ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ ತಾಳಮದ್ದಳೆ ‘ಗಾಂಧಾರಿ ಶಾಪ’ ಮತ್ತು ‘ವಾಲಿವಧೆ’

KannadaprabhaNewsNetwork |  
Published : Nov 15, 2025, 01:00 AM IST
ತಾಳಮದ್ದಳೆ | Kannada Prabha

ಸಾರಾಂಶ

ತಾಳಮದ್ದಳೆ ಕೇಳುವುದು ಕೇವಲ ಮನರಂಜನೆ ಅಲ್ಲ. ಅದು ಒಂದು ಬೌದ್ಧಿಕ ಅನುಭವ. ಪುರಾಣಗಳ ಚರ್ಚೆ, ತರ್ಕ, ಸಮರ್ಥನೆ ಮತ್ತು ವಾದ-ಪ್ರತಿವಾದಗಳ ಮೂಲಕ ಕಥೆಯ ಸಾರವನ್ನು ಗ್ರಹಿಸುವ ಒಂದು ವಿಶಿಷ್ಟ ಕಲಾತ್ಮಕ ಪ್ರಕ್ರಿಯೆ.

ಬೆಂಗಳೂರು: ಬೆಂಗಳೂರಿನಲ್ಲಿ ಯಕ್ಷಗಾನಗಳು ಅಲ್ಲಲ್ಲಿ ನಡೆಯುತ್ತಿದ್ದರೂ, ತಾಳಮದ್ದಳೆ ಕಾರ್ಯಕ್ರಮಗಳ ಸಂಖ್ಯೆ ನಿರೀಕ್ಷೆಗಿಂತ ಕಡಿಮೆಯೇ ಇದೆ. ಆದರೆ ತಾಳಮದ್ದಳೆಯ ಆಸಕ್ತರು ಮಾತ್ರ ಹೆಚ್ಚು ಇದ್ದಾರೆ. ಅನೇಕರು ನಿತ್ಯ ತಾಳಮದ್ದಳೆ ಕೇಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಯಾಕೆಂದರೆ ಅಲ್ಲಿನ ಪುರಾಣ ಜ್ಞಾನ.ತಾಳಮದ್ದಳೆ ಕೇಳುವುದು ಕೇವಲ ಮನರಂಜನೆ ಅಲ್ಲ. ಅದು ಒಂದು ಬೌದ್ಧಿಕ ಅನುಭವ. ಪುರಾಣಗಳ ಚರ್ಚೆ, ತರ್ಕ, ಸಮರ್ಥನೆ ಮತ್ತು ವಾದ-ಪ್ರತಿವಾದಗಳ ಮೂಲಕ ಕಥೆಯ ಸಾರವನ್ನು ಗ್ರಹಿಸುವ ಒಂದು ವಿಶಿಷ್ಟ ಕಲಾತ್ಮಕ ಪ್ರಕ್ರಿಯೆ. ಇಂತಹ ಸಂವಾದಗಳು ಕೇವಲ ಕತೆಯ ಸವಿಯನ್ನು ನೀಡುವುದಲ್ಲದೆ, ಪುರಾಣ ಮತ್ತು ಕಾವ್ಯಜ್ಞಾನದ ವಿಶಾಲತೆಯನ್ನು ವಿಸ್ತರಿಸುತ್ತವೆ.ಈ ಉದ್ದೇಶದೊಂದಿಗೆ ಬೆಂಗಳೂರಿನಲ್ಲಿ ಈ ಶನಿವಾರ, ನವೆಂಬರ್ 15ರಂದು ಮಧ್ಯಾಹ್ನ 2 ಗಂಟೆಗೆ, ರವೀಂದ್ರ ಕಲಾಕ್ಷೇತ್ರದಲ್ಲಿ “ಮಧ್ಯಾಹ್ನ ತಾಳಮದ್ದಳೆ” ಆಯೋಜಿಸಲಾಗಿದೆ. ಇಲ್ಲಿ “ಗಾಂಧಾರಿ ಶಾಪ” ಮತ್ತು “ವಾಲಿ ವಧೆ” ಎಂಬ ಆಖ್ಯಾನ ಆಯೋಜಿಸಲಾಗಿದೆ.ಕಾರ್ಯಕ್ರಮದ ವಿವರಗಳು:

ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು

ಸಮಯ: ಶನಿವಾರ, ನ.15, ಮಧ್ಯಾಹ್ನ 2 ಗಂಟೆಗೆ

ಪ್ರವೇಶ ದರ: ಕನಿಷ್ಠ ₹1 ಗರಿಷ್ಠ ನಿಮ್ಮ ಇಚ್ಛೆಹಿಮ್ಮೇಳ:

ಶ್ರೀ ಸುರೇಶ ಶೆಟ್ಟಿ ಶಂಕರನಾರಾಯಣ

ಶ್ರೀ ಸುಬ್ರಾಯ ಹೆಬ್ಬಾರ್

ಶ್ರೀ ಶ್ರೀನಿವಾಸ ಪ್ರಭು

ಶ್ರೀ ಅಕ್ಷಯ್ ಆಚಾರ್ಯ

ಶ್ರೀ ಅಜಿತ್ ಆಚಾರ್ಯ

ಶ್ರೀ ನಾಗರಾಜ ಯಡಮೊಗೆಗಾಂಧಾರಿ ಶಾಪ:

ಕೃಷ್ಣ: ಶ್ರೀ ವಾಸುದೇವ ರಂಗಾಭಟ್

ಗಾಂಧಾರಿ: ಶ್ರೀ ಗಣಪತಿ ಭಟ್ ಸಂಕದಗುಂಡಿವಾಲಿ ವಧೆ:ರಾಮ: ಶ್ರೀ ಜಬ್ಬಾರ್ ಸಮೊ

ವಾಲಿ: ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ

ಸುಗ್ರೀವ: ಶ್ರೀ ಸುನಿಲ್ ಕುಮಾರ್ ಹೊಲಾಡುಸಂಪರ್ಕಕ್ಕಾಗಿ:

ಎ.ಎನ್. ಹೆಗಡೆ — 70224 20400

ಕೆ.ಎಂ. ಶೇಖರ — 98456 29073

ಅನಿಲ್ ಪೇರ್ಡೂರು — 90369 63626

ನಾಗರಾಜ್ ನೈಕಂಬ್ಳಿ — 97414 74255

ರಾಜೇಶ್ ಕೊಂಡಳ್ಳಿ — 93534 63402ಬೆಂಗಳೂರಿನ ಕಲಾಪ್ರೇಮಿಗಳಿಗಾಗಿ ಇದು ಕೇವಲ ಒಂದು ತಾಳಮದ್ದಳೆ ಕಾರ್ಯಕ್ರಮವಲ್ಲ — ಆಲೋಚನೆ, ಸಂವಾದ ಮತ್ತು ಪುರಾಣ‌ ಜ್ಞಾನ ಸಂಭ್ರಮದ ಮಧ್ಯಾಹ್ನ. ತಾಳಮದ್ದಳೆಯ ಈ ರಸದೌತಣವನ್ನು ಮಿಸ್ ಮಾಡಿಕೊಳ್ಳಬೇಡಿ!

PREV

Recommended Stories

2026ನೇ ವರ್ಷದ 20 ಸಾರ್ವತ್ರಿಕ ರಜೆಗಳ ಪಟ್ಟಿ ಪ್ರಕಟಿಸಿದ ಸರ್ಕಾರ
ಮಧುಮೇಹ ಎಂದರೆ ಏನು? ಯಾರಿಗೆ ಬರಬಹುದು ? ಲಕ್ಷಣ ಹಾಗೂ ಚಿಕಿತ್ಸೆ ಹೇಗೆ ?