ಕೇರಳ ಪೊಲೀಸರ ಕಾರ್‍ಯಾಚರಣೆ: 1ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

KannadaprabhaNewsNetwork |  
Published : Feb 27, 2026, 04:15 AM IST
kerala police 1 | Kannada Prabha

ಸಾರಾಂಶ

ಕೇರಳ ರಾಜ್ಯದ ಮಾದಕ ದ್ರವ್ಯವಿರೋಧಿ ವಿಶೇಷ ಕಾರ್ಯಪಡೆ ನಗರದ ಎಲೆಕ್ಟ್ರಾನಿಕ್ ಸಿಟಿ ಬಳಿಯ ರಮೇಶ್‌ ರೆಡ್ಡಿ ಲೇಔಟ್‌ನ ಮೈಲಸಂದ್ರ ಮನೆಯೊಂದರ ಮೇಲೆ ದಾಳಿ ನಡೆಸಿ 1 ಕೋಟಿ ರು.ಮೌಲ್ಯದ 2 ಕೆ.ಜಿ.ಎಂಡಿಎಂ ಪತ್ತೆ ಮಾಡಿ ಒಬ್ಬನನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇರಳ ರಾಜ್ಯದ ಮಾದಕ ದ್ರವ್ಯವಿರೋಧಿ ವಿಶೇಷ ಕಾರ್ಯಪಡೆ ನಗರದ ಎಲೆಕ್ಟ್ರಾನಿಕ್ ಸಿಟಿ ಬಳಿಯ ರಮೇಶ್‌ ರೆಡ್ಡಿ ಲೇಔಟ್‌ನ ಮೈಲಸಂದ್ರ ಮನೆಯೊಂದರ ಮೇಲೆ ದಾಳಿ ನಡೆಸಿ 1 ಕೋಟಿ ರು.ಮೌಲ್ಯದ 2 ಕೆ.ಜಿ.ಎಂಡಿಎಂ ಪತ್ತೆ ಮಾಡಿ ಒಬ್ಬನನ್ನು ಬಂಧಿಸಿದ್ದಾರೆ.

ವಿದೇಶದಿಂದ ಡ್ರಗ್ಸ್ ರಪ್ತು ಮಾಡಿಕೊಂಡು ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪಿ ಧೀರೇಶ್ ಕುಟುಮ್ ಎಂಬಾತನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಸ್ಸಾಂ ಮೂಲದವನಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ರಮೇಶ್ ರೆಡ್ಡಿ ಲೇಔಟ್‌ನಲ್ಲಿ ವಾಸವಾಗಿದ್ದ. ಬೆಂಗಳೂರಿನಿಂದಲೇ ರಾಜ್ಯ ಸೇರಿ ವಿವಿಧ ರಾಜ್ಯಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಈ ಬಗ್ಗೆ ಖಚಿತ ಮಾಹಿತಿ ಪಡೆದ ಕೇರಳ ಪೊಲೀಸ್ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಆಹಾರದ ಪ್ಯಾಕೇಟ್‌ನಲ್ಲಿ ಪೂರೈಕೆ:

ದಾಳಿ ವೇಳೆ ಆರೋಪಿ ಮನೆಯಲ್ಲಿ ಕೋಟ್ಯಂತರ ರು.ಮೌಲ್ಯದ 4 ಪ್ಯಾಕೆಟ್‌ಗಳಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಪೊಲೀಸರಿಗೆ ಅನುಮಾನ ಬಾರದ ರೀತಿಯಲ್ಲಿ ಮಕ್ಕಳು ಸೇವಿಸುವ ಆಹಾರ ಸೆರೆಲಾಕ್ ಪ್ಯಾಕೆಟ್‌ಗಳ ಒಳಗೆ ಮಾದಕ ವಸ್ತುವನ್ನು ಅಡಗಿಸಿದ್ದ. ಮನೆಯಲ್ಲಿ 15 ಕ್ಕೂ ಹೆಚ್ಚು ಖಾಲಿ ಸೆರೆಲಾಕ್ ಕವರ್‌ಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸ್ವಿಗ್ಗಿ ಮತ್ತು ಜೊಮ್ಯಾಟೋ ವಿತರಕರಂತೆ ಬಂಧಿತ ಪೆಡ್ಲರ್ ಡ್ರಗ್ಸ್‌ನ್ನು ಬೇರೆ ಬೇರೆ ಸ್ಥಳಗಳಿಗೆ ಪೂರೈಕೆ ಮಾಡುತ್ತಿದ್ದ. ಔಷಧಿಗಳ ಕವರ್‌ನಲ್ಲಿ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ಇತ್ತೀಚೆಗೆ ಕೇರಳದ ಮಲಪ್ಪುರಂನಲ್ಲಿ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅವರು ನೀಡಿದ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆ ಅನುಮಾನಾಸ್ಪದ ಸಾವು:ಪತಿಯೇ ಕೊಲೆ ಮಾಡಿರುವ ಶಂಕೆ
ರೇಷ್ಮೆ ಭವನಕ್ಕೆ 628 ಮರಗಳಿಗೆ ಕೊಡಲಿ: ನಾಗರಿಕರಿಂದ ಆಕ್ಷೇಪಣೆ ಕೋರಿದ ಜಿಬಿಎ