ಜೆಎಸ್‌ಎಸ್‌ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಗುಂಪುವಿಮೆ

KannadaprabhaNewsNetwork |  
Published : Feb 10, 2025, 01:47 AM IST
9ಎಚ್ಎಸ್ಎನ್14 : ಹೊಳೆನರಸೀಪುರ ತಾ. ದೊಡ್ಡಕಾಡನೂರಿನ ಜೆಎಸ್‌ಎಸ್ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪಘಾತ ಒಂದರಲ್ಲಿ ಮೃತಪಟ್ಟಿದ್ದ ದಿನೇಶ ಹೆಚ್.ಆರ್. ಎಂಬ ವಿದ್ಯಾರ್ಥಿ ಪೋಷಕರಿಗೆ ವಿಮಾ ಹಣದ ೫ ಲಕ್ಷ ರೂ. ಚೆಕ್ ನೀಡಲಾಯಿತು.  | Kannada Prabha

ಸಾರಾಂಶ

ಶ್ರೀ ಕ್ಷೇತ್ರ ಸುತ್ತೂರು ಮಠದ ಶ್ರೀಗಳ ಕಾಳಜಿ ಹಾಗೂ ದೂರದೃಷ್ಠಿಯ ಫಲವಾಗಿ ಜೆಎಸ್‌ಎಸ್ ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಐದು ಲಕ್ಷ ರುಪಾಯಿಗಳ ಗುಂಪು ಅಪಘಾತ ವಿಮಾ ಸೌಲಭ್ಯವನ್ನು ಆಡಳಿತ ಮಂಡಳಿಯು ಕಲ್ಪಿಸಿದೆ. ಇಂತಹ ಅನುಕೂಲತೆಗಳನ್ನು ಕಲ್ಪಿಸಿರುವ ಶ್ರೀ ಕ್ಷೇತ್ರ ಸುತ್ತೂರು ಮಠದ ಸ್ವಾಮೀಜೀಯವರಿಗೆ ನಾವೆಲ್ಲರೂ ಸದಾ ಋಣಿಗಳಾಗಿರಬೇಕು ಪ್ರಾಂಶುಪಾಲ ಡಾ.ಚೌಡಯ್ಯ ಕಟ್ನವಾಡಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ದೊಡ್ಡಕಾಡನೂರಿನ ಜೆಎಸ್‌ಎಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ವಿಮಾ ಹಣ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಗುಂಪು ಅಪಘಾತ ವಿಮಾ ಸೌಲಭ್ಯ ಜತೆಗೆ ಅಪಘಾತದಲ್ಲಿ ದೇಹದ ಅಂಗ ಊನವಾದವರು, ಗಾಯಗೊಂಡವರೂ ಸಹ ಈ ಸೌಲಭ್ಯದಲ್ಲಿ ಧನಸಹಾಯ ಪಡೆಯಬಹುದೆಂದು ತಿಳಿಸಿ, ಸಮಗ್ರ ಮಾಹಿತಿ ನೀಡಿದರು.

ತಾಲೂಕಿನ ಹಳ್ಳಿಮೈಸೂರು ಹೋಬಳಿ ಹೊನ್ನೇನಹಳ್ಳಿಯ ರೇವಣ್ಣ ಯೋಗಮಣಿ ದಂಪತಿಗಳ ಪುತ್ರ ದಿನೇಶ ಎಚ್.ಆರ್‌. ಎಂಬ ವಿದ್ಯಾರ್ಥಿಯು ಸೆಪ್ಟಂಬರ್ ೨೦೨೪ರಲ್ಲಿ ನಡೆದ ಅಪಘಾತ ಒಂದರಲ್ಲಿ ಮೃತಪಟ್ಟಿದ್ದರು. ಆ ಸಂಬಂಧ ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದ ಐದು ಲಕ್ಷ ರುಪಾಯಿಗಳ ಗುಂಪು ಅಪಘಾತ ವಿಮಾ ಸೌಲಭ್ಯದ ಫಲವಾಗಿ ಮಂಜೂರಾಗಿದ್ದ ಐದು ಲಕ್ಷ ರೂಪಾಯಿಗಳ ಚೆಕ್ಕನ್ನು ನೊಂದ ಕುಟುಂಬ ಸದಸ್ಯರಿಗೆ ನೀಡಲಾಯಿತು.

ಪ್ರೌಢಶಾಲಾ ಮುಖ್ಯ ಶಿಕ್ಷಕ ಸುರೇಶ ಪಿ, ಮುಖಂಡರಾದ ಟೈಲರ್‌ ರವಿ, ಗಾ.ಪಂ. ಸದಸ್ಯ ತೇಜುಸ್ವಾಮಿ, ಇತಿಹಾಸ ಉಪನ್ಯಾಸಕ ಸೋಮಣ್ಣ ಎಂ, ಅರ್ಥಶಾಸ್ತ್ರ ಉಪನ್ಯಾಸಕ ಮಹೇಶ ಪಿ, ಹಿಂದಿ ಶಿಕ್ಷಕ ಗಂಗಾನಾಯಕ್, ಕಚೇರಿ ಸಿಬ್ಬಂದಿಯಾದ ಮಲ್ಲೇಶ ಕೆ.ಪಿ, ನಟರಾಜ್ ಎ. ಎನ್, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ