ಕನ್ನಡಪ್ರಭ ವಾರ್ತೆ ಹಾಸನ
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವಾರದಿಂದ ಜೋರಾಗಿ ರೈತರ ಹೋರಾಟ ನಡೆದು ಕೊನೆಗೂ ಸರ್ಕಾರವನ್ನು ಕಾದಿಸಿತು. ಮೆಕ್ಕೆಜೋಳ ಖರೀದಿ ಕೇಂದ್ರಗಳ ಸ್ಥಾಪನೆ ಮತ್ತು ಬಿಳಿಸುಳಿ ರೋಗದಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕು ಎಂದು ರೈತಸಂಘ ನಡೆಸಿದ ಅಹೋರಾತ್ರಿ ಧರಣಿ ಸತ್ಯಾಗ್ರಹದ ಪರಿಣಾಮವಾಗಿ, ರಾಜ್ಯ ಸರ್ಕಾರಕ್ಕೆ ಬೇಡಿಕೆಗಳನ್ನು ಪರಿಗಣಿಸುವುದರ ಹೊರತಾಗಿಯೂ ಬೇರೆ ಮಾರ್ಗ ಉಳಿಯಲಿಲ್ಲ. ೨೪.೧೧.೨೦೨೫ ರಿಂದ ೩೧.೧೧.೨೦೨೫ರವರೆಗೆ ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತ ಸಂಘದ ನೇತೃತ್ವದಲ್ಲಿ ತೀವ್ರವಾಗಿ ನಡೆದ ಧರಣಿ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳು ಕೆಎಂಎಫ್, ಎಪಿಎಂಸಿ, ಕೃಷಿ ಇಲಾಖೆ ಮತ್ತು ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು.
ಈ ಸಭೆಯಲ್ಲಿ ಕೆಎಂಎಫ್ ಅಧಿಕಾರಿಗಳು ೦೧.೧೨.೨೦೨೫ರಿಂದಲೇ ಸರ್ಕಾರ ನಿಗದಿಪಡಿಸಿರುವ ರು. ೨೪೦೦ ಬೆಂಬಲ ದರಕ್ಕೆ, ಪ್ರತಿ ರೈತನಿಂದ ಕನಿಷ್ಠ ೫೦ ಕ್ವಿಂಟಲ್ ಮೆಕ್ಕೆಜೋಳ ಖರೀದಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು. ಆದಾಗ್ಯೂ ಪ್ರಕ್ರಿಯೆ ಆರಂಭವಾಗುವ ವೇಳೆಯಲ್ಲಿ, ಪ್ರತಿ ರೈತನಿಗೆ ಒಂದು ಹೆಕ್ಟೇರ್‌ಗೆ ಕೇವಲ ೨೦ ಕ್ವಿಂಟಲ್ ಮಾತ್ರ ಖರೀದಿಸುವ ಮಿತಿ ವಿಧಿಸಲಾಯಿತು. ಇದರಿಂದ ಮತ್ತೆ ಅಸಮಾಧಾನಗೊಂಡ ರೈತಸಂಘ ಮುಖಂಡರು ೬.೧೨.೨೦೨೫ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಭೇಟಿಯಾಗಿ, ನಿಗದಿಪಡಿಸಿದಂತೆ ೫೦ ಕ್ವಿಂಟಲ್ ಖರೀದಿ ಮಾಡಲು ಹಾಗೂ ಬಿಳಿಸುಳಿ ರೋಗಕ್ಕೆ ತುತ್ತಾದ ಸುಮಾರು ೧೨,೦೦೦ ರೈತರಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಯಿತು ಎಂದು ಹೇಳಿದರು.ಈ ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಯವರು ಬಿಳಿಸುಳಿ ರೋಗಪೀಡಿತರಿಗೆ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ಸಮಯದಲ್ಲಿ ರಾಜ್ಯ ರೈತ ಸಂಘವು ೮.೧೨.೨೦೨೫ರಂದು ಹಾವೇರಿ ಜಿಲ್ಲೆಯ ಮೋಟೆಬೆನ್ನೂರಲ್ಲಿ ಯೋಜಿಸಿದ್ದ ದೊಡ್ಡ ಮಟ್ಟದ ರಸ್ತೆ ತಡೆ ಹೋರಾಟಕ್ಕೆ ಹಾಸನದ ರೈತರೂ ಸೇರಲು ಸಜ್ಜಾಗಿದ್ದರು.ಆದರೆ, ಹೋರಾಟ ಮತ್ತಷ್ಟು ತೀವ್ರಗೊಳ್ಳುವುದನ್ನು ತಪ್ಪಿಸಲು, ೭.೧೨.೨೦೨೫ರಂದು ಮುಖ್ಯಮಂತ್ರಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಮೂಲಕ ಅಧಿಕೃತ ಆದೇಶ ಹೊರಡಿಸಿ, ಪ್ರತಿ ರೈತನಿಂದ ೫೦ ಕ್ವಿಂಟಲ್ ಮೆಕ್ಕೆಜೋಳ ಖರೀದಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಲು ಮುಂದಾದರು ಎಂದರು. ಈ ಆದೇಶದೊಂದಿಗೆ ಹಾಸನ ಜಿಲ್ಲೆಯಾದ್ಯಂತ ತಕ್ಷಣ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು. ರೈತರಿಂದ ನೇರವಾಗಿ ಖರೀದಿ ಪ್ರಕ್ರಿಯೆ ಸುಗಮವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ಆಡಳಿತವನ್ನು ಒತ್ತಾಯಿಸಿದೆ. ಜೊತೆಗೆ, ಬಿಳಿಸುಳಿ ರೋಗದಿಂದ ಪ್ರಭಾವಿತ ರೈತರಿಗೆ ಪರಿಹಾರ ಬಿಡುಗಡೆ ಆಗುವವರೆಗೂ ಹೋರಾಟ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಲಕ್ಷ್ಮಣ್, ಕೆ.ಎಸ್. ಕಾಂತರಾಜು, ಶೇಷಣ್ಣ ಇತರರು ಉಪಸ್ಥಿತರಿದ್ದರು.