ಯಾವುದೇ ಸಮಾಜ ಅಭಿವೃದ್ಧಿ ಹೊಂದಲು ಶಿಕ್ಷಣ ಅಗತ್ಯ

KannadaprabhaNewsNetwork |  
Published : Feb 10, 2025, 01:47 AM IST
ಶಾಸಕ ಕೆ.ಎಚ್‌.ಪುಟ್ಟಸ್ವಾಮಿಗೊಡ ಸಲಹೆ | Kannada Prabha

ಸಾರಾಂಶ

ಸಮಾಜದ ಮುಖ್ಯ ವಾಹಿನಿಗೆ ಸೇರ್ಪಡೆಗೊಳ್ಳಲು ಶಿಕ್ಷಣ ಪ್ರಮುಖವಾದ ಸಾಧನ, ಅದನ್ನು ಗಳಿಸಿದರೆ ಸಮಾಜದಲ್ಲಿ ಗೌರವ, ಸ್ಥಾನಮಾನ ದೊರೆಯುತ್ತದೆ. ರಾಜ್ಯದಲ್ಲಿ ಜನಸಂಖ್ಯೆ ಯಲ್ಲಿ ದೊಡ್ಡ ಸಮಾಜ ವಾಗಿದ್ದೇವೆ. ಕುರುಬ ಸಮುದಾಯ ಸದೃಢವಾಗಬೇಕಾದರೆ ಆ ವರ್ಗದ ಎಲ್ಲರೂ ಸಂಘಟಿತರಾಗಬೇಕು,

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಹಿಂದುಳಿದ ಮತ್ತು ಕೆಳವರ್ಗದವರು ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಆ ಸಮುದಾಯದ ಮಕ್ಕಳು ವಿದ್ಯಾವಂತರಾಗಬೇಕು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.

ನಗರದ ಎ.ಇ.ಎಸ್. ನ್ಯಾಷನಲ್ ಕಾಲೇಜಿನ ಆವರಣದಲ್ಲಿ, ಕುರುಬ ಸರ್ಕಾರಿ ಮತ್ತು ಸರ್ಕಾರೇತರ ನೌಕರರ ಕ್ಷೇಮಭಿವೃದ್ಧಿ ಸಂಘ, ತಾಲ್ಲೂಕು ಕುರುಬ ಸಂಘ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ, ವತಿಯಿಂದ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯೆ ಸಾಧಕರ ಸೊತ್ತು

ವಿದ್ಯೆ ಯಾವುದೇ ಸಮುದಾಯದ ಅಥವಾ ಯಾರೊಬ್ಬರ ಸೊತ್ತಲ್ಲ, ಅದು ಸಾಧಕರಿಗೆ ಒಲಿಯುತ್ತದೆ, ಬಡತನದಿಂದ ಹೊರಬರಲು, ಸಮಾಜದ ಮುಖ್ಯ ವಾಹಿನಿಗೆ ಸೇರ್ಪಡೆಗೊಳ್ಳಲು ಶಿಕ್ಷಣ ಪ್ರಮುಖವಾದ ಸಾಧನ, ಅದನ್ನು ಗಳಿಸಿದರೆ ಸಮಾಜದಲ್ಲಿ ಗೌರವ, ಸ್ಥಾನಮಾನ ದೊರೆಯುತ್ತದೆ. ಪುರಸ್ಕಾರ ನೀಡುವುದು, ಕೇವಲ ಅವರಿಗೆ ಮಾತ್ರ ಸೀಮಿತವಲ್ಲ, ಇತರ ಮಕ್ಕಳಿಗೆ ಅದು ಪ್ರೋತ್ಸಾಹವಾಗಬೇಕು. ಎಂದು ಕಿವಿ ಮಾತು ಹೇಳಿದರು.ಕೆ.ಪಿ.ಸಿ.ಸಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ, ಮಾತನಾಡಿ, ಕರ್ನಾಟಕದಲ್ಲಿ ದೇವರಾಜ್ ಅರಸ್ ಮತ್ತು ಸಿದ್ದರಾಮಯ್ಯ ಎರಡು ಕಣ್ಣುಗಳು, ಬಡವರ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ದೇಶಕ್ಕೆ ಅಂಬೇಡ್ಕರ್ ಸಂವಿಧಾನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಹಾಗೂ 8 ನೇ ತರಗತಿಯಿಂದಲೇ ಪಠ್ಯ ಕ್ರಮದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಜನಾಂಗ ಸಂಘಟಿತವಾಗಲಿ

ಕರ್ನಾಟಕ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ, ನಾಗರಾಜ್ ಆರ್ ಜುಮ್ಮಣ್ಣ ಮಾತನಾಡಿ, ರಾಜ್ಯದಲ್ಲಿ ಜನಸಂಖ್ಯೆ ಯಲ್ಲಿ ದೊಡ್ಡ ಸಮಾಜ ವಾಗಿದ್ದೇವೆ. ಕುರುಬ ಸಮುದಾಯ ಸದೃಢವಾಗಬೇಕಾದರೆ ಆ ವರ್ಗದ ಎಲ್ಲರೂ ಸಂಘಟಿತರಾಗಬೇಕು, ಒಗ್ಗೂಡಿ ಸಾಗಬೇಕು ಎಂದು ಸಲಹೆ ಮಾಡಿದರು. ಸಮುದಾಯದ ವಿದ್ಯಾವಂತರು ಮತ್ತು ಅಧಿಕಾರಿಗಳು ಸಮುದಾಯದ ಸಂಘಟನೆಗೆ ಒತ್ತು ನೀಡಬೇಕು, ಸಂಘದ ಕಾರ್ಯಕ್ರಮಗಳಲ್ಲಿ ತಪ್ಪದೇ ಪಾಲ್ಗೊಳ್ಳಬೇಕು, ಸಮಾಜದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಆದರೆ ಸಾಧನೆ ಇನ್ನು ಬಾಕಿ ಇದೆ, ವಿದ್ಯಾರ್ಥಿಗಳು ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಿ ಸಾಧನೆ ಮಾಡಬೇಕು ಎಂದು ತಿಳಿಸಿದರು.ಪ್ರತಿಭಾವಂತರಿಗೆ ಸನ್ಮಾನ

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹಾಗೂ ಸಮುದಾಯದವರಿಗೆ ಸಮುದಾಯ ಭವನ ನಿರ್ಮಾಣ ಮಾಡಿಕೊಳ್ಳಲು ನಿವೇಶನ ನೀಡಬೇಕಾಗಿ ಮನವಿ ಪತ್ರವನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ, ಚೆನ್ನಪ್ಪ ಗೌಡ ನಾಯ್ಕರ್, ಸರ್ಕಾರಿ ನೌಕರರ ಸಂಘ ಉಪಾಧ್ಯಕ್ಷ ಅಂಜಿನಪ್ಪ, ಡಾ. ಚಂದ್ರಶೇಖರ್, ಡಾ. ಚಂದ್ರಪ್ಪ, ಗಂಗಾಧರಪ್ಪ, ರೆಡ್ಡಪ್ಪ, ಲೆಂಕಪ್ಪ, ರವಿಕುಮಾರ್, ಪ್ರಭ ಚಂದ್ರಣ್ಣ, ರಾಮಚಂದ್ರ, ರಂಗರಾಜು, ಶಿವ ಕುಮಾರ್, ಶಿವಶಂಕರ್,ಕಲ್ಪನಾ ರಮೇಶ್,ನಾಗರಾಜು ಮಹದೇವ್, ಸೇರಿದಂತೆ ಮುಂತಾದ ಸಮುದಾಯದ ಮುಖಂಡರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!