ಬಸವೇಶ್ವರರ ವಚನಗಳು ಈಗಲೂ ಸಾರ್ವಕಾಲಿಕವಾಗಿದ್ದು, ಅವರು ಪ್ರಜಾಪ್ರಭುತ್ವದ ಕಲ್ಪನೆಯ ಮೂಲ ಪುರುಷರಾಗಿದ್ದಾರೆ ಎಂದು ಸೊರಬ ತಾಲೂಕಿನ ಮೂಡಿ ಗ್ರಾಮದ ಸದಾಶಿವ ಮಹಾಸ್ವಾಮಿಗಳು ಹೇಳಿದರು.
ಹಿರೇಕೆರೂರು: ಬಸವೇಶ್ವರರ ವಚನಗಳು ಈಗಲೂ ಸಾರ್ವಕಾಲಿಕವಾಗಿದ್ದು, ಅವರು ಪ್ರಜಾಪ್ರಭುತ್ವದ ಕಲ್ಪನೆಯ ಮೂಲ ಪುರುಷರಾಗಿದ್ದಾರೆ ಎಂದು ಸೊರಬ ತಾಲೂಕಿನ ಮೂಡಿ ಗ್ರಾಮದ ಸದಾಶಿವ ಮಹಾಸ್ವಾಮಿಗಳು ಹೇಳಿದರು.ಪಟ್ಟಣದ ಬಸವೇಶ್ವರ ನಗರದಲ್ಲಿ ಶಿವಾನುಭವ ತತ್ವ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಬಸವೇಶ್ವರ ಜಯಂತ್ಯುತ್ಸವ ಹಾಗೂ ಎಡೆಯೂರ ಸಿದ್ಧಲಿಂಗೇಶ್ವರ, ಬಸವೇಶ್ವರ, ಮೂಡಿಶ್ರೀಗಳ ಮತ್ತು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಬಸವಣ್ಣನವರು ತಮ್ಮವಚನ ಸಾಹಿತ್ಯದ ಮೂಲಕ ಅಂದು ಜಾರಿಯಲ್ಲಿದ್ದ ಅನಿಷ್ಟ ಪದ್ಧತಿ, ಜಾತಿಯತೆ, ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಲ್ಲಿನ ತೊಡಕುಗಳನ್ನು ನಿವಾರಣೆ ಮಾಡಲು ಅಂದು ಬಲವಾದ ಧ್ವನಿ ನೀಡಿದ್ದರಿಂದ ಇಂದು ಶಿಕ್ಷಣ ಕ್ರಾಂತಿ, ಅಸ್ಪ್ರಶ್ಯತೆ, ಜಾತಿಯತೆ ಕೆಲಮಟ್ಟಿಗೆ ಹೋಗಲಾಡುತ್ತಾ ಬಂದಿವೆ. ಅವರ ಅನುಭವ ಮಂಟಪದಲ್ಲಿ ಎಲ್ಲ ಧರ್ಮದ ವಚನಕಾರರಿಗೆ, ವೇದಿಕೆ ನೀಡುವ ಮೂಲಕ ಅಂದೆ ಎಲ್ಲರೂ ಒಂದೆ ಎಂಬ ಸ್ಪಷ್ಟ ಸಂದೇಶವನ್ನು ಸಾರಿದ ಮಹಾನ್ ಪುಣ್ಯ ಪುರುಷ ಬಸವಣ್ಣನವರು ಎಲ್ಲರಿಗೂ ಆದರ್ಶ ಗುರುವಾಗಿದ್ದಾರೆ ಎಂದರು.ಶಿವಾನುಭವ ತತ್ವ ಪ್ರಚಾರ ಸಮಿತಿ ಕಾರ್ಯದರ್ಶಿ ಗುರುಶಾಂತಪ್ಪ ಯತ್ತಿನಳ್ಳಿ, ಎಸ್.ಆರ್. ಪಿಳಗಿಮಠ, ಎಮ್.ಬಿ. ಸಾವಜ್ಜಿಯವರ, ಎಂ.ಡಿ. ಸಿಮೀಕೆರಿ ಮಾತನಾಡಿದರು.ಮದ್ವೀರಶೈವ ಸಮಾಜದ ಅಧ್ಯಕ್ಷ ವಿ.ಡಿ. ಹಂಪಾಳಿ, ಧರ್ಮದರ್ಶಿಗಳಾದ ಸಿದ್ದಲಿಂಗೇಶ ಶೆಟ್ಟರ, ಕಂಠಾಧರ ಅಂಗಡಿ, ಮುಖಂಡರಾದ ಬಿ.ಎನ್. ಭರಮಗೌಡರ, ಎಚ್.ಎಚ್. ಬತ್ತಿಕೊಪ್ಪದ, ವಿ.ಎನ್. ಓಲೇಕಾರ, ವಸಂತ ವಡ್ಡಿನಕಟ್ಟಿ, ಮಹಾದೇವ ಕಣ್ಣಕುಪ್ಪಿ, ಶೋಭಾ ಅಂಗಡಿ, ಮಂಜುಳಾ ಬಾಳಿಕಾಯಿ, ಶಾರದಮ್ಮ ಭರಮಗೌಡರ, ನೀಲಮ್ಮ ಹೊಸಮನಿ, ಶಿವಯೋಗಿ ಹಳ್ಳೂರ ಇದ್ದರು. ಎಸ್.ಆರ್. ಪಿಳಗಿಮಠ, ಜೆ.ವಿ. ಅಂಗಡಿ, ಎಂ.ಬಿ. ಕಾಗಿನೆಲ್ಲಿ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.