ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಬಳಿದ ಮಾತನಾಡಿದ ಚಿತ್ರನಟ ದರ್ಶನ್, ನಿರ್ದೇಶಕ ಯೋಗರಾಜ್ ಭಟ್ ಇದುವರೆಗೂ ಮಾಡಿದ ಸಿನಿಮಾಗಳಿಗಿಂತ ವಿಭಿನ್ನ ಚಿತ್ರ ಇದಾಗಿದೆ. ಯುವ ಕಲಾವಿದರು ಜೀವನದಲ್ಲಿ ತಾಳ್ಮೆ ಇಟ್ಟುಕೊಳ್ಳಬೇಕು. ಎಲ್ಲರಿಗೂ ಟೈಮ್ ಬಂದೇ ಬರುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗರಡಿ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದಂತೆ ಮುಂದೆಯೂ ಹೊಸ ಪ್ರತಿಭೆಗಳಿಗೆ ಕೌರವ ಪ್ರೊಡಕ್ಷನ್‌ನಲ್ಲಿ ಅವಕಾಶ ಸಿಗಲಿ. ಉತ್ತರ ಕರ್ನಾಟಕ ಜನರು ಕಲಾವಿದರನ್ನು ಪ್ರೋತ್ಸಾಹಿಸಿ, ಬೆಳೆಸಿ ಎಂದು ಮನವಿ ಮಾಡಿದರು.ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಚಿತ್ರನಟ ದರ್ಶನ್ ಆಸೆಯಂತೆ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣಿಬೆನ್ನೂರಿನಲ್ಲಿ ಆಯೋಜಿಸಲಾಗಿದೆ. ನ.10ರಂದು ರಾಜ್ಯಾದ್ಯಂತ ಬಹು ನಿರೀಕ್ಷಿತ ‘ಗರಡಿ’ ಚಲನಚಿತ್ರವು ಏಕಕಾಲಕ್ಕೆ ಬಿಡುಗಡೆಯಾಗಲಿದ್ದು, ಉತ್ತಮ ಫಲಿತಾಂಶ ಅಭಿಮಾನಿಗಳಿಂದ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದ ಕಾರ್ಯಕಾರಿ ನಿರ್ಮಾಪಕಿ ಸೃಷ್ಟಿ ಪಾಟೀಲ ಮಾತನಾಡಿ, ಗರಡಿ ಚಿತ್ರದ ನಿಜವಾದ ಬೆನ್ನೆಲುಬು ದರ್ಶನ್. ಅವರನ್ನು ನಾನು ಪ್ರೀತಿಯಿಂದ ಅಣ್ಣ ಎಂದು ಕರೆಯುತ್ತೇನೆ. ಕೌರವ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಗರಡಿ 18ನೇ ಚಲನಚಿತ್ರ. ಸಂಸ್ಥೆ ವತಿಯಿಂದ ಈ ಹಿಂದೆ ನಿರ್ಮಿಸಿದ ಚಿತ್ರಗಳಿಗೆ ಆಶೀರ್ವದಿಸಿದಂತೆ ಈ ಚಿತ್ರವನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಗರಡಿ ಟ್ರೈಲರ್ ಬಿಡುಗಡೆ ಅಂಗವಾಗಿ ಸಾಂಸ್ಕೃತಿಕ ಸಂಜೆ ಮನರಂಜನಾ ಕಾರ್ಯಕ್ರಮ ನಡೆದವು. ರಾಜ್ಯೋತ್ಸವದ ನಿಮಿತ್ತ ಕನ್ನಡಪರ ಗೀತೆಗಳು, ಡಾ. ರಾಜಕುಮಾರ್, ವಿಷ್ಣುವರ್ಧನ್, ''''ಕೌರವ'''' ಬಿ.ಸಿ. ಪಾಟೀಲ, ದರ್ಶನ್ ಅವರ ಚಿತ್ರಗಳ ಗೀತೆಗಳಿಗೆ ಕಲಾವಿದರು ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಿದರು.
ನಟಿ ನಿಶ್ವಿಕಾ ನಾಯ್ಡು ಮಾತನಾಡಿ, ಚಿತ್ರದಲ್ಲಿ ಒಂದು ಹಾಡಿಗೆ ನೃತ್ಯ ಮಾಡಿದ್ದು, ಆ ಹಾಡು ಪ್ರೇಕ್ಷಕರ ಮನಗೆದ್ದಿರುವುದು ಸಂತಸ ತಂದಿದೆ ಎಂದರು.
ಪ್ರೇಕ್ಷಕರಿಂದ ‘ಡಿ ಬಾಸ್’ ಹರ್ಷೋದ್ಘಾರ:
ಇದೇ ಮೊದಲ ಬಾರಿಗೆ ಚಲನಚಿತ್ರವೊಂದರ ಟ್ರೈಲರ್ ಅನ್ನು ರಾಣಿಬೆನ್ನೂರಲ್ಲಿ ಬಿಡುಗಡೆಗೊಳಿಸಿದ್ದರಿಂದ ಈ ವರ್ಣರಂಜಿತ ಕಾರ್ಯಕ್ರಮವನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು. ಕಲಾವಿದರ ನೃತ್ಯರೂಪಕಗಳಿಗೆ ಚಪ್ಪಾಳೆ, ಶಿಳ್ಳೆಗಳ ಸುರಿಮಳೆಗೈದರು.