ಮಡಿಕೇರಿ: ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ಶ್ರೀ ರಾಮೋತ್ಸವ ಆಡಳಿತ ಮಂಡಳಿ ವತಿಯಿಂದ ಏ.5 ಮತ್ತು 6 ರಂದು ನಡೆಯಲಿರುವ ಮೂವತ್ತೈದನೇ ರಾಮೋತ್ಸವದ ಪೂರ್ವಭಾವಿ ಸಭೆ ನಡೆಯಿತು.
ಶ್ರೀ ಕೋದಂಡರಾಮ ದೇವಾಲಯದಲ್ಲಿ ಸಮಿತಿಯ ಅಧ್ಯಕ್ಷ ಕೆ.ಎಂ.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಉಪಸಮಿತಿಗಳ ಪದಾಧಿಕಾರಿಗಳೊಡನೆ ಚರ್ಚಿಸಲಾಯಿತು.ರಾಮೋತ್ಸವದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ದೇಣಿಗೆ ಸಂಗ್ರಹ, ಅನ್ನದಾನಕ್ಕೆ ದಾನಿಗಳಿಂದ ಬೇಕಾದ ಸಾಮಾಗ್ರಿಗಳನ್ನು ಸಂಗ್ರಹಿಸಲು ತೀರ್ಮಾನಿಸಲಾಯಿತು.
ಸಮಿತಿ ಅಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ, ಈಗಾಗಲೇ ರಾಮೋತ್ಸವದ ಸಿದ್ಧತೆಗಳು ಆರಂಭವಾಗಿದ್ದು, ಎಲ್ಲಾ ಸಮಿತಿಗಳು ತಮಗೆ ಒಪ್ಪಿಸಿರುವ ಜವಾಬ್ಧಾರಿಯನ್ನು ಸಮರ್ಪವಾಗಿ ನಿರ್ವಹಿಸುತ್ತಿದ್ದಾರೆ. ನಾಡಿನ ಜನತೆ ರಾಮೋತ್ಸವಕ್ಕೆ ತಮ್ಮ ತನುಮನಧನ ಸಹಕಾರವನ್ನು ನೀಡುವ ಮೂಲಕ ಜಾತಿ, ಮತ, ಭೇದವಿಲ್ಲದೆ ಒಗ್ಗಟ್ಟಿನಿಂದ ಭಾಗವಹಿಸುವಂತೆ ಮನವಿ ಮಾಡಿದರು.ಸಭೆಯಲ್ಲಿ ಶ್ರೀ ಕೋದಂಡ ರಾಮ ದೇವಾಲಯ ಟ್ರಸ್ಟ್ನ ಅಧ್ಯಕ್ಷ ನಂಜುಂಡ, ದೇವಾಲಯದ ಮುಖ್ಯ ಸಲಹೆಗಾರ ಜಿ.ರಾಜೇಂದ್ರ, ಸಲಹೆಗಾರ ಸಂಪತ್ತು, ಗೌಡ ಸಮಾಜಗಳ ಒಕ್ಕೂಟಗಳ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಮಡಿಕೇರಿ ಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಕನ್ನಂಡ ಸಂಪತ್ತು, ರಾಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಸಹ ಕಾರ್ಯದರ್ಶಿಗಳಾದ ಚಂದನ್ ನಂದರಬೆಟ್ಟು, ಗೋಪಿನಾಥ್, ಉಪಾಧ್ಯಕ್ಷರಾದ ಅಂಬೆಕಲ್ ನವೀನ್ ಕುಶಾಲಪ್ಪ, ಹೆಚ್.ಆರ್.ಜಗದೀಶ್, ಖಜಾಂಚಿ ಡಾ.ಮೋಹನ್ ಅಪ್ಪಾಜಿ, ಮಹಿಳಾ ಸಮಿತಿ ಅಧ್ಯಕ್ಷೆ ಭಾರತಿ ರಮೇಶ್, ಕಾರ್ಯಾಧ್ಯಕ್ಷೆ ಜಯಂತಿ ಶೆಟ್ಟಿ, ಆಹಾರ ಸಮಿತಿ ಅಧ್ಯಕ್ಷ ಎಚ್.ವಿ.ಸುಧಾಕರ್, ಮೆರವಣಿಗೆ ಸಮಿತಿ ಅಧ್ಯಕ್ಷ ಪರಮೇಶ್, ವೇದಿಕೆ ಸಮಿತಿ ಅಧ್ಯಕ್ಷ ಗುರುಪ್ರಸಾದ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಮಹೇಶ್, ಸ್ವಾಗತ ಸಮಿತಿ ಅಧ್ಯಕ್ಷ ವಿನೋದ್, ಭಜನಾ ಸಮಿತಿ ಅಧ್ಯಕ್ಷ ಮಹೇಶ್, ಮಹಿಳಾ ಅಧ್ಯಕ್ಷೆ ವಿಶಾಲಾಕ್ಷಿ, ಜ್ಯೋತಿ ಯುವ ಸಂಘದ ಅಧ್ಯಕ್ಷ ಎಚ್.ಎನ್.ವಿಶ್ವ, ಮಡಿಕೇರಿ ಸವಿತಾ ಸಮಾಜದ ಅಧ್ಯಕ್ಷ ಮಧು, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚೋಕೋಡಿ ಅಪ್ಪಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು. ಟ್ರಸ್ಟಿ ಮಂಜುನಾಥ್ ನಿರೂಪಿಸಿದರು.