ರಾಣಿಬೆನ್ನೂರು: ಪ್ರಸ್ತುತ ಕಾಲಘಟ್ಟದಲ್ಲಿ ಹಿಂದಿನ ಕಾಲದ ಗುರುಕುಲ ಮಾದರಿ ಶಿಕ್ಷಣದ ಅಗತ್ಯವಿದೆ ಎಂದು ನಿವೃತ್ತ ಶಿಕ್ಷಕ ಜಿ.ಬಿ. ಮಾಸಣಗಿ ಹೇಳಿದರು. ನಗರದ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಶನಿವಾರ 1999-2000ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಗುರುವಂದನಾ ಮತ್ತ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಶಿಕ್ಷಣದಲ್ಲಿ ಸೇವೆಯ ಜೊತೆಗೆ, ಶಿಕ್ಷಣ ದೊರಕುತ್ತಿತ್ತು. ಇಂದಿನ ಶಿಕ್ಷಣದಲ್ಲಿ ಸೇವೆ, ನೈತಿಕತೆ, ಸಂಸ್ಕಾರ ಇಲ್ಲವಾಗಿದೆ. ಹೀಗಾಗಿ ನಮ್ಮ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಗತಿ ಏನು ಎನ್ನುವ ಚಿಂತನೆ ಕಾಡುತ್ತಿದೆ ಎಂದರು.ನಿವೃತ್ತ ಶಿಕ್ಷಕ ಎಚ್.ಪಿ. ಬಣಕಾರ ಮಾತನಾಡಿ, ಆಧುನಿಕ ಶಿಕ್ಷಣದಲ್ಲಿ ಎಲ್ಲ ರೀತಿಯ ಬದಲಾವಣೆ ಕಾಣುತ್ತಿದ್ದೇವೆ. ಕೋವಿಡ್ ನಂತರ ಗುರು ಮತ್ತು ಶಿಷ್ಯರ ಪರಂಪರೆ ಮಾಯವಾಗಿದೆ. ಮಾನವೀಯ ಸಂಬಂಧಗಳು ಮರೆಯಾಗಿವೆ. ವಿದ್ಯಾರ್ಥಿ- ಶಿಕ್ಷಕ ಮತ್ತು ಪಾಲಕರು ಈ ಮೂರು ತ್ರಿವೇಣಿ ಸಂಗಮವಾಗಿ ಶಿಕ್ಷಣ ಪಡೆದವರು ಮಾತ್ರ ಅದೃಷ್ಟಶಾಲಿಗಳಾಗಿದ್ದಾರೆ ಎಂದರು. ನಿವೃತ್ತ ಶಿಕ್ಷಕರುಗಳಾದ ಡಾ. ಮಾಲತೇಶ್ ಸಿ.ಎಂ, ಎಚ್.ಎಮ್. ನಂದಿಹಳ್ಳಿ, ಆರ್.ಎಚ್. ಬಣಕಾರ, ರಮೇಶ್ ಚಲವಾದಿ, ಎಸ್. ಆರ್.ತೇವರಿ ಮಾತನಾಡಿದರು. ಮುಖ್ಯೋಪಾಧ್ಯಾಯ ಎಸ್.ಎಲ್. ಹೊಸಮನಿ ಅಧ್ಯಕ್ಷತೆ ವಹಿಸಿದ್ದರು.ಎಸ್.ಎಸ್. ಸೋಮನಹಳ್ಳಿ, ಬಿ.ವಿ. ಅಂಚೇರ, ಎಸ್. ವಿ. ನಾರಾಯಣಿ, ಎಸ್.ಎಂ. ಖತಿಬ್, ಎಂ. ಬಿ. ಶಿವಾನಂದ, ಜಯಲಲಿತಾ ಹೊಸಮನಿ, ಪಿ.ವಿ. ದೊಡ್ಡಮನಿ, ಜ್ಯೋತಿ ಸಾವಂತಲವರ, ಕಾಂತರಾಜ್, ಎಸ್. ಎಸ್. ಕೋರಿಶೆಟ್ಟರ, ಸಂತೋಷ ಬಲ್ಲೂರ, ಬಸವರಾಜ ನಲವಾಗಲ, ಕವಿತಾ ಬಣಕಾರ, ವೆಂಕಟೇಶ ಎನ್., ಚಿದಾನಂದ ಬೆನಕನಕೊಂಡ, ಪ್ರೊ.ಗುಡ್ಡಪ್ಪ ಮಾಳಗುಡ್ಡಪ್ಪನವರ ಮತ್ತಿತರರಿದ್ದರು. ನಂತರ ಹಳೆಯ ಮತ್ತು ಹೊಸ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.