ಸರ್ಕಾರಿ ಭೂಮಿ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Mar 22, 2025, 02:04 AM IST
21ಎಚ್ಎಸ್ಎನ್21 : ದೇಖ್ಲಾ ಗ್ರಾಮದಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಮದೂತ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಸಕಲೇಶಪುರ ತಹಶೀಲ್ದಾರ್ ಅರವಿಂದ್‌ರವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ದೇಖ್ಲಾ ಗ್ರಾಮದಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಮಧೂತ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ತಹಸೀಲ್ದಾರ್‌ ಅರವಿಂದ್‌ ಅವರಿಗೆ ಮನವಿ ಸಲ್ಲಿಸಲಾಯಿತು. ಸ್ಥಳಪರಿಶೀಲನೆ ಮಾಡಿ ವರದಿ ಪಡೆದು ಒತ್ತುವರಿ ಮಾಡಿರುವವರನ್ನು ತೆರವುಗೊಳಿಸಬೇಕು ಇಲ್ಲದಿದ್ದಲ್ಲಿ ನೂರಾರು ಕಾರ್ಯಕರ್ತರು ಸ್ಥಳಕ್ಕೆ ನುಗ್ಗಿ ನಾವು ಸಹ ಒತ್ತುವರಿ ಮಾಡಬೇಕಾಗುತ್ತದೆ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನ ದೇಖ್ಲಾ ಗ್ರಾಮದಲ್ಲಿ ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಮಧೂತ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ತಹಸೀಲ್ದಾರ್‌ ಅರವಿಂದ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಮಿನಿವಿಧಾನಸೌಧದಲ್ಲಿ ಸಂಘಟನೆ ವತಿಯಿಂದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ನಂತರ ಹಿಂದೂ ಮುಖಂಡ ರಘು ಮಾತನಾಡಿ, ತಾಲೂಕಿನ ಕಸಬಾ ಹೋಬಳಿ ದೇಖ್ಲಾ ಗ್ರಾಮದ ಸರ್ವೆ ನಂ ೧೯೬ನಲ್ಲಿ ಸುಮಾರು ೨೨೪ ಎಕರೆ ಸರ್ಕಾರಿ ಜಾಗವಿದ್ದು ಇದರಲ್ಲಿ ಸುಮಾರು ೨೦ ಎಕರೆ ಜಾಗವನ್ನು ಮಾಜಿ ಸೈನಿಕರಿಗೆ ಮೀಸಲಿಡಲು ಗುರುತಿಸಲಾಗಿದೆ. ಆದರೆ ಹೊರಗಿನಿಂದ ಬಂದ ಕೆಲವರು ಇಲ್ಲಿ ಇದ್ದ ಅರಣ್ಯವನ್ನು ನಾಶಪಡಿಸಿ ಅಕ್ರಮವಾಗಿ ಸರ್ಕಾರಿ ಜಾಗವನ್ನು ಕಬಳಿಸಲು ಮುಂದಾಗಿದ್ದಾರೆ. ಮಾಜಿ ಸೈನಿಕರಿಗಾಗಿ ಮೀಸಲಿಟ್ಟಿರುವ ಜಾಗವನ್ನು ಸಹ ಕೆಲವರು ಕಬಳಿಸಲು ಮುಂದಾಗಿದ್ದಾರೆ. ದೇಖ್ಲಾ ಗ್ರಾಮದಲ್ಲಿ ಅನೇಕ ನಕಲಿ ಮತ್ತು ಪರವಾನಿಗೆ ಇಲ್ಲದ ಬಂದೂಕು, ಪಿಸ್ತೂಲು ನಾಡ ಬಂದೂಕು, ವಿದೇಶಿ ಪಿಸ್ತೂಲುಗಳು ಇದ್ದು ಕಾಡು ಪ್ರಾಣಿ ಬೇಟೆ, ವನ್ಯಮೃಗಗಳ ಬೇಟೆ ಎಗ್ಗಿಲ್ಲದೆ ಸುತ್ತಮುತ್ತ ನಡೆಯುತಿದ್ದು ಈ ಬಗ್ಗೆ ಮಾಹಿತಿ ದೂರು ನೀಡಿದಲ್ಲಿ ಸ್ಥಳೀಯರಿಗೆ ಬೆದರಿಸುತ್ತ ಬೆದರಿಕೆ ಹಾಕಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಇದೇ ಗ್ರಾಮದ ಸಾನ್ ಎಂಬುವವನು ಹಾಡುಹಗಲೇ ಎಮ್ಮೆಗೆ ಶೂಟೌಟ್ ಮಾಡಿ ಕೊಂದು ಮಾಂಸವನ್ನು ಕೇರಳಕ್ಕೆ ಸಾಗಿಸಲು ವ್ಯವಸ್ಥೆ ಮಾಡಿಕೊಂಡು ಸಿಕ್ಕಿ ಬಿದ್ದಿದ್ದು ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಈ ಮೇಲ್ಕಂಡ ವಿಷಯದ ಬಗ್ಗೆ ಸ್ಥಳಪರಿಶೀಲನೆ ಮಾಡಿ ವರದಿ ಪಡೆದು ಒತ್ತುವರಿ ಮಾಡಿರುವವರನ್ನು ತೆರವುಗೊಳಿಸಬೇಕು ಇಲ್ಲದಿದ್ದಲ್ಲಿ ನೂರಾರು ಕಾರ್ಯಕರ್ತರು ಸ್ಥಳಕ್ಕೆ ನುಗ್ಗಿ ನಾವು ಸಹ ಒತ್ತುವರಿ ಮಾಡಬೇಕಾಗುತ್ತದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ರಾಮಧೂತ ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಪ್ರದೀಪ್ ಪೂಜಾರಿ, ಮಂಜುನಾಥ ಕಬ್ಬಿನಗದ್ದೆ, ಗಿರೀಶ್ ಮಾರನಹಳ್ಳಿ, ವಿಜಿತ್, ರವಿ ಹೆಬ್ಬಸಾಲೆ, ವೀರೇಶ್, ಶಿವು ಜಿಪ್ಪಿ, ದೀಪಕ್ ಹರೀಶ್ ಗೌಡ, ಸುರೇಂದ್ರ ಇತರರು ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು