ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪೂರ್ವಿಕರ ಆಚರಣೆಯಂತೆ ಸುತ್ತಲ ಏಳು ಹಳ್ಳಿಯ ಬಂಡಿ, ಮೂರೂರಿನ ತೇರು, ಬೀರನಹಳ್ಳಿ ಹೂವಿನ ಬಂಡಿಯನ್ನು ಅಲಂಕಾರ ಮಾಡಿ ಪೂಜಿಸಿ ಶ್ರದ್ಧಾಭಕ್ತಿಯಿಂದ ಜಾತ್ರೆಗೆ ಎಳೆದು ತಂದಿದ್ದರು. ಸುತ್ತಲ ಹತ್ತಾರು ಹಳ್ಳಿಯ ಭಕ್ತರು ಬಂಡಿಗೆ ಎಡೆ ಇಟ್ಟು ಪೂಜಿಸುತ್ತಾರೆ. ದೇವಾಲಯದ ಮುಂದೆ ಹಾಕಲಾಗಿದ್ದ ಕೆಂಡದ ಹೊಂಡದಲ್ಲಿ ಬಂಡಿಗಳು, ರಥ, ಹರಕೆ ಹೊತ್ತ ಶ್ರೀದೇವಿಯ ಭಕ್ತರು ಕೆಂಡದ ಹೊಂಡ ಹಾಯ್ದು ಭಕ್ತಿ ಪ್ರದರ್ಶಿಸಿದರು. ದೇವಾಲಯದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ, ಮಹಾಮಂಗಳಾರತಿ ನಂತರ ಜಾತ್ರೆಗೆ ಬಂದ ಭಕ್ತರಿಗೆ ಅನ್ನಸಂರ್ಪಣೆ ವ್ಯವಸ್ಥೆ ಮಾಡಿದ್ದರು. ಸಿಡಿ ಹಾರಿಸಬೇಕೆ, ಬೇಡವೇ ಎನ್ನು ವಿಚಾರದಲ್ಲಿ ಗೊಂದಲ ಉಂಟಾಗಿದ್ದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಡಿವೈಎಸ್ಪಿ ಶಾಲು ಗ್ರಾಮದಲ್ಲಿದ್ದು ಸಿಡಿ ಉತ್ಸವ ಆಚರಿಸದಂತೆ ಮನವೊಲಿಸಿದ ಕಾರಣ ಸಿಡಿ ಉತ್ಸವ ನಡೆಯಲಿಲ್ಲ.
ಉಪವಿಭಾಗಾಧಿಕಾರಿ ಮಾರುತಿ, ರೆವಿನ್ಯೂ ಇನ್‌ಸ್ಪೆಕ್ಟರ್ ಯೋಗಾನಂದ, ಗ್ರಾಮಾಧಿಕಾರಿ ಗುರುಮೂರ್ತಿ ಸ್ಥಳದಲ್ಲಿದ್ದು, ಅಗತ್ಯ ವ್ಯವಸ್ಥೆ ಮಾಡಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರತ್ನಮ್ಮ ಶಿವಣ್ಣ, ಗ್ರಾಮದ ಮುಖಂಡರಾದ ಎಚ್.ಕೆ.ಮಹೇಶ್, ಜೈಪ್ರಕಾಶ್. ಎಚ್.ಜೆ.ರಾಮೇಗೌಡ, ಹರೀಶ್, ವಿವಿಧ ಗ್ರಾಮಗಳ ಪಂಚಾಯ್ತಿ ಸದಸ್ಯರಾದ ಮೋಹನ್, ವೀಣಾ, ಭಾಗ್ಯಮ್ಮ, ಮಾಜಿ ಅಧ್ಯಕ್ಷೆ ರಂಗಮ್ಮ. ದೇವರಾಜು, ಜಂಬೂರಯ್ಯ, ಲಕ್ಷ್ಮಮ್ಮ ಜವರಪ್ಪ ಭಾಗವಹಿಸಿದ್ದರು. ಅರ್ಚಕರಾದ ರವಿಶಂಕರ್, ಶ್ರೀಕಂಠಮೂರ್ತಿ, ಉಮಾಶಂಕರ್ ಪೂಜಾ ಕೈಂಕರ್ಯ ನೆಡರವೇರಿಸಿದರು.ಜಾತ್ರೆ ಮಹೋತ್ಸವದಲ್ಲಿ ಸಿಡಿ ಆಚರಣೆ ವಿಷಯದಲ್ಲಿ ಗೊಂದಲ ಉಂಟಾದ ಕಾರಣ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.