ಪಂಚಾಂಗ ಶ್ರವಣದಿಂದ ಮನಸ್ಸಿಗೆ ನೆಮ್ಮದಿ ಲಭಿಸುವುದು-ಶಿವಾಚಾರ್ಯರು

KannadaprabhaNewsNetwork |  
Published : Mar 21, 2026, 02:00 AM IST
ಫೋಟೊ ಶೀರ್ಷಿಕೆ: 20ಆರ್‌ಎನ್‌ಆರ್3 ರಾಣಿಬೆನ್ನೂರು ನಗರ ಚನ್ನೇಶ್ವರ ಮಠದಲ್ಲಿ ಡಾ.ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಜರುಗಿತು.  | Kannada Prabha

ಸಾರಾಂಶ

ಪಂಚಾಂಗ ಶ್ರವಣದಿಂದ ಮನಸ್ಸಿಗೆ ನೆಮ್ಮದಿ ಲಭಿಸುವುದು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.

ರಾಣಿಬೆನ್ನೂರು: ಪಂಚಾಂಗ ಶ್ರವಣದಿಂದ ಮನಸ್ಸಿಗೆ ನೆಮ್ಮದಿ ಲಭಿಸುವುದು ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು. ಇಲ್ಲಿನ ಮೃತ್ಯುಂಜಯ ನಗರದ ಚನ್ನೇಶ್ವರ ಮಠದ ಪಂಡಿತಾರಾಧ್ಯ ವಾಗೀಶ ಸಮುದಾಯ ಭವನದಲ್ಲಿ ಚೆನ್ನಮಲ್ಲಿಕಾರ್ಜುನಸ್ವಾಮಿ ಸಂಸ್ಕೃತಿ ಪ್ರಸಾರ ಪರಿಷತ್ ವತಿಯಿಂದ ಶ್ರೀ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ಹಿಂದೆಯೇ ಯಾವುದೇ ಉಪಕರಣವಿಲ್ಲದೇ ಕರಾರುವಕ್ಕಾಗಿ ಹುಣ್ಣಿಮೆ, ಅಮಾವಾಸ್ಯೆ, ಗ್ರಹಣ, ಸೂರ್ಯೋದಯ, ಸೂರ್ಯಾಸ್ತ, ಹಬ್ಬ ಮುಂತಾದವುಗಳನ್ನು ತಿಳಿಸಿದ್ದಾರೆ. ಪಂಚಾಂಗ ಜೀವನದಲ್ಲಿಯ ಒಳಿತು-ಕೆಡಕುಗಳನ್ನು ಸಮನಾಗಿ ಸ್ವೀಕರಿಸುವುದನ್ನು ಕಲಿಸುತ್ತದೆ. ಶ್ರದ್ಧಾನಿಷ್ಠ ಭಕ್ತರ ಸದಾಶಯದ ಗುರುವಂದನೆಯ ಫಲವಾಗಿ ಹತ್ತನೇ ವರ್ಷದ ಶ್ರೀಶೈಲ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ಸಂತೃಪ್ತಿ ನಮಗಿದೆ ಎಂದರು. ಗೌರಿಶಂಕರಸ್ವಾಮಿ ನೆಗಳೂರಮಠ ಹಾಗೂ ಎಂ.ಕೆ. ಹಾಲಸಿದ್ದಯ್ಯ ಶಾಸ್ತ್ರಿಗಳು ಪಂಚಾಂಗ ಶ್ರವಣ ಮಾಡಿದರು. ಪಿ.ಆರ್. ಕುಪ್ಪೇಲೂರ, ಶಿವಾನಂದ ದೊಡ್ಡಮನಿ, ಸುನಂದಮ್ಮ ತಿಳುವಳ್ಳಿ, ಶಿವನಗೌಡ ಮುದಿಗೌಡರ, ಪುಟ್ಟರಾಜು ಅಂಗಡಿ, ಕಸ್ತೂರಮ್ಮ ಪಾಟೀಲ, ಅಮೃತಗೌಡ ಹಿರೇಮಠ, ಜಗದೀಶ ಮಳಿಮಠ, ಗೀತಾ ಭಸ್ಮಾಂಗಿಮಠ, ವಿದ್ಯಾವತಿ, ದಾನೇಶ್ವರಿ ಜಾಗೃತಿ ಅಕ್ಕನ ಬಳಗ ಹಾಗೂ ಕದಳಿ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರಲ್ಲಿ ದೇಶ ಭಕ್ತಿ ಮೂಡಿಸಿ
ಗಣತಿ ಕಾರ್ಯಕ್ಕೆ ಗಣತಿದಾರರು, ಮೇಲ್ವಿಚಾರಕರ ಪಾತ್ರ ಮುಖ್ಯ