ಕೊಡಗು ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ರಮ್ಜಾನ್ ಹಬ್ಬವನ್ನು ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಿದರು. ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರು.
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ರಮ್ಜಾನ್ ಹಬ್ಬವನ್ನು ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಿದರು. ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿದರು. ಮಡಿಕೇರಿಯ ಕಾಲೇಜು ರಸ್ತೆಯ ಮಸೀದಿಯಲ್ಲಿ ಮಸ್ಜಿದ್ ಉರ್ ರಹ್ಮಾ ಧರ್ಮಗುರುಗಳಾದ ಉಮ್ಮರ್ ಮೌಲವಿಯವರು ಮಡಿಕೇರಿಯಲ್ಲಿ ನಡೆದ ಈದುಲ್ ಫಿತರ್ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದರು.
ಪರಸ್ಪರ ಕಾರುಣ್ಯ ಸಹನೆ ಮತ್ತು ಪ್ರೀತಿಯ ಸಂಕೇತವಾದ ಈದುಉಲ್ ಫಿತರ್ ಪ್ರವಾದಿ ಅವರ ಅನುಯಾಯಿಗಳು ಎಂದಿಗೂ ಹಿಂಸಾತ್ಮಕ ಕೃತ್ಯವನ್ನು ಮಾಡಲಾರರು. ಪರಸ್ಪರ ಬಿಕ್ಕಟ್ಟು ಬಿನ್ನಾಭಿಪ್ರಾಯ, ಅನಕ್ಯತೆ ಹಾಗೂ ಒಗ್ಗಟ್ಟಿನ ಕೊರತೆಯಿಂದ ಮುಸ್ಲಿಮರು ಬಳಲುತ್ತಿದ್ದಾರೆ. ಆದ್ದರಿಂದ ಪರಸ್ಪರ, ಸಮಾಲೋಚನೆ, ಸಹಕಾರ ಮತ್ತು ಒಗ್ಗಟ್ಟಿನಿಂದ ಮುಂದೆ ಸಾಗಬೇಕಾಗಿದೆ ಎಂದು ಈದ್ ಪ್ರಾರ್ಥನೆಯಲ್ಲಿ ಮಹಿಳೆಯರು ಪುಟ್ಟ ಮಕ್ಕಳು ಭಾಗವಹಿಸಿದ್ದರು. ಅಧ್ಯಕ್ಷ ಮೊಹಮ್ಮದ್ ಹನೀಫ್ ತೌಸೀಫ್, ಮಡಿಕೇರಿ ಮೊಹಮ್ಮದ್ ಮುಸ್ತಫ ಮುನೀರ್ ಅಹಮದ್, ಕಾರ್ಯದರ್ಶಿ ಎಂ.ಎ. ಮುಸ್ತಫ ,ಇಬ್ರಾಹೀಮ್ ಮೈಸ್ ಇನ್ನಿತರ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು. ಮಡಿಕೇರಿ ಬದ್ರಿಯಾ ಮಸೀದಿ, ಭಟ್ಕಲ್ ಮಸೀದಿ, ಮಲಬಾರ್ ಹಾಗೂ ಸಲಫಿ ಮಸೀದಿಗಳಲ್ಲಿ ಈದ್ ಪ್ರಾರ್ಥನೆ ನೆರವೇರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.