ದೇಶ ಸೇವೆಗೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ: ನಿವೃತ್ತ ಯೋಧ ಶಿಬು

KannadaprabhaNewsNetwork |  
Published : Oct 03, 2023, 06:01 PM IST
ನರಸಿಂಹರಾಜಪುರಕ್ಕೆ ಆಗಮಿಸಿದ ನಿವೃತ್ತ ಯೋಧ ಶಿಬು ಅವರನ್ನು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಹಾಗೂ ಇತರ ಸಂಘ ಸಂಸ್ಥೆಗಳಿಂದ ಸ್ನಾಗತಿಸಿ ಸನ್ಮಾನಿಸಲಾಯಿತು | Kannada Prabha

ಸಾರಾಂಶ

ದೇಶ ಸೇವೆಗೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ: ನಿವೃತ್ತ ಯೋಧ ಶಿಬು

ನಿವೃತ್ತಗೊಂಡ ಯೋಧನಿಗೆ ಜೇಸಿ ಸಂಸ್ಥೆಯಿಂದ ಆತ್ಮೀಯ ಸ್ವಾಗತ: ಅಭಿನಂದನೆ ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ ದೇಶ ಸೇವೆ ಮಾಡಲು ಅವಕಾಶ ದೊರೆಕಿರುವುದು ನನ್ನ ಸೌಭಾಗ್ಯ ಎಂದು ನಿವೃತ್ತ ಯೋಧ ಶಿಬು ಹೇಳಿದರು. ಸೋಮವಾರ ದೇಶ ಸೇವೆಯಿಂದ ನಿವೃತ್ತರಾಗಿ ಪಟ್ಟಣಕ್ಕೆ ಆಗಮಿಸಿದಾಗ ಅಂಬೇಡ್ಕರ್ ವೃತ್ತದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ದೇಶದ ಗಡಿ ಕಾಯುವುದು ಒಂದು ಹೆಮ್ಮೆಯ ವಿಷಯ. ಅಂತಹ ಅವಕಾಶಗಳು ಎಲ್ಲರಿಗೂ ದೊರಕುವುದಿಲ್ಲ. ಅಂತಹ ಸೇವೆಯನ್ನು ನಾನು 20 ವರ್ಷ 6 ತಿಂಗಳು ಮಾಡಿರುವುದು ನನ್ನ ಹೆಮ್ಮೆ. ದೇಶದ ಗಡಿ ಭಾಗದ ಜೊತೆಗೆ ವಿದೇಶದಲ್ಲೂ ನನಗೆ ಸೇವೆ ಸಲ್ಲಿಸಲು ಅವಕಾಶ ನನಗೆ ಸಿಕ್ಕಿತ್ತು ಎಂದು ನೆನಪಿಸಿಕೊಂಡರು. ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಮಾತನಾಡಿ, ದೇಶದಲ್ಲಿ ಉಗ್ರರಿಂದ ದೇಶ ದ್ರೋಹಿ ಚಟುವಟಿಕೆಗಳು ಸದ್ದಿಲ್ಲದೆ ನಡೆಯುತ್ತಿರುವ ಪರಿಸ್ಥಿತಿಯಲ್ಲಿ ಅದನ್ನು ಹತ್ತಿಕ್ಕುವ ಕಾರ್ಯವನ್ನು ದೇಶ ಕಾಯುತ್ತಿರುವ ಯೋಧರು ಮಾಡುತ್ತಿದ್ದಾರೆ. ನಾವು ದೇಶದಲ್ಲಿ ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದೇವೆ ಎಂದರೆ ಅದು ನಮ್ಮ ದೇಶದ ಗಡಿ ಕಾಯುತ್ತಿರುವ ಯೋಧರ ಪರಿಶ್ರಮದಿಂದ ನಿವೃತ್ತ ಯೋಧ ಶಿಬುರವರಿಗೆ ಅವರ ಪತ್ನಿ ಸಹಕಾರ ನೀಡಿದ್ದಾರೆ ಎಂದರು. ಜೇಸೀ ಸಂಸ್ಥೆ ಅಧ್ಯಕ್ಷ ಗಂಗಾಧರ್ ಮಾತನಾಡಿ, ನಿವೃತ್ತ ಯೋಧ ಶಿಬು ನರಸಿಂಹರಾಜಪುರ ತಾಲೂಕಿನ ಸಿಂಸೆಯ ಎಂ.ಸಿ.ಯಾಕೂಬ್ ಹಾಗೂ ತ್ರೇಸಿಯಮ್ಮ ಅವರ ಪುತ್ರರಾಗಿದ್ದು, ಅವರು ವಿಶ್ವ ಸಂಸ್ಥೆಯ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದು ದಕ್ಷಿಣ ಆಫ್ರಿಕಾದ ಕಾಂಗೋದಲ್ಲಿ1 ವರ್ಷ ಸೇವೆ ಸಲ್ಲಿಸಿದ್ದರು. ಜೊತೆಗೆ 6 ಪದಕಗಳನ್ನು ಪಡೆದಿರುವುದು ನರಸಿಂಹರಾಜಪುರಕ್ಕೆ ಹೆಮ್ಮೆಯ ವಿಷಯ ಎಂದರು. ನಿವೃತ್ತ ಸೈನಿಕರ ಸಂಘದ ಸದಸ್ಯ ಡೇವೀಸ್, ಗಿರಿರಾಜ್‌ ಮಾತನಾಡಿದರು. ಜೇಸೀ ಸಂಸ್ಥೆ, ಪ.ಪಂಚಾಯ್ತಿ, ಅಭಿನವ ಬಳಗದಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಭಾರತ ಮಾತೆಗೆ ಜೈಕಾರ ಹಾಕಲಾಯಿತು.ಜೇಸೀ ಸಂಸ್ಥೆ ಕಾರ್ಯದರ್ಶಿ ಮಿಥುನ್, ನಿವೃತ್ತ ಯೋಧರಾದ ಜಾನಿ, ಗಣೇಶ್, ಮ್ಯಾಥ್ಯು, ರಂಜು,ಸೋಮಶೇಖರ್, ಬೆನ್ನಿ, ಸುನೀಲ್, ಸಜಿ, ಜೇಸೀ ಪದಾಧಿಕಾರಿಗಳಾದ ಅಪೂರ್ವ ರಾಘು, ಅರ್ಜುನ್, ಪುರುಷೋತ್ತಮ್, ಅಕ್ಷತ್‌ಪುಟ್ಟು, ಅಣ್ಣಪ್ಪ, ಜೀವೇಂದ್ರ ಮತ್ತಿತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ