ನಾಳಿನ ಸಂಪುಟ ಸಭೆಯಲ್ಲಿ ‘ಎತ್ತಿನಹೊಳೆ’ ಚರ್ಚೆ

KannadaprabhaNewsNetwork |  
Published : Jul 01, 2025, 12:49 AM IST
೩೦ಕೆಎಲ್‌ಆರ್-೧ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್. | Kannada Prabha

ಸಾರಾಂಶ

ಗ್ರಾಮೀಣಾ ರಸ್ತೆಗಳ ಅಭಿವೃದ್ದಿಗೆ ೨೫ ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದರೂ ಅಧಿಕಾರಿಗಳ ನಿರ್ಲಕ್ಷತೆಯಿಂದಾಗಿ ವಿಳಂಬವಾಗುತ್ತಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗೆ ೧೫ ದಿನಗಳ ಕಾಲವಕಾಶ ನೀಡಿದ್ದು ಅದರೊಳಗೆ ಮಾಡದಿದ್ದರೆ ಕ್ರಮ ಜರುಗಿಸುವುದಾಗಿ ಸಚಿವ ಸುರೇಶ್‌ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರ ನಂದಿ ಗಿರಿಧಾಮದಲ್ಲಿ ಜು.2ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಎತ್ತಿನಹೊಳೆ ಯೋಜನೆ ಚರ್ಚೆಗೆ ಆದ್ಯತೆ ನೀಡಲಾಗುವುದು. ಕೋಲಾರ ಜಿಲ್ಲೆಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ಯೋಜನೆಯು ಪ್ರಗತಿಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.

ನಗರದ ಜಿಪಂನಲ್ಲಿ ನಡೆದ ಕೆಡಿಪಿ ಸಭೆಯ ನಂತರ ಮಾತನಾಡಿದ ಸಚಿವರು, ಎ.ಪಿ.ಎಂ.ಸಿ. ಜಾಗದ ಮರು ಪರಿಷ್ಕರಣೆ, ಪೊಲೀಸ್ ಠಾಣೆಗಳ ಸ್ಥಾಪನೆ, ಅಂತರಗಂಗೆಯಿಂದ ಕೋಲಾರದವರೆಗೆ ರಾಜಕಾಲುವೆಗಳ ಒತ್ತುವರಿ ತೆರವು ಮಾಡಲು ಕ್ರಮ ಜರುಗಿಸಲಾಗುವುದು ಎಂದರು.

ಮಾವಿಗೆ ಬೆಂಬಲ ಬೆಲೆ

ಜಿಲ್ಲೆಯಲ್ಲಿ ಅತಿಹೆಚ್ಚು ಮಾವು ಬೆಳೆಯಲಾಗುತ್ತಿದ್ದು, ಸರ್ಕಾರದ ಬೆಂಬಲ ಬೆಲೆ ೪ ರೂ ನಿಗದಿಪಡಿಸಿದೆ, ಮಾವು ಉಪ ಉತ್ಪನ್ನಗಳ ಕೈಗಾರಿಕೆಗಳು ಮೊದಲು ೪ ರೂ.ಗಳಿಗೆ ಖರೀದಿಸುತ್ತಿದ್ದನ್ನು ೨ ರೂ.ಗೆ ಇಳಿಕೆ ಮಾಡಿರುವುದು ಖಂಡನೀಯ. ಜಿಲ್ಲಾಧಿಕಾರಿಗಳು ಈ ಕುರಿತು ಕೈಗಾರಿಕೆಗಳಿಗೆ ಸೂಚನೆ ನೀಡಬೇಕು. ಆಗಲೂ ಪಾಲನೆ ಮಾಡದಿದ್ದರೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಆರ್.ಡಿ.ಪಿ.ಆರ್ ಇಲಾಖೆಗೆ ಸಂಬಂಧಿಸಿದಂತೆ ಗ್ರಾಮೀಣಾ ರಸ್ತೆಗಳ ಅಭಿವೃದ್ದಿಗೆ ೨೫ ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದರೂ ಅಧಿಕಾರಿಗಳ ನಿರ್ಲಕ್ಷತೆಯಿಂದಾಗಿ ವಿಳಂಬವಾಗುತ್ತಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗೆ ೧೫ ದಿನಗಳ ಕಾಲವಕಾಶ ನೀಡಿದ್ದು ಅದರೊಳಗೆ ಮಾಡದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಬಾಲ್ಯವಿವಾಹ ಅಪರಾಧ೧೮ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ವಿವಾಹ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಅಂತಹ ಪ್ರಕರಣಗಳ ವಿರುದ್ದು ಶಿಸ್ತು ಕ್ರಮ ಜರುಗಿಸಬೇಕು, ಆದರೆ ಶಿಸ್ತು ಕ್ರಮವೆಂದರೆ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಲಾಗುವುದು. ಆದರೆ ಯಾವುದೇ ಪ್ರಕರಣ ಮುನ್ನ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸುವ ಮೂಲಕ ವಯಸ್ಸಿನ ಧೃಢೀಕರಣ ಪಡೆಯಬೇಕು ಎಂದು ತಿಳಿಸಿದರು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸಬೇಕುಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕೆಡಿಪಿ ಸಭೆಯಲ್ಲಿ ಸಮರ್ಪಕ ಮಾಹಿತಿಗಳನ್ನು ನೀಡದ ವಿರುದ್ದ ನೋಟಿಸ್ ಜಾರಿ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಇಲಾಖೆಯ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೂ ಕ್ರಮಕೈಗೊಳ್ಳದೆ ನಿರ್ಲಕ್ಷಿಸಿದ್ದಾರೆ ಎಂಬ ಆರೋಪಗಳ ವಿರುದ್ದ ಎಚ್ಚರಿಕೆ ನೀಡಲಾಗಿದೆ. ಈ ಹಿಂದೆ ಎಸ್.ಎಸ್.ಎಲ್.ಸಿ. ೨೦ನೇ ಸ್ಥಾನದಲ್ಲಿದ್ದನ್ನು ೧೪ನೇ ಸ್ಥಾನಕ್ಕೆ ತರಲಾಗಿದೆ. ಮುಂದಿನ ವರ್ಷ ೫ನೇ ಸ್ಥಾನದೊಳಗೆ ಇರಬೇಕೆಂದು ಡಿಡಿಪಿಐಗೆ ಟಾಸ್ಕ್ ನೀಡಲಾಗಿದೆ ಎಂದರು. ಜಿಲ್ಲೆಯಲ್ಲಿ ೪೭ ಕ್ರಷರ್‌ಗಳಿದ್ದು ಈ ಪೈಕಿ ಮಾಲೂರು ತಾಲೂಕು ಒಂದರಲ್ಲಿಯೇ ೨೫ ಕ್ರಷರ್‌ಗಳಿದ್ದು, ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಷರ್ ಪರವಾನಗಿ ಸ್ಥಗಿಸಗೊಳಿಸಲು ಸೂಚಿಸಿದೆ. ಇತರೆ ತಾಲೂಕುಗಳಲ್ಲಿ ಪರಿಶೀಲಿಸಿ ವಿತರಿಸಲು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದರು. ನಗರ ಸಾರಿಗೆ ಸದ್ಬಳಕೆಯಾಗಲಿ

ನಗರಸಾರಿಗೆ ಸಾರ್ವಜನಿಕರು ಸದ್ಬಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಖಾಲಿ ಸಂಚಾರ ಮಾಡಿ ನಷ್ಟ ಅನುಭವಿಸಲಿದ್ದು ಮುಂದೆ ನಗರ ಸಂಚಾರ ರದ್ದುಗೊಳಿಸುವುದು ಅನಿವಾರ್ಯವಾಗುವುದು. ಅದಕ್ಕೆ ಅವಕಾಶ ನೀಡದಂತೆ ಸಾರ್ವಜನಿಕರು ನಗರ ಸಂಚಾರ ಸದ್ವಳಿಸಿಕೊಳ್ಳಬೇಕು. ಯಾವುದೇ ಯೋಜನೆಗಳ ಸದ್ಬಳಿಸಿಕೊಂಡಾಗ ಮಾತ್ರ ಅಭಿವೃದ್ದಿ ಕಾಣಲು ಸಾಧ್ಯ ಎಂದು ತಿಳಿಸಿದರು. ಕೋಮುಲ್‌: 3ನೇ ವ್ಯಕ್ತಿಗೂ ಅವಕಾಶ

ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಕುರಿತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರಾದ ನಾರಾಯಣಸ್ವಾಮಿ, ನಂಜೇಗೌಡರು ಅಲ್ಲದೆ ಮೂರನೇಯ ವ್ಯಕ್ತಿಗೂ ಅವಕಾಶಗಳಿವೆ. ಆಯ್ಕೆ ಮಾಡವುದು ನಿರ್ದೇಶಕರಿಗೆ ಬಿಟ್ಟ ವಿಚಾರವಾಗಿದ್ದು ಅದು ಅವರ ಹಕ್ಕು. ಇಬ್ಬರು ಶಾಸಕರು ಒಂದೇ ಪಕ್ಷದವರಾದರೆ ಆಕಾಂಕ್ಷಿಗಳಾಗಬಾರದೆಂಬ ನಿಯಮವೇನಿಲ್ಲ. ಕೋಮುಲ್‌ನಲ್ಲಿ ಅವ್ಯವಹಾರಗಳು ನಡೆದಿದ್ದರೆ ತನಿಖೆ ನಡೆಯಲಿ. ಅದಕ್ಕೆ ಯಾರ ಅಡ್ಡಿಯೂ ಇಲ್ಲ ಎಂದು ಹೇಳಿದರು. ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಕೆ.ವೈ.ನಂಜೇಗೌಡ, ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್ಸಿಎಂ.ಎಲ್.ಅನಿಲ್‌ಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ