ಜ.20, 21ರಂದು ವಿಜಯಪುರ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿಟ್ಟಿನಹಳ್ಳಿಯಲ್ಲಿ ಜರುಗುತ್ತಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಸೋಮಲಿಂಗ ಗೆಣ್ಣೂರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಜ.20, 21ರಂದು ವಿಜಯಪುರ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿಟ್ಟಿನಹಳ್ಳಿಯಲ್ಲಿ ಜರುಗುತ್ತಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಸೋಮಲಿಂಗ ಗೆಣ್ಣೂರ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ನಗರದಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಚರ್ಚಿಸಿ ಸರ್ವಾನುಮತದಿಂದ ಸಾಹಿತಿ ಸೋಮಲಿಂಗ ಗೆಣ್ಣೂರ ಇವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಸೋಮಲಿಂಗ ಗೆಣ್ಣೂರ ಚಿಂತಕರು, ವಾಗ್ಮಿಗಳು, ಲೇಖಕರು ಹಾಗೂ ವಿಮರ್ಶಕರಾಗಿದ್ದು, ದೇವರಗೆಣ್ಣೂರ ಎಂಬ ಆತ್ಮಕಥನ. ನಮ್ಮ ಸಂವಿಧಾನ ನಮ್ಮ ಹೆಮ್ಮೆ ಹಾಗೂ ಅಂಬೇಡ್ಕರ್ ಮಾರ್ಗ ಹಾಗೂ ಸರ್ವಶ್ರೇಷ್ಥ ಭಾರತೀಯ ಎಂಬ ಕೃತಿಗಳನ್ನು ಸಾರಸ್ವತ ಲೋಕಕ್ಕೆ ಸ್ಮರಿಸಿದ್ದಾರೆ.ಸರ್ವಾಧ್ಯಕ್ಷರ ಆಯ್ಕೆ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಸರ್ವಾಧ್ಯಕ್ಷರ ಆಯ್ಕೆ ಪಾರದರ್ಶಕತೆಯಿಂದ ಆಯ್ಕೆ ಮಾಡಿದ್ದೇವೆ. ಕಸಾಪ ಸಂಸ್ಥೆ ಪ್ರತಿಭಾವಂತರನ್ನು ಹಾಗೂ ಸಾಹಿತ್ಯ ಕೃಷಿ ಮಾಡಿದವರನ್ನು ಗುರುತಿಸಿ ಗೌರವಿಸುವ ಪ್ರಾತಿನಿಧಿಕ ಸಂಸ್ಥೆಯಾಗಿದೆ. ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲರೂ ಸೇರಿ ತನು ಮನ ಧನ ದಿಂದ ಆಚರಿ ಯಶಸ್ವಿಗೊಳಿಸಿರಿ ಎಂದರು.
ಆಯ್ಕೆಯ ಸಂದರ್ಭದಲ್ಲಿ ಪದಾಧಿಕಾರಿಗಳಾದ ಶಿಲ್ಪಾ ಭಸ್ಮೆ, ಅಭಿಷೇಕ ಚಕ್ರವರ್ತಿ, ಆನಂದ ಕುಲಕರ್ಣಿ, ಜಗದೀಶ ಬೋಳಸೂರ, ಕಮಲಾ ಮುರಾಳ, ಅರ್ಜುನ ಶಿರೂರ, ಸಂಗನಬಸಪ್ಪ ರೆಡ್ಡಿ ಮಾತನಾಡಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಬಿ.ಎಂ.ಅಜೂರ ಹಾಗೂ ಡಾ.ಶೈಲಾ ಬಳಗಾನೂರ ಸೋಮಲಿಂಗ ಗೆಣ್ಣೂರ ಅವರ ಹೆಸರನ್ನು ಸೂಚಿಸಿದರು. ತಾಲೂಕ ಕಸಾಪ ಅಧ್ಯಕ್ಷ ಡಾ.ಆನಂದ ಕುಲಕರ್ಣಿ ಹಾಗೂ ಮಹಾದೇವಿ ತೆಲಗಿ ಅನುಮೊದಿಸಿದರು. ಸಭೆಯು ಸರ್ವಾನುಮತದಿಂದ ಅಂಗಿಕರಿಸಿತು. ಸಭೆಯಲ್ಲಿ ರಾಜೇಶ್ವರಿ ಮೋಪಗಾರ, ವಿಜಯಲಕ್ಷ್ಮಿ ಹಳಕಟ್ಟಿ, ಆಶಾ ಬಿರಾದಾರ, ಪ್ರೇಮಾ ಬ್ಯಾಕೋಡ, ಜಿ.ಎಸ್.ಬಳ್ಳೂರ, ಸಂಗನಗೌಡ ಬಿರಾದಾರ, ಮುದಸ್ಸರ ವಾಲಿಕಾರ, ಪೀರಸಾಬ ವಾಲಿಕಾರ, ಸವಿತಾ ದೊಡಮನಿ, ನೀಲಾ ಬಗಲಿ, ಕಮಲಾ ಬಿರಾದಾರ, ಜ್ಯೋತಿ ಪಡನಾಡ,
ಪಕ್ರುದ್ದೀನ ಹಿರೇಕೊಪ್ಪ, ಮಹಮ್ಮದ ವಾಲೀಕಾರ, ಪ್ರದೀಪ ನಾಯ್ಕೊಡಿ, ಅಹಮ್ಮದ ವಾಲಿಕಾರ, ಕುಮಾರಗೌಡ ಬಿರಾದಾರ, ಡಾ.ಸುರೇಶ ಕಾಗಲಕರಡ್ಡಿ, ಸುಶೀಲಾಬಾಯಿ ತಳೆವಾಡ, ಮಹಾಂತಮ್ಮ ಇಂಡಿ ಇದ್ದರು.