ ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ವತಿಯಿಂದ ಇಲ್ಲಿಯ ಹಳೇ ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಶ್ರೀ ಗಣಪತಿ ವಿಗ್ರಹಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಗೆ ಶಾಸಕ, ಸ್ಲಂ ಬೋರ್ಡ್‌ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು.

ಮಹಾಮಂಡಳ ಅಧ್ಯಕ್ಷ ಮೋಹನ ಲಿಂಬಿಕಾಯಿ, ಪಾಲಿಕೆ ಮಾಜಿ ಮೇಯರ್‌ ಡಾ. ಪಾಂಡುರಂಗ ಪಾಟೀಲ, ರಾಧಾಬಾಯಿ ಸಫಾರೆ, ಪಾಲಿಕೆ ಸದಸ್ಯರಾದ ಸುಮಿತ್ರಾ ಗುಂಜಾಳ, ಮಹ್ಮದ್ ಆರೀಫ್ ದೊಡ್ಡಮನಿ, ಅರ್ಜುನ ಪಾಟೀಲ, ಹಳೇ ಹುಬ್ಬಳ್ಳಿ ಗಣೇಶೋತ್ಸವ ಸಮಿತಿಯ ಎಸ್.ಎಸ್. ಸಾಲಿಮಠ, ಮಹಾಮಂಡಳದ ಉಪಾಧ್ಯಕ್ಷ ಶಾಂತರಾಜ ಪೋಳ, ಅಲ್ತಾಫ್ ಕಿತ್ತೂರ, ಕಾರ್ಯದರ್ಶಿಗಳಾದ ಅಮರೇಶ ಹಿಪ್ಪರಗಿ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಪ್ರಮುಖರಾದ ಅನಿಲ ಬೇವಿನಕಟ್ಟಿ, ಉಮೇಶ ಪಡಗಾವಿ, ಸಂತೋಷ ಕಟ್ಟಿ, ಚಂದ್ರಶೇಖರ ಗಾಣಿಗೇರ ಸೇರಿದಂತೆ ಹಲವರಿದ್ದರು.

15ಎಚ್‌ಯುಬಿ40, 41

ಹಳೇ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಳೇ ಹುಬ್ಬಳ್ಳಿ ಕಾ ಮಹಾರಾಜಾ ಗಣೇಶ ಮೂರ್ತಿಯ ಅದ್ಧೂರಿ ವಿಸರ್ಜನಾ ಮೆರವಣಿಗೆ ಭಾನುವಾರ ಸಂಜೆ ನಡೆಯಿತು.

15ಎಚ್‌ಯುಬಿ42, 43

ಹಳೇ ಹುಬ್ಬಳ್ಳಿಯ ಇಂಡಿ ಪಂಪ್‌ ಬಳಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಜನತೆ.

15ಎಚ್‌ಯುಬಿ44, 45

ಭಾನುವಾರ ಹುಬ್ಬಳ್ಳಿ ನಗರದಲ್ಲಿ ನಡೆದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಯುವಕರು ಹುಚ್ಚೆದ್ದು ಕುಣಿದು ಸಂಭ್ರಮಿಸಿದರು.ಹುಬ್ಬಳ್ಳಿ: ಕಳೆದ ಸೆ. 7 ರಂದು ವಿವಿಧ ಸಾರ್ವಜನಿಕ ಗಜಾನನ ಮಂಡಳಿಗಳು ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು 9ನೇ ದಿನವಾದ ಭಾನುವಾರ ಅದ್ಧೂರಿಯಾಗಿ ಮೆರವಣಿಗೆ ಮಾಡುವ ಮೂಲಕ ವಿಸರ್ಜಿಸಲಾಯಿತು.

ಹಳೇ ಹುಬ್ಬಳ್ಳಿ, ಮಂಗಳವಾರ ಪೇಟೆ, ಆನಂದ ನಗರ, ಬೊಮ್ಮಾಪುರ ಓಣಿ, ವಿದ್ಯಾನಗರ, ಉಣಕಲ್ಲ, ತಾಜ್‌ ನಗರ, ಬಿಡ್ನಾಳ, ಗೋಕುಲ ರಸ್ತೆ, ಕೇಶ್ವಾಪುರ, ಗೋಪನಕೊಪ್ಪ, ಸಿಬಿಟಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ 205 ಗಣಪತಿಗಳ ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜನಾ ಕಾರ್ಯಕ್ರಮ ನೆರವೇರಿತು.

ಎಲ್ಲಡೆ ಡಿಜೆ ಸದ್ದು

ಗಣೇಶ ಮೂರ್ತಿ ಪ್ರತಿಷ್ಠಾಪನೆಯ 9ನೇ ದಿನವಾದ ಭಾನುವಾರ ಗಣೇಶ ಮೂರ್ತಿಗಳ ಅದ್ಧೂರಿ ವಿಸರ್ಜನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಈ ವೇಳೆ ಎಲ್ಲಡೆಯೂ ಡಿಜೆ ಸದ್ದು ಜೋರಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಮಕ್ಕಳು, ಯುವಕರು ಬಣ್ಣಬಣ್ಣದ ರುಮಾಲು ಸುತ್ತಿಕೊಂಡು, ಹಣೆಗೆ ಕೇಸರಿ ಪಟ್ಟಿ ಧರಿಸಿ, ಕೇಸರಿ ಧ್ವಜಗಳು ಹಿಡಿದು ಕುಣಿದು ಕುಪ್ಪಳಿಸುತ್ತಿರುವುದು ಕಂಡುಬಂದಿತು.

9ನೇ ದಿನವಾದ ಭಾನುವಾರ ಇಲ್ಲಿನ ಹಳೇ ಹುಬ್ಬಳ್ಳಿ ಭಾಗದಲ್ಲಿ ಪ್ರತಿಷ್ಠಾಪಿಸಲಾದ ಬಹುತೇಕ ಸಾರ್ವಜನಿಕ ಗಣೇಶ ಮೂರ್ತಿಗಳು ವಿಸರ್ಜನೆಗೊಂಡವು. ಮೆರವಣಿಗೆಯು ಹಳೇ ಹುಬ್ಬಳ್ಳಿಯ ದುರ್ಗದ ಬೈಲ್‌ನಿಂದ ಪ್ರಾರಂಭವಾಗಿ ಚನ್ನಪೇಟ, ಅರವಿಂದ ನಗರ, ಕಾರವಾರ ರಸ್ತೆಯ ಮೂಲಕ ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಗಣೇಶ ಬಾವಿ ಹಾಗೂ ಹೊಸೂರಿನ ಗಣೇಶ ಬಾವಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು.

ಪೊಲೀಸ್ ಬಂದೋಬಸ್ತ್‌

ಭಾನುವಾರ ಮಧ್ಯಾಹ್ನದಿಂದ ಆರಂಭವಾದ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಹಳೇ ಹುಬ್ಬಳ್ಳಿ, ಮಂಗಳವಾರಪೇಟೆ ಸೇರಿದಂತೆ ಪ್ರಮುಖ ಸ್ಥಳಗಳಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ಹಚ್ಚಿದ್ದ ಡಿಜೆಗೆ ಯುವಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರಿಂದ ಅಗತ್ಯ ಬಂದೋಬಸ್ತ್‌ ಕೈಗೊಳ್ಳಲಾಯಿತು.

ಶಾಸಕ ಅಬ್ಬಯ್ಯ ಚಾಲನೆ

ಇದಕ್ಕೂ ಪೂರ್ವದಲ್ಲಿ ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ವತಿಯಿಂದ ಇಲ್ಲಿಯ ಹಳೇ ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಶ್ರೀ ಗಣಪತಿ ವಿಗ್ರಹಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಗೆ ಶಾಸಕ, ಸ್ಲಂ ಬೋರ್ಡ್‌ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು.

ಮಹಾಮಂಡಳ ಅಧ್ಯಕ್ಷ ಮೋಹನ ಲಿಂಬಿಕಾಯಿ, ಪಾಲಿಕೆ ಮಾಜಿ ಮೇಯರ್‌ ಡಾ. ಪಾಂಡುರಂಗ ಪಾಟೀಲ, ರಾಧಾಬಾಯಿ ಸಫಾರೆ, ಪಾಲಿಕೆ ಸದಸ್ಯರಾದ ಸುಮಿತ್ರಾ ಗುಂಜಾಳ, ಮಹ್ಮದ್ ಆರೀಫ್ ದೊಡ್ಡಮನಿ, ಅರ್ಜುನ ಪಾಟೀಲ, ಹಳೇ ಹುಬ್ಬಳ್ಳಿ ಗಣೇಶೋತ್ಸವ ಸಮಿತಿಯ ಎಸ್.ಎಸ್. ಸಾಲಿಮಠ, ಮಹಾಮಂಡಳದ ಉಪಾಧ್ಯಕ್ಷ ಶಾಂತರಾಜ ಪೋಳ, ಅಲ್ತಾಫ್ ಕಿತ್ತೂರ, ಕಾರ್ಯದರ್ಶಿಗಳಾದ ಅಮರೇಶ ಹಿಪ್ಪರಗಿ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಪ್ರಮುಖರಾದ ಅನಿಲ ಬೇವಿನಕಟ್ಟಿ, ಉಮೇಶ ಪಡಗಾವಿ, ಸಂತೋಷ ಕಟ್ಟಿ, ಚಂದ್ರಶೇಖರ ಗಾಣಿಗೇರ ಸೇರಿದಂತೆ ಹಲವರಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?