15 ವರ್ಷ ಕಳೆದರೂ ಮಳಿಗೆ ಕಾಮಗಾರಿ ಅಪೂರ್ಣ

KannadaprabhaNewsNetwork |  
Published : May 18, 2024, 12:38 AM ISTUpdated : May 18, 2024, 12:39 AM IST
ಸಾರ್ವಜನಿಕರ ಹಣ ಮನಸಾ ಇಚ್ಚೆ ಪೋಲು | Kannada Prabha

ಸಾರಾಂಶ

2011ರ ಸಾಲಿನಲ್ಲಿ ಸುಮಾರು 25 ಲಕ್ಷ ಹಣದಲ್ಲಿ ಮಾಂಸದ ಅಂಗಡಿಗಳ ಮಳಿಗೆ ಕಾಮಗಾರಿ ಪ್ರಾರಂಭವಾಗಿದೆ. ಆದರೆ ಮಳಿಗೆಗಳ ಕಾಮಗಾರಿ ಕೆಲಸ ಮಾತ್ರ ಆಗಿಲ್ಲ, ಹಣ ಮಾತ್ರ ಖರ್ಚಾಗಿದೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಸರ್ಕಾರಿ ಅಧಿಕಾರಿಗಳು ವಿನಾಕಾರಣ ಕಾಮಗಾರಿ ನೆಪದಲ್ಲಿ ಜನರ ತೆರಿಗೆ ಹಣವನ್ನು ಪೋಲು ಮಾಡುವ ಉದಾಹರಣೆಗಳು ಸಾಕಷ್ಟಿವೆ. ಇದಕ್ಕೊಂದು ತಾಜಾ ಉದಾಹರಣೆ ಉತ್ತರ ಪಿನಾಕಿನಿ ನದಿ ದಡದಲ್ಲಿ 15 ವರ್ಷಗಳ ಹಿಂದೆ ₹ 25 ಲಕ್ಷ ರುಪಾಯಿ ವೆಚ್ಚದಲ್ಲಿ ಆರಂಭಿಸಿದ ಮಾಂಸ ಮಾರಾಟ ಮಳಿಗೆಗಳ ಕಾಮಗಾರಿ ಇನ್ನೂ ಅಪೂರ್ಣವಾಗಿದೆ. ಅದರೆ ಹಣ ಮಾತ್ರ ಖಾಲಿಯಾಗಿದೆ. ಅಂದಿನ ಪುರಸಭೆ ಆಡಳಿತದಲ್ಲಿ 2011ರ ಸಾಲಿನಲ್ಲಿ ಸುಮಾರು 25 ಲಕ್ಷ ಹಣದಲ್ಲಿ ಮಾಂಸದ ಅಂಗಡಿಗಳ ಮಳಿಗೆ ಕಾಮಗಾರಿ ಪ್ರಾರಂಭವಾಗಿದೆ. ಆದರೆ ಮಳಿಗೆಗಳ ಕಾಮಗಾರಿ ಕೆಲಸ ಮಾತ್ರ ಆಗಿಲ್ಲ, ಅಂದಿನ ಆಡಳಿತ ವರ್ಗ ಮಾಂಸದ ಅಂಗಡಿಗಳ ಅವಶ್ಯಕತೆಗೆ ಅನುಗುಣವಾಗಿ ಕಾಮಗಾರಿ ಪ್ರಾರಂಭವಾಗಿದೆ. ಹಣ ಸಹ ಖರ್ಚಾಗಿದೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಇದು ಕೇವಲ ಹಣ ಗುಳಂ ಮಾಡಲು ಸುಲಭ ವಿಧಾನ ಎಂಬುದು ಸಾರ್ವಜನಿಕರ ಟೀಕೆ. ಈಗಿರುವ ಮಾಂಸದಂಗಡಿಗಳ ಒಡಾಡುವ ಜನರಿಗೆ ಅದರ ಗಬ್ಬು ವಾಸನೆ ಸಹಿಸಲು ಅಗುತ್ತಿಲ್ಲ. ಇದರ ಕಡಿವಾಣ ಹಾಕಬೇಕಿದೆ, ಇದಕ್ಕೆಂದೇ ಪ್ರತ್ಯಕ ಮಳಿಗೆಗಳ ನಿರ್ಮಾಣ ಆರಂಭಿಸಲಾಯಿತು. ಆದರೆ ಕಾಮಗಾರಿ ಪೂರ್ಣಗೊಳ್ಳಲೇ ಇಲ್ಲ.ಮಾಂಸದ ಪರೀಕ್ಷೆ ಆಗುತ್ತಿಲ್ಲ

ನಗರ ವ್ಯಾಪ್ತಿಯಲ್ಲಿ ನಿತ್ಯ ನೂರಾರು ಕೆಜಿ ಮಾಂಸ, ಚಿಕನ್, ಮೀನು ಮಾರಾಟ ಆಗುತ್ತಿದೆ. ಅದು ಸೇವೆನೆಗೆ ಅಗತ್ಯ ಎಂದು ನಗರಸಭೆ ಆರೋಗ್ಯ ನಿರೀಕ್ಷರು ಪರೀಕ್ಷೆ ಮಾಡಬೇಕು ಅದರೆ ಇವರ ನಿರ್ಲಕ್ಷ್ಯದಿಂದ ಅದು ಸಹ ಅಗುತ್ತಿಲ್ಲ. ಮಾಂಸ ಸೇವೆನೆಗೆ ಪೂರಕವಾಗಿದೆ ಎಂಬುದು ಜನರಿಗೆ ಗೊತ್ತಿಲ್ಲ ಅದು ಆಹಾರ ನೀರಿಕ್ಷಕರು ನೇರ ಹೋಣೆಗಾರಿಕೆ ಆಗಿದೆ ಎಂದು ಮಾಂಸಪ್ರಿಯರ ಒತ್ತಾಯವಾಗಿದೆ.

ಪ್ರತ್ಯೇಕ ಮಳಿಗೆ ಅಗತ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರಸಭೆ ಸದಸ್ಯ ಖಲೀಂ ಉಲ್ಲಾ, ಮೊದಲು ಪುರಸಭೆ ಇದ್ದಾಗ 30 ರಿಂದ 35 ಸಾವಿರ ಜನಸಂಖ್ಯೆ ಇತ್ತು. ನಗರಸಭೆ ಆದ ಮೇಲೆ 50 ರಿಂದ 60 ಸಾವಿರ ಜನಸಂಖ್ಯೆ ಇದ್ದು ನಗರದಲ್ಲಿ ಮಾಂಸದ ಅಂಗಡಿಗಳಿಗೆ ಸೂಕ್ತ ಸ್ಥಳ ಅವಶ್ಯಕತೆ ಇದೆ, ಆದರೆ ಪೂರಕವಾದ ಸ್ಥಳವಾಗಲೀ, ಅಂಗಡಿಗಳಾಗಲೀ ಇಲ್ಲ. ಇನ್ನು ಮೀನು ಮಾರಾಟ ಸಹ ನದಿ ಭಾಗದ ರಸ್ತೆ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.

PREV

Recommended Stories

ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?
ಆಹಾರ ಉದ್ದಿಮೆಗಳ ರಫ್ತು ಹೆಚ್ಚಿಸಲು ವಿಶೇಷ ಯೋಜನೆ ರೂಪಿಸುತ್ತೇವೆ: ಹರೀಶ್​​