ಮಸ್ಕತ್‌ನಲ್ಲಿ ಪುಟ್ಟ ಭಾರತ ನೆಲೆಗೊಂಡಿದೆ: ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ

KannadaprabhaNewsNetwork |  
Published : May 18, 2024, 12:38 AM IST
ಚಿತ್ರ:ಮಸ್ಕತ್‌ ಮಹಾನಗರದ ಶ್ರೀಕೃಷ್ಣ ದೇವಾಲಯದ ಸಭಾಂಗಣದಲ್ಲಿ ಬಸವೇಶ್ವರ ಜಯಂತಿ ಶುಕ್ರವಾರ ತರಳಬಾಳು ಶ್ರೀಗಳವರ ದಿವ್ಯ ಸಮ್ಮುಖದಲ್ಲಿ ನಡೆಯಿತು. | Kannada Prabha

ಸಾರಾಂಶ

ಮಸ್ಕತ್‌ ಮಹಾನಗರದ ಶ್ರೀ ಕೃಷ್ಣ ದೇವಾಲಯದ ಸಭಾಂಗಣದಲ್ಲಿ ಬಸವೇಶ್ವರ ಜಯಂತಿ ಶುಕ್ರವಾರ ತರಳಬಾಳು ಶ್ರೀಗಳವರ ದಿವ್ಯ ಸಮ್ಮುಖದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಒಮಾನ್‌ ದೇಶದ ಮಸ್ಕತ್‌ನಲ್ಲಿ ಪುಟ್ಟದಾದ ಭಾರತವೊಂದು ನೆಲೆಗೊಂಡಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಸ್ಕತ್‌ ಮಹಾನಗರದ ಕೃಷ್ಣ ದೇವಾಲಯದಲ್ಲಿ ಇಂದು ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ಚನ ನೀಡಿದ ಶ್ರೀಗಳು ಭಾರತದಿಂದ ಬಂದು ಇಲ್ಲಿ ನೆಲೆಸಿರುವ ಕೇವಲ ಬಸವ ಧರ್ಮೀಯರೇ ಅಲ್ಲದೆ ಎಲ್ಲ ಸಮುದಾಯದವರೂ ಸೇರಿ ಇಲ್ಲೊಂದು ಭಾರತವನ್ನು ನೆಲೆಗೊಳಿಸಿದ್ದೀರಿ ಎಂದರು.

ಮನುಷ್ಯ ಆಧುನಿಕವಾದ ಪ್ರಪಂಚದಲ್ಲಿ ಕೇವಲ ಬಾಹ್ಯ ಬೆಳಕನ್ನು ನೋಡುತ್ತಾನೆ. ತನ್ನೊಳಗಿನ ಅರಿವಿನ ಬೆಳಕನ್ನು ನೋಡಿದಾಗ ವ್ಯಕ್ತಿಯಲ್ಲಿ ಮಹಾ ಬೆಳಗಿನ ಅರಿತು ಬರುತ್ತದೆ ಎಂದರು.

ಲಂಡನ್‌ ಮಹಾನಗರದಲ್ಲಿ ಬಸವ ಪ್ರತಿಮೆಯನ್ನು ನೆಲೆಸಿರುವಂತೆ ಮಸ್ಕತ್‌ನ ಭಾರತ ರಾಯಭಾರ ಕಚೇರಿಯ ಮುಂಭಾಗದಲ್ಲಿ ಬಸವೇಶ್ವರರ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕೆಂಬ ತಮ್ಮ ಆಶಯವನ್ನು ಶ್ರೀಗಳು ಸಭಿಕರ ಮುಂದಿಟ್ಟರು. ಬಸವಣ್ಣನವರ ಪ್ರತಿಮೆ ರಚನೆಗೆ ಅಗತ್ಯವಾದ ನೆರವನ್ನು ಮಠದ ವತಿಯಿಂದ ನೀಡಲಾಗುವುದು ಎಂದರು.

ಮಸ್ಕತ್‌ನಲ್ಲಿ ನೆಲೆಸಿರುವ ಎಲ್ಲರೂ ಬಸವಣ್ಣನವರ ಆಶಯದಂತೆ ಇವನಾರವ ಎನ್ನದೆ, ಇವ ನಮ್ಮವನೆಂಬ ಭಾವನೆಯನ್ನು ಮೈಗೂಡಿಸಿಕೊಂಡಿರುವುದು ಅತೀವ ಸಂತೋಷ ತಂದಿದೆ. ನಮ್ಮ ಮಠದ ತರಳಬಾಳು ಮಂತ್ರದ ಹಿಂದಿರುವ ಆಶಯವೂ ಇದೇ ಆಗಿದೆ ಎಂದರು.

ಮಸ್ಕತ್‌ನಲ್ಲಿರುವ ಭಾರತದ ರಾಯಭಾರಿ ಅಮಿತ್ ನಾರಂಗ್ ಮುಖ್ಯ ಅತಿಥಿಯಾಗಿ ಮಾತನಾಡಿ, ತರಳಬಾಳು ಜಗದ್ಗುರುಗಳವರು 22 ಸಾವಿರ ವಚನಗಳನ್ನು ಮೊಬೈಲ್‌ ಆಪ್‌ಗೆ ಸೇರ್ಪಡೆ ಮಾಡಿರುವುದನ್ನು ನೋಡಿ ನಾನು ಚಕಿತಗೊಂಡಿರುವೆ. ಬಸವಣ್ಣನವರ ತತ್ವಗಳನ್ನು ದೇಶ ವಿದೇಶಗಳಿಗೆ ಸಾರುವ ದಿಕ್ಕಿನಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಮೊಬೈಲ್‌ ತಂತ್ರಾಂಶವನ್ನು ಶ್ರೀಗಳ ಜೊತೆಗೆ ನೋಡಿ ನನಗೆ ಸಂತೋಷವಾಯಿತು. ಅವರಿಂದ ಮೊಬೈಲ್‌ ತಂತ್ರಾಂಶವನನ್ನು ನನ್ನ ಫೋನ್‌ಗೆ ವರ್ಗಾಯಿಸಿಕೊಂಡಿರುವೆ ಎಂದು ಸಂತಸ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವವು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ