ಕನ್ನಡಪ್ರಭ ವಾರ್ತೆ ಮಾಲೂರು
ತಾಲೂಕಿನ ನೀಲಕಂಠ ಅಗ್ರಹಾರದ ನಿರ್ಗತಿಕ ಬಡವರು ಗುಡಿಸಲು ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರೂಪ ರವರಿಗೆ ಮನವಿ ಸಲ್ಲಿಸಿತು.ಪ್ರೊ.ಬಿ.ಕೆ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟಿಕರು ಗುರುವಾರ ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿ ತಾಲೂಕಿನಲ್ಲಿನ ಸರ್ಕಾರಿ ಭೂಮಿ ಉಳಿಸಬೇಕು ೯೪ ಸಿ ಮತ್ತು ೯೪ ಸಿಸಿ ಯಡಿ ಹಕ್ಕು ಪತ್ರ ನೀಡಬೇಕು, ಹಿಂದುಳಿದ ವರ್ಗದ ಚನ್ನದಾಸರಿ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರನೀಡ ಬೇಕು ಎಂಬ ಬೇಡಿಕೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು.
ಒತ್ತುವರಿ ಭೂಮಿ ತೆರವುಗೊಳಿಸಿಈ ಸಂದರ್ಭದಲ್ಲಿ ಮಾತನಾಡಿದ ಕದಸಸ ತಾಲ್ಲೂಕು ಸಂಚಾಲಕ ಎಸ್.ಎಂ. ವೆಂಕಟೇಶ್, ತಾಲೂಕಿನದ್ಯಾಂತ ಸರಕಾರಿ ತೋಪು, ಕೆರೆ ಕುಂಟೆ, ಭೂಮಿ ರಾಜ ಕಾಲುವೆ, ಗೋಮಾಳ ಸೇರಿ ದಂತೆ ಸರ್ಕಾರಿ ಭೂಮಿ ಒತ್ತುವರಿ ಆಗುತಿದ್ದು ಅವುಗಳನ್ನು ಸರ್ಕಾರದ ವಶಕ್ಕೆ ಪಡೆದಿಕೊಳ್ಳಬೇಕು. ತಾಲ್ಲೂಕಿನ ಚನ್ನಾದಾಸರಿ ಜನಾಂಗದ ಆರ್ಥಿಕ, ಸಾಮಾಜಿಕ ಮತ್ತು ಅವರ ಮಕ್ಕಳ ವಿದ್ಯಾಬ್ಯಾಸ ಉದ್ದೇಶಕ್ಕಾಗಿ ಜಾತಿ ಪ್ರಮಾಣ ಪತ್ರನೀಡಿ ಬೇಕು ಎಂದರು.
ಮೂಲಭೂತ ಸೌಲಭ್ಯ ಕಲ್ಪಿಸಿಪಟ್ಟಣದ ಸಂತೆ ಮೈದಾನದಲ್ಲಿ ಇದ್ದ ಗುಡಿಸಲು ನಿವಾಸಿಗಳನ್ನು ತಾಲೂಕು ಆಡಳಿತ ಮತ್ತು ಪುರಸಭೆ ಅಧಿಕಾರಿಗಳು ವಕ್ಕಲೆಬ್ಬಿಸಿ ಮಾಲೂರು -ಅರಳೇರಿ ಮುಖ್ಯ ರಸ್ತೆಯ ನೀಲ ಕಂಠ ಅಗ್ರಹಾರದ ಬಳಿ ಜಾಗ ಗುರ್ತಿಸಿ ವಾಸಕ್ಕೆ ಅವಕಾಶ ಕಲ್ಪಿಸಿದ್ದರು. ೭-೮ ವರ್ಷಗಳಿಂದ ಅಲ್ಲಿ ನಿರ್ಗತಿಕ ದಲಿತರು ಗುಡಿಸಲುಗಳನ್ನು ಹಾಕಿ ಕೊಂಡು ವಾಸ ಮಾಡುತಿದ್ದಾರೆ. ಈ ಗುಡಿಸಲು ನಿವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಂಘಟಿಕರಾದ ಗುಂಡ್ಲಪಾಳ್ಯ ವೆಂಕಟರಮಣಪ್ಪ, ಡಿ.ನಾರಾಯಣಸ್ವಾಮಿ, ಮುನಿರಾಜಪ್ಪ ಶಾಮಣ್ಣ, ತಿರುಮಲೆಶ್, ಅಂಗಶಟ್ಟಹಳ್ಳಿ ನಾರಾಯಣಸ್ವಾಮಿ, ಅಂಜಿನಪ್ಪ ವರದಪುರ ನಾರಾಯಣಸ್ವಾಮಿ ಮುನಿರಾಜು, ಮಂಜುನಾಥ್, ಅಮರಶ್ ಇತರರು ಇದ್ದರು.