ಎನ್ನೆಸ್ಸೆಸ್‌ ಶಿಬಿರಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ

KannadaprabhaNewsNetwork |  
Published : Mar 23, 2025, 01:35 AM IST
7 | Kannada Prabha

ಸಾರಾಂಶ

ಶಿಬಿರಾರ್ಥಿಗಳು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಆ ರೀತಿ ಗ್ರಾಮಸ್ಥರ ಮನಗೆಲ್ಲುವ ಕೆಲಸ ಮಾಡಬೇಕು

ಕನ್ನಡಪ್ರಭ ವಾರ್ತೆ ಮೈಸೂರುಎನ್ನೆಸ್ಸೆಸ್‌ ಶಿಬಿರಗಳಿಂದ ವ್ಯಕ್ತಿತ್ವ ವಿಕಸನ ಆಗುತ್ತದೆ. ಜೊತೆಗೆ ಸಹಬಾಳ್ವೆ, ಅನೋನ್ಯತೆ, ಸರಿಯಾದ ನಡವಳಿಕೆ ಕಲಿಯಬಹುದು ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಅಬ್ದುಲ್‌ ರಹಿಮಾನ್‌ ಹೇಳಿದರು.ತಮ್ಮ ಕಾಲೇಜಿನ ವತಿಯಿಂದ ಮೈಸೂರು ತಾಲೂಕು ಸಾಹುಕಾರಹುಂಡಿಯಲ್ಲಿ ಶನಿವಾರದಿಂದ ಏರ್ಪಡಿಸಿರುವ ಎನ್ನೆಸ್ಸೆಸ್‌ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಕಾಲೇಜಿನಲ್ಲಿ ಮೂರು ಸಾವಿರ ವಿದ್ಯಾರ್ಥಿನಿಯರಿದ್ದು, ಈ ಪೈಕಿ ನೂರು ಮಂದಿಗೆ ಮಾತ್ರ ಎನ್ಎಸ್ಎಸ್‌ ಶಿಬಿರದಲ್ಲಿ ಭಾಗವಹಿಸುವ ಹಾಗೂ ಈ ರೀತಿಯ ಗುಣಗಳನ್ನು ಕಲಿತು, ಜೀವನದಲ್ಲಿ ಅಳವಡಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಇದರ ಸದುಪಯೋಗ ಮಾಡಿಕೊಳ್ಳಿ ಎಂದರು.ಶಿಬಿರಾರ್ಥಿಗಳು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಆ ರೀತಿ ಗ್ರಾಮಸ್ಥರ ಮನಗೆಲ್ಲುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಸೇವಾ ಮನೋಭಾವ, ನಾಯಕತ್ವ ಗುಣ, ಗ್ರಾಮೀಣ ಪ್ರದೇಶಗಳ ಬಗ್ಗೆ ಅರಿವು ಮೂಡಿಸಿಕೊಳ್ಳಲು ಎನ್ಎಸ್ಎಸ್‌ ಶಿಬಿರಗಳು ಸಹಕಾರಿಯಾಗುತ್ತವೆ ಎಂದರು.ಮುಖ್ಯ ಅತಿಥಿಯಾಗಿದ್ದ ಹಾಲು ಉತ್ಪಾದಕರ ಸಂಘದ ಅಧ್ಚಕ್ಷ ಹಾಗೂ ಗ್ರಾಪಂ ಮಾಜಿ ಸದಸ್ಯ ಬಿ. ರಮೇಶ್‌ ಮಾತನಾಡಿ, ಗ್ರಾಮದ ಚರಂಡಿಗಳ ಸ್ವಚ್ಥತಾ ಕಾರ್ಯದಲ್ಲಿ ಸ್ಥಳೀಯ ಆಡಳಿತದೊಂದಿಗೆ ಶಿಬಿರಾರ್ಥಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಗ್ರಾಪಂ ಮಾಜಿ ಸದಸ್ಯ ಡಿ. ಶ್ರೀರಾಂ ಮಾತನಾಡಿ, ಗ್ರಾಮಸ್ಥರೆಲ್ಲರೂ ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡಲು ಸಿದ್ಧರಿದ್ದಾರೆ ಎಂದರು.ಯುವ ಮುಖಂಡ ಪ್ರಜ್ವಲ್‌ ಮಾತನಾಡಿ, ತಮ್ಮ ಟ್ರಸ್ಟ್‌ ಮೂಲಕ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಮುಂದೆಯೂ ಮುಂದುವರೆಸಲು ಸಹಕರಿಸಿ ಎಂದು ಕೋರಿದರು.ಕಾಲೇಜಿನ ಅಧ್ಯಾಪಕ ಕಾರ್ಯದರ್ಶಿ ಪ್ರೊ.ಜಿ.ಕೆ.ರವಿಶಂಕರ್‌ ಮಾತನಾಡಿ, ಎನ್ಎಸ್ಎಸ್‌ನಲ್ಲಿ ಕಲಿಯುವ ಪಾಠ ಜೀವನ ಪರ್ಯಂತ ನೆನಪಿನಲ್ಲಿ ಇರುತ್ತದೆ ಎಂದರು.ಗ್ರಾಪಂ ಮಾಜಿ ಅಧ್ಯಕ್ಷೆ ಶ್ರೀಮತಿ ಪುರುಷೋತ್ತಮ್‌, ಸದಸ್ಯೆ ಸುನೀತಾ ಮಾದೇವ್‌ ಮಾತನಾಡಿದರು. ಗ್ರಾಮದ ಮುಖಂಡರಾದ ಫಾರಂ ಶಿವಣ್ಣ, ಡಿ. ಪುಟ್ಟಸ್ವಾಮಿ, ದೊರೆಸ್ವಾಮಿ ನಾಯ್ಕ, ಹೊನ್ನೇಗೌಡ, ದೀಪು ಸಿದ್ದೇಗೌಡ, ಚೇತನ್‌ ಮುಖ್ಯ ಅತಿಥಿಗಳಾಗಿದ್ದರು. ಪ್ರಾಧ್ಯಾಪಕರಾದ ಡಾ.ವಾಸುದೇವಶೆಟ್ಟಿ, ಡಾ.ಕೆ.ಎಸ್‌. ನಟರಾಜ್‌, ಗೋವಿಂದರಾಜು, ಸಿದ್ದೇಗೌಡ, ಪ್ರಭಾಕರ್‌, ಡಾ.ಪರಶುರಾಮಮೂರ್ತಿ, ಡಾ.ವಿ.ಆರ್‌. ರಮೇಶ್‌ ಬಾಬು, ಎನ್ಎಸ್ಎಸ್‌ ಕಾರ್ಯಕ್ರಮಾಧಿಕಾರಿ ಎಚ್‌.ಎಂ. ಲತಾ ರಾಣಿ, ,ಸಿಬ್ಬಂದಿ ಮಂಜು, ಹಿರಿಯ ಎನ್ಎಸ್ಎಸ್‌ ಪ್ರತಿನಿಧಿ ಆನಂದ್‌, ಅಡುಗೆ ಮಂಜು ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಿ.ಎಸ್‌. ಕೆಂಡಗಣ್ಣೇಗೌಡ ಸ್ವಾಗತಿಸಿದರು. ಅಮೃತಾ ನಿರೂಪಿಸಿದರು. ಎನ್ಎಸ್ಎಸ್‌ ಕಾರ್ಯಕ್ರಮಾಧಿಕಾರಿ ಡಾ.ಎಚ್‌.ಜೆ. ಭೀಮೇಶ್‌ ವಂದಿಸಿದರು. ---ಬಾಕ್ಸ್‌...ಜಾನಪದ ಶೈಲಿಯಲ್ಲಿ ಉದ್ಘಾಟನೆ, ಎನ್ನೆಸ್ಸೆಸ್‌ ಮಹಿಳಾ ಅಧಿಕಾರಿಗೆ ಬಾಗಿನ ಅರ್ಪಣೆಫೋಟೋ 22 ಎಂವೈಎಸ್‌ 8--ಮೈಸೂರು ತಾಲೂಕು ಸಾಹುಕಾರಹುಂಡಿಯಲ್ಲಿ ಶನಿವಾರ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಎನ್ನೆಸ್ಸೆಸ್‌ ವಾರ್ಷಿಕ ಶಿಬಿರವನ್ನು ಜಾನಪದ ಶೈಲಿಯಲ್ಲಿ ಉದ್ಘಾಟಿಸಿ, ಮಹಿಳಾ ಕಾರ್ಯಕ್ರಮಾಧಿಕಾರಿ ಎಚ್‌.ಎಂ. ಲತಾರಾಣಿ ಅವರಿಗೆ ಬಾಗಿನ ಅರ್ಪಿಸಲಾಯಿತು.ಹಾರೆ, ಗುದ್ದಲಿ, ಪಿಕಾಸಿ, ಮೊರ, ಒನಕೆ, ರಾಗಿ ರಾಶಿ, ಸೇರು, ಬೆಲ್ಲ, ಹಸಿರು ಹುಲ್ಲು, ರಾಗಿ ಬೀಸುವ ಕಲ್ಲು, ಗುಂಡು ಕಲ್ಲು ಮೊದಲಾದವುಗಳನ್ನು ಇಟ್ಟು, ಪೂಜಿಸಿ, ಶಿಬಿರಕ್ಕೆ ಚಾಲನೆ ನೀಡಲಾಯಿತು. ಊರಿನ ಮುಖಂಡರು ಆ ರಾಶಿಗೆ ಪೂಜೆ ಸಲ್ಲಿಸಿದರು. ನಂತರ ಊರಿನ ಮಹಿಳೆಯರು ಎನ್ಎಸ್ಎಸ್‌ ಕಾರ್ಯಕ್ರಮಾಧಿಕಾರಿ ಲತಾರಾಣಿ ಅವರಿಗೆ ಹರಿಶಿನ, ಕುಂಕುಮ, ಎಲೆ- ಅಡಿಕೆ, ಬೆಲ್ಲ ಮೊದಲಾವುಗಳನ್ನ ನೀಡುವ ಮೂಲಕ ಬಾಗಿನ ಅರ್ಪಿಸಿದರು.ಈಗಾಗಲೇ ಫ್ರಿಜ್ಡ್, ವಾಷಿಂಗ್‌ ಮಿಷನ್‌, ಗ್ರೈಂಡರ್‌, ಮಿಕ್ಸಿ ಮೊದಲಾದವು ಬಂತು ಈಗಿನ ಪೀಳಿಗೆಗೆ ಜಾನಪದ ಪರಿಕರಗಳೇ ಗೊತ್ತಿಲ್ಲ. ಅದನ್ನು ಪರಿಚಯಿಸುವ ಹಾಗೂ ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶದಿಂದ ಈ ರೀತಿ ವ್ಯವಸ್ಥೆ ಮಾಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''