ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಕಸಬಾ ಹೋಬಳಿ ಗುಳಸಿಂದ ಗ್ರಾಮದ ರಾಘವೇಂದ್ರಸ್ವಾಮಿ ಪೂಜಾ ಮಂದಿರದ ಆವರಣದಲ್ಲಿನ ವಿಘ್ನೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅವರು ಮಾತನಾಡಿದರು. ಮಳೆಗಾಲದಲ್ಲಿ ಕೆರೆ ತುಂಬಿದಾಗ ಕೊಡಿಯಲ್ಲಿ ನೀರು ಹೆಚ್ಚು ಹರಿಯುವುದರಿಂದ ರಾಘವೇಂದ್ರಸ್ವಾಮಿ ಮಂದಿರಕ್ಕೆ ಹಾನಿಯಾಗುತ್ತದೆ. ಇದರಿಂದ ದೇವಾಲಯದ ಧರ್ಮದರ್ಶಿಗಳು ಮನವಿ ಮಾಡಿದ್ದರು. ಹಾಗಾಗಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಗ್ರಾಮದಲ್ಲಿ ಪುರಾತನ ಕಾಲದ ಲಕ್ಷ್ಮೀದೇವಿ, ರಂಗನಾಥಸ್ವಾಮಿ ದೇವಾಲಗಳಿದ್ದು, ನೂತನವಾಗಿ ರಾಘವೇಂದ್ರಸ್ವಾಮಿ ಪೂಜಾ ಮಂದಿರ ನಿರ್ಮಾಣವಾಗಿ ಲೋಕಾರ್ಪಣೆಯಾಗಿದೆ. ಬಾಗೂರು ಮುಖ್ಯರಸ್ತೆಗೆ ಅಂದಾಜು ೩ ಲಕ್ಷ ರು. ವೆಚ್ಚ ಮಾಡಿ ಕಮಾನು ನಿರ್ಮಾಣ ಮಾಡಿಸಲಾಗುತ್ತಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ನೀಡಿದ್ದಾರೆ. ಗ್ರಾಮದ ದೇವಾಲಯಗಳ ಮುಖ್ಯ ಪ್ರವೇಶದ್ವಾರವಾಗಿದ್ದು ದೇವಾಲಯದ ಪ್ರಾಂಗಣದ ಸೌಂದರ್ಯ ಹೆಚ್ಚಲಿದೆ ಎಂದರು.ರಸ್ತೆ ಅಭಿವೃದ್ಧಿ: ರಾಷ್ಟ್ರೀಯ ಹೆದ್ದಾರಿಯಿಂದ ಗುಳಸಿಂದ ಗ್ರಾಮದವರೆಗೆ ಎರಡು ಕಿ.ಮೀ. ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ಗ್ರಾಮ ಮುಳುಗಡೆಯಾದ ಮೇಲೆ ಸರ್ಕಾರ ಮಂಜೂರು ಮಾಡಿದ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಅಲ್ಲಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕಿದ್ದು, ಎರಡು ವರ್ಷದಿಂದ ಸರ್ಕಾರ ಅನುದಾನ ನೀಡಿಲ್ಲ ಹಾಗಾಗಿ ಕಾಮಗಾರಿ ಮಾಡಿಸಲಾಗಿಲ್ಲ, ಮೂರು ತಿಂಗಳಲ್ಲಿ ರಸ್ತೆ ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು. ಶಾಂತಿ ನೆಲೆಸಲಿದೆ:
ಕ್ಷೇತ್ರದ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವ ಪ್ರಮುಖ್ಯತೆಯನ್ನು ದೇವಾಲಯಗಳ ಅಭಿವೃದ್ಧಿಗೂ ನೀಡಲಾಗುತ್ತಿದೆ. ಸಾಕಷ್ಟು ಗ್ರಾಮಗಳಲ್ಲಿ ನೂತನವಾಗಿ ನಿರ್ಮಾಣ ಆಗುವ ದೇವಾಲಯಗಳು, ಶಿಥಿಲವಾಗಿರುವ ದೇವಾಲಯಗಳ ಅಭಿವೃದ್ಧಿ, ರಥದ ಮನೆ ನಿರ್ಮಾಣ, ದೇವಾಲಯದ ಪ್ರಾಂಗಣ ಅಭಿವೃದ್ಧಿ ಮಾಡಲು ಅನುದಾನ ನೀಡಲಾಗುತ್ತಿದೆ. ಇದೇ ರೀತಿ ಗುಳಸಿಂದ ಗ್ರಾಮದಲ್ಲಿ ಧಾರ್ಮಿಕ ಕಾರ್ಯಗಳಿಗೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಹಲವು ವರ್ಷದಿಂದ ಗುಲಸಿಂದ ಗ್ರಾಮದ ಸಮುದಾಯ ಭವನ ಕಾಮಗಾರಿ ಸ್ಥಗಿತವಾಗಿದೆ. ಈಗಾಗಲೇ ೩೦ ಲಕ್ಷ ಹಣವನ್ನು ಗುತ್ತಿಗೆದಾರನಿಗೆ ಕೊಡಿಸಲಾಗಿದೆ. ಮುಂದಿನ ಮೂರು ತಿಂಗಳ ಒಳಗೆ ಕಾಮಗಾರಿ ಪ್ರಾರಂಭಿಸಿ ಸಮುದಾಯ ಭವನ ಉದ್ಘಾಟನೆ ಮಾಡಲಾಗುವುದು. ಇದಾದ ಬಳಿಕ ಶಾಲಾ ಆವರಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿ ದೇವಾಲಯಗಳ ಮುಂಭಾಗ ವಾಹನ ನಿಲ್ದಾಣಕ್ಕೆ ಅನುವು ಮಾಡಿಕೊಡಲಾಗುವುದು ಎಂದರು. ರಾಘವೇಂದ್ರಸ್ವಾಮಿ ಪೂಜಾ ಮಂದಿರದ ಧರ್ಮದರ್ಶಿ ಎನ್.ಟಿ.ರಾಮಕೃಷ್ಣ ಮಾತನಾಡಿ, ಎರಡೂವರೆ ವರ್ಷದ ಹಿಂದೆ ರಾಯರ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದು ಗ್ರಾಮಸ್ಥರು ಹಾಗೂ ಹಲವು ದಾನಿಗಳ ಸಹಕಾರದಲ್ಲಿ ಪೂರ್ಣಗೊಂಡಿದೆ. ಮುಂದಿನ ದಿವಸಗಳಲ್ಲಿ ಭಕ್ತರ ಸಹಕಾರದಲ್ಲಿ ದೇವಾಲಯ ಮುನ್ನಡೆಸಲಾಗುವುದು ಎಂದು ತಿಳಿಸಿದರು. ಗ್ರಾಮದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಹಿರಿಯ ನಾಗರೀಕರಿಗೆ ರಾಘವೇಂದ್ರಸ್ವಾಮಿ ಪೂಜಾ ಮಂದಿರದ ಧರ್ಮದರ್ಶಿ ಸುಲೋಚನ ರಾಮಕೃಷ್ಣ ವಸ್ತ್ರಗಳನ್ನು ನೀಡಿ ಸನ್ಮಾನಿಸಿದರು.