‘ಅತ್ಯಾಚಾರ ಪ್ರಕರಣ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ’

KannadaprabhaNewsNetwork |  
Published : Aug 18, 2024, 01:46 AM IST
17ಕೆಬಿಪಿಟಿ.2.ಬಂಗಾರಪೇಟೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ರೈತ ಸಂಘದ ಮಹಿಳೆಯರು. | Kannada Prabha

ಸಾರಾಂಶ

ಈ ದೇಶದ ವಿದ್ಯಾವಂತರಿಂದ ಹಿಡಿದು ಅವಿದ್ಯಾವಂತರವರೆಗೂ ಮೃಗಗಳಂತೆ ವರ್ತನೆ ಮಾಡುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಸರ್ಕಾರಗಳು ವಿಫಲವಾಗಿವೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸೂಕ್ತ ಕಾನೂನು ರೂಪಿಸಬೇಕು

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಕೊಲೆ ನಿಯಂತ್ರಣ ಮಾಡಲು ಕಾನೂನು ರಚನೆ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ರೈತಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨ ದಿನಗಳ ಹಿಂದೆ ೭೮ನೇ ಸ್ವಾತಂತ್ರ್ಯ ಸಂಭ್ರಮಾಚರಣೆ ಮಾಡಿದ ಸರ್ಕಾರಗಳಿಗೆ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳು ಜ್ಞಾಪಕಕ್ಕೆ ಬರುತ್ತಿಲ್ಲವೇ. ಮಧ್ಯರಾತ್ರಿ ಬ್ರಿಟೀಷರಿಂದ ಬಂದಂತಹ ಸ್ವಾತಂತ್ರ್ಯ ಯಾರಿಗೆ ಬಂದಿದೆ. ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಲಕ್ಷಾಂತರ ಮಹನೀಯರ ಬಲಿದಾನವಾದ ನಂತರ ಬಂದಂತಹ ಸ್ವಾತಂತ್ರ್ಯ ಮಧ್ಯರಾತ್ರಿ ಮಹಿಳೆ ನಿರ್ಭೀತವಾಗಿ ಓಡಾಡಿದರೆ ಮಾತ್ರ ಸ್ವಾತಂತ್ರ್ಯ ಬಂದಿರುವುದು ಸಾರ್ಥಕವಾಗುತ್ತಿತ್ತು ಎಂದರು.ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ

ಆದರೆ, ಆ ಸ್ವಾತಂತ್ರ್ಯ ಪ್ರತಿದಿನ, ಪ್ರತಿಕ್ಷಣ, ಪ್ರತಿನಿಮಿಷ ದೇಶಾದ್ಯಂತ ಒಂದಲ್ಲಾ ಒಂದು ರೀತಿ ಒಂದು ವರ್ಷದ ಮಗುವಿನಿಂದ ನೂರು ವರ್ಷದ ವೃದ್ಧೆಯವರೆಗೂ ಅತ್ಯಾಚಾರ, ದೌರ್ಜನ್ಯ, ಕೊಲೆ, ವರದಕ್ಷಿಣೆ, ಕಿರುಕುಳ ಒಂದಲ್ಲಾ ಸಮಸ್ಯೆಯಿಂದ ಬಾಳಿ ಬದುಕಬೇಕಾದ ಹೆಣ್ಣು ಮಗು ಈ ದೇಶದ ವಿದ್ಯಾವಂತರಿಂದ ಹಿಡಿದು ಅವಿದ್ಯಾವಂತರವರೆಗೂ ಮೃಗಗಳಂತೆ ವರ್ತನೆ ಮಾಡುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಲು ಸರ್ಕಾರಗಳು ವಿಫಲವಾಗಿವೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.ಕೊಲ್ಕತ್ತಾತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೊಬ್ಬರ ಮೇಲೆ ಭೀಕರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಇಡೀ ದೇಶಾದ್ಯಂತ ವೈದ್ಯಕೀಯ ವಲಯದಲ್ಲಿ ತಲ್ಲಣ ಉಂಟು ಮಾಡುತ್ತಿದೆ. ಮಹಿಳೆಯ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆದಾಗ ದೇಶಾದ್ಯಂತ ಸಾರ್ವಜನಿಕರ ಸಂಘಸಂಸ್ಥೆಗಳ ಹೋರಾಟಕ್ಕೆ ತಣ್ಣೀರು ಎರೆಚಲು ಸರ್ಕಾರಗಳು ಸಂಬಂಧಪಟ್ಟ ಇಲಾಖೆಯವರು ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುತ್ತೇವೆ ಎಂದು ಭರವಸೆ ನೀಡಿ ನಾಪತ್ತೆಯಾದರೆ ಮತ್ತೆ ಅದೇ ಪ್ರಕರಣಗಳು ಮರುಕಳಿಸಿದಾಗ ಮಾತ್ರ ಮಾನವೀಯ ಮೌಲ್ಯಗಳಿಲ್ಲದ ಸರ್ಕಾರಗಳು ಅದೇ ರಾಗ, ಅದೇ ತಾಳ ಎಂಬಂತೆ ತಪ್ಪು ಭರವಸೆಯನ್ನು ನೀಡಿ ನಾಪತ್ತೆಯಾಗುತ್ತಿದ್ದಾರೆ ಎಂದರು.ಸಿಎಂ ನಿವಾಸದ ಮುಂದೆ ಪ್ರತಿಭಟನೆಪದೇಪದೇ ಇದೇ ರೀತಿ ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ ಲಕ್ಷಾಂತರ ಮಹಿಳೆಯರೊಂದಿಗೆ ಕಾನೂನು ರಚನೆ ಮಾಡಲು ವಿಫಲವಾಗಿರುವ ಮುಖ್ಯಮಂತ್ರಿಗಳ ಮನೆ ಮುಂದೆ ಪೊರಕೆ ಚಳವಳಿ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಅಪ್ಪೋಜಿರಾವ್, ಶೈಲಜ, ವೆಂಕಟಮ್ಮ, ಗೌರಮ್ಮ, ರತ್ನಮ್ಮ, ಮುನಿವೆಂಕಟಮ್ಮ, ನಾನಮ್ಮಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ