ವಾಟದಹೊಸಹಳ್ಳಿ ಕೆರೆಗೆ ಎತ್ತಿನಹೊಳೆ ನೀರು

KannadaprabhaNewsNetwork | Published : Jul 1, 2025 12:49 AM

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆದ ಎತ್ತಿನಹೊಳೆ ನೀರನ್ನು ವಾಟದಹೊಸಹಳ್ಳಿ ಕೆರೆಗೆ ತಂದು ಅಲ್ಲಿಂದ ಪೈಪ್ ಲೈನ್ ಮೂಲಕ ನಗರಕ್ಕೆ ತರುವುದು ಈ ಯೋಜನೆಯ ಉದ್ದೇಶವಾಗಿದೆ. ಎತ್ತಿನ ಹೊಳೆ ನೀರನ್ನು ವಾಟದಹೊಸಹಳ್ಳಿ ಕೆರೆಗೆ ತರುವುದರಿಂದ ಸಮೀಪ ಹಳ್ಳಿಗಳ ರೈತರ ಕೊಳವೆ ಬಾವಿಗಳು ಮರುಪೂರಣ ವಾಗುತ್ತದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ವಾಟದಹೊಸಹಳ್ಳಿ ಕೆರೆ ನೀರನ್ನು ಗೌರಿಬಿದನೂರಿಗೆ ಹರಿಸಲು ಕೆರೆಯ ವ್ಯಾಪ್ತಿಯ ಸುಮಾರು 19 ಗ್ರಾಮಗಳ ವ್ಯಾಪ್ತಿಯ ಜನರ ವಿರೋಧಿಸುತ್ತಿರುವ ಕುರಿತು ಸೋಮವಾರ ನಡೆದ ಸಂವಾದ ಕಾರ್ಯಕ್ರಮದ ವಿವರಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸುಧಕರ್ ರವರ ಗಮನಕ್ಕೆ ತರುವೆ ಎಂದು ಜಿಲ್ಲಾಧಿಕಾರಿ ರವೀಂದ್ರ ತಿಳಿಸಿದರು.

ಅವರು ನಗರದ ಹೊರವಲಯದಲ್ಲಿರುವ ತಾಲೂಕು ಆಡಳಿತ ಭವನದ ಸಭಾಂಗಣದಲ್ಲಿ ರೈತರು, ಜನಪ್ರತಿನಿಧಿಗಳೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದ ಬಳಿಕ ಪತ್ರಕರ್ತರ ಜತೆ ಮಾತನಾಡಿ, ಗೌರಿಬಿದನೂರು ನಗರದ ಇಂದಿನ ಜನಸಂಖ್ಯೆ ಸುಮಾರು 60 ಸಾವಿರವಿದೆ, ದಿನನಿತ್ಯ ವಿದ್ಯಾರ್ಥಿಗಳು, ಇತರ ಊರುಗಳಿಂದ ಬರುವವರು ಸೇರಿ ಸುಮಾರು 75 ಸಾವಿರ ಜನರ ಬಳಿಕೆಗಾಗಿ ಇಂದಿನ ಜಲಮೂಲಗಳು ಸಾಕಾಗುತ್ತಿಲ್ಲ ಎಂದರು. ಕೆರೆಗೆ ಎತ್ತಿನಹೊಳೆ ನೀರು

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆದ ಎತ್ತಿನಹೊಳೆ ನೀರನ್ನು ವಾಟದಹೊಸಹಳ್ಳಿ ಕೆರೆಗೆ ತಂದು ಅಲ್ಲಿಂದ ಪೈಪ್ ಲೈನ್ ಮೂಲಕ ನಗರಕ್ಕೆ ತರುವುದು ಈ ಯೋಜನೆಯ ಉದ್ದೇಶವಾಗಿದೆ. ಎತ್ತಿನ ಹೊಳೆ ನೀರನ್ನು ವಾಟದಹೊಸಹಳ್ಳಿ ಕೆರೆಗೆ ತರುವುದರಿಂದ ಸಮೀಪ ಹಳ್ಳಿಗಳ ರೈತರ ಕೊಳವೆ ಬಾವಿಗಳು ಮರುಪೂರಣ ವಾಗುತ್ತದೆ ಎಂದರು.

ಈ ಯೋಜನೆಯಿಂದ ಕೆರೆ ಕೆಳಗಿನ ರೈತರಿಗೆ ಅನುಕೂಲ ವಾಗುವುದಲ್ಲದೇ ನಗರ ವಾಸಿಗಳ ದಾಹಾ ನೀಗಿಸಬಹುದಾಗಿದೆ, ಇಲ್ಲಿನ ಜನರಿಗೆ ನೀರಿನ ಆವಶ್ಯಕತೆ ಇದೆ. ಕೆರೆಯಲ್ಲಿ ಒಂದು ಹಂತದವರಿಗೆ ನೀರನ್ನು ಪ್ರತಿದಿನ ಬಳಸಲು ಕೆಲವರು ಸೂಚಿಸಿದ್ದಾರೆ. ಎಲ್ಲರ ಹಿತವನ್ನು ಕಾಪಾಡಿ ನೀರಿನ ಬಳಿಕೆ ಮಾಡಬೇಕಾಗಿದೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಗಳು ತ್ವರಿತವಾಗಿ ಬೇಕಾಗಿದೆ ಎಂದರು.ಸಂಪುಟ ಸಭೆಯಲ್ಲಿ ಚರ್ಚೆ

ಇಂದು ಚರ್ಚೆಯಾದ ಎಲ್ಲಾ ವಿಷಯಗಳು ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು. ಜುಲೈ ೨ ರಂದು ನಂದಿ ಬೆಟ್ಟದಲ್ಲಿ ಕ್ಯಾಬಿನೆಟ್ ಸಮಾವೇಶವು ಇರುವುದರಿಂದ ತುರ್ತಾಗಿ ಸೋಮವಾರ ಸಭೆ ನಡೆಸಿದ್ದಾಗಿ ತಿಳಿಸಿದರು. ಸಂವಾದ ಕಾರ್ಯಕ್ರಮದಲ್ಲಿ ನಗರಸಭೆಯ ಆಯುಕ್ತರಾದ ಗೀತ, ವೃತ್ತನಿರೀಕ್ಷಕರಾದ ಸತ್ಯನಾರಾಯಣ, ತಾಲೂಕು ದಂಡಾಧಿಕಾರಿ ಮಹೇಶ್ ಪತ್ರಿ, ನೀರಾವರಿ ಅಭಿಯಂತರರು, ಪರಿಸರವಾದಿ ಚೌಡಪ್ಪ, ರೈತರು ಭಾಗವಹಿಸಿದ್ದರು.