ಕನ್ನಡ ಪ್ರಭವಾರ್ತೆ,ಮಾಲೂರು
ತಾಲೂಕಿನ ಜನತೆಯ ಆಶೀರ್ವಾದದಿಂದ ಎರಡನೇ ಬಾರಿಗೆ ಶಾಸಕರಾಗಿ ಒಂದು ವರ್ಷ ಪೂರ್ಣಗೊಳಿಸಿದ್ದೇನೆ. ಈ ಬಾರಿ ನಮ್ಮದೆ ಸರ್ಕಾರ ಇರುವುದರಿಂದ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳ್ಳಿಸುವ ಭರವಸೆ ಇದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ಅವರು ಶಾಸಕರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಆಡಳಿತಕ್ಕೆ ಬಂದ ಒಂದು ವರ್ಷದಲ್ಲಿ ಎಲ್ಲಾ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಎಲ್ಲಾ ಬಡ ಹಾಗೂ ಮಾಧ್ಯಮ ಜನರ ಜೀವನಕ್ಕೆ ಅನುಕೂಲ ಕಲ್ಪಿಸಿದೆ ಎಂದರು.
ತಾಲೂಕು ಅಭಿವೃದ್ಧಿಗೆ ₹600 ಕೋಟಿತಾಲೂಕಿನ ಅಭಿವೃದ್ಧಿಗೆ ಒಂದು ವರ್ಷದಲ್ಲಿ ೬೦೦ ಕೋಟಿ ರೂಗಳನ್ನು ಸರ್ಕಾರದಿಂದ ತರಲಾಗಿದೆ. ಒಂದು ವರ್ಷ ಪೂರ್ಣಗೊಂಡಿದ್ದು ಇನ್ನೂ ಉಳಿದ ನಾಲ್ಕು ವರ್ಷಗಳ ಅವಧಿಯಲ್ಲಿ ನನಗೆ ಸರ್ಕಾರದಲ್ಲಿ ಯಾವುದೇ ಅಧಿಕಾರ ಸಿಗದಿದ್ದರೂ ಸಹ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಹೆಚ್ಚು ಅನುದಾನಗಳನ್ನು ತರಲಾಗುವುದು. ಮುಂಬರುವ ದಿನಗಳಲ್ಲಿ ತಾಲೂಕಿನ ಜನತೆ ಆಶೀರ್ವಾದ ತಮ್ಮ ಮೇಲೆ ಸದಾ ಇರುವಂತೆ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡಲಾಗುವುದು ಎಂದರು
ಬಿಜೆಪಿ ಆಡಳಿತದಲ್ಲಿ ತಾರತಮ್ಯಸ್ಥಳೀಯನಾದ ನನ್ನನ್ನು ಮೊದಲನೇ ಅವಧಿಗೆ ಶಾಸಕರನ್ನಾಗಿ ಆಯ್ಕೆ ಮಾಡಿದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಕಷ್ಟು ಅನುದಾನಗಳನ್ನು ತರಲಾಗಿತ್ತು ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಿಂದ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು ಆದರೆ ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ಅನುದಾನಗಳನ್ನು ನೀಡದೆ ಮಲತಾಯಿ ಧೋರಣೆ ಮಾಡಿದ್ದರಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದ್ದವು. ನಂತರ ನಮ್ಮದೇ ಕಾಂಗ್ರೆಸ್ ಪಕ್ಷದ ಸರ್ಕಾರ ಆಡಳಿತಕ್ಕೆ ಬಂದ ದಿನಗಳಿಂದ ಇಲ್ಲಿಯವರೆಗೆ ಸಾಕಷ್ಟು ಅನುದಾನಗಳನ್ನು ತರಲಾಗಿದೆ ಎಂದರು.
ಹದಗೆಟ್ಟ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ ದೇವನಹಳ್ಳಿಯಿಂದ ವಿಜಯಪುರದಿಂದ ಸಂಪಂಗೆರೆ ಗಡಿಯವರಿಗೆ ೬ ಪಥದ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸುಮಾರು ೬೦೦ ಕೋಟಿ ರೂಗಳು ಬಿಡುಗಡೆ ಮಾಡಿದೆ ಪಟ್ಟಣದಲ್ಲಿ ೩೦೦ ಕೋಟಿ ರೂಗಳ ವೆಚ್ಚದಲ್ಲಿ ಮೇಲ್ ಸೇತುವೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ ಪುರಸಭೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ೫೦ ಕೋಟಿ ರೂಗಳು ಸರ್ಕಾರ ಬಿಡುಗಡೆ ಮಾಡಲಿದೆ ಎಂದರು.ಬಸ್ ನಿಲ್ದಾಣ ಅಭಿವೃದ್ಧಿಗೆ ₹11 ಕೋಟಿ
ಬಸ್ ನಿಲ್ದಾಣವನ್ನು ೧೧ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಮಾಲೂರು ಕೆರೆಯನ್ನು ೨೦ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು ೧೦ಕೋಟಿ ರೂಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಕುಡಿಯುವ ನೀರಿನ ಯೋಜನೆ ಎರಗೋಳು ನೀರು ಪಟ್ಟಣಕ್ಕೆ ಸರಬರಾಜು ಆಗುತ್ತಿದ್ದು ಇಂದಿರಾ ಕ್ಯಾಂಟೀನ್ ಕಾಮಗಾರಿಯು ಸಹ ಪ್ರಗತಿಯಲ್ಲಿದೆ.ಮಾಸ್ತಿ ಬಸ್ ನಿಲ್ದಾಣ ಟೇಕಲ್ ಐಟಿಐ ಕಾಲೇಜು ಕಾಮಗಾರಿ ಪ್ರಾರಂಭ ವಾಗಿದೆ ಕಾಂಗ್ರೆಸ್ ಪಕ್ಷ ಸರ್ಕಾರದ ಬಂದ ಒಂದು ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಹಕಾರದಿಂದ ಸಾಕಷ್ಟು ಅನುದಾನಗಳನ್ನು ತರಲಾಗಿದೆ ಎಂದರು.