ಹಲ್ಮಿಡಿ ಶಾಸನ ಹಾಸನ ಜಿಲ್ಲೆಯ ಹೆಮ್ಮೆ

KannadaprabhaNewsNetwork |  
Published : Nov 02, 2025, 02:30 AM IST
1ಎಚ್ಎಸ್ಎನ್17 :  | Kannada Prabha

ಸಾರಾಂಶ

ಮೊದಲು ಕನ್ನಡ ಹುಟ್ಟಿದ್ದು, ನಂತರ ಇಂಗ್ಲಿಷ್‌ ಭಾಷೆ ಹುಟ್ಟಿರುವುದು. ಇದನ್ನು ಪ್ರತಿಯೊಬ್ಬ ನಾಗರಿಕರು ಕೂಡ ತಿಳಿದುಕೊಳ್ಳಬೇಕಾದ ವಿಷಯವಾಗಿದೆ. ೧೦ನೇ ಶತಮಾನದಲ್ಲಿ ಬಸವಣ್ಣವರು ಕೂಡ ಮತ್ತು ವಿವಿಧ ಸಾಹಿತಿಗಳು ಕೂಡ ಕನ್ನಡದಲ್ಲಿ ಅನೇಕ ಕವಿ ಮತ್ತು ವಚನಗಳನ್ನು ಕೂಡ ಬರೆದಿದ್ದಾರೆ. ಕನ್ನಡ ಎಂಬುವುದು ಇಂದಿನಿಂದ ಹುಟ್ಟಿಲ್ಲ ಇದು ಬಹಳ ವರ್ಷಗಳ ಹಿಂದಿನಿಂದಲೂ ಹುಟ್ಟಿದೆ. ಇದಕ್ಕೆ ತನ್ನದೇ ಆದ ಸ್ಥಾನಮಾನಗಳನ್ನು ಒಳಗೊಂಡಿದೆ. ಕನ್ನಡವನ್ನು ಉಳಿಸಿ ಕನ್ನಡವನ್ನು ಬೆಳೆಸಿ ಎಂದು ತಾಲೂಕು ದಂಡಾಧಿಕಾರಿ ಜಿ. ಎಸ್. ಶಂಕರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕನ್ನಡದ ಮೊಟ್ಟಮೊದಲ ಹಲ್ಮಿಡಿ ಶಾಸನ ಕೂಡ ಹಾಸನ ಜಿಲ್ಲೆಯಲ್ಲಿ ಸಿಕ್ಕಿದ್ದು ಹೆಮ್ಮೆಯ ವಿಚಾರವಾಗಿದೆ ಎಂದು ತಾಲೂಕು ದಂಡಾಧಿಕಾರಿ ಜಿ. ಎಸ್. ಶಂಕರಪ್ಪ ತಿಳಿಸಿದರು.

ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿ, ಕನ್ನಡದ ಮೊಟ್ಟಮೊದಲ ಹಲ್ಮಿಡಿ ಶಾಸನವು ಕೂಡ ಹಾಸನ ಜಿಲ್ಲೆಯಲ್ಲಿ ಇರುವುದು ಒಂದು ರೀತಿಯ ಹೆಮ್ಮೆಯ ವಿಚಾರವಾಗಿದೆ. ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನ ಇದೆ. ಕನ್ನಡದಲ್ಲಿ "ಕವಿರಾಜ ಮಾರ್ಗ " ಎಂಬ ಕೃತಿಯನ್ನು ಕೂಡ ರಚಿಸಲಾಗಿದೆ. ಹಾಗೂ ಕನ್ನಡಕ್ಕೆ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿಯೂ ಕೂಡ ಲಭಿಸಿದೆ. ಅದರಲ್ಲಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದವರು ಕನ್ನಡಿಗರು ಎಂಬ ಹೆಮ್ಮೆಯ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡವನ್ನು ಹಿಂದಿನಿಂದಲೂ ಸುಲಲಿತವಾಗಿ ಮಾತನಾಡುವುದು ಮತ್ತು ಸುಂದರವಾಗಿ ಬರೆಯುವ ಪದ್ಧತಿಯು ಕೂಡ ನಡೆದುಬಂದಿದೆ. ಮೊದಲು ಕನ್ನಡ ಹುಟ್ಟಿದ್ದು, ನಂತರ ಇಂಗ್ಲಿಷ್‌ ಭಾಷೆ ಹುಟ್ಟಿರುವುದು. ಇದನ್ನು ಪ್ರತಿಯೊಬ್ಬ ನಾಗರಿಕರು ಕೂಡ ತಿಳಿದುಕೊಳ್ಳಬೇಕಾದ ವಿಷಯವಾಗಿದೆ. ೧೦ನೇ ಶತಮಾನದಲ್ಲಿ ಬಸವಣ್ಣವರು ಕೂಡ ಮತ್ತು ವಿವಿಧ ಸಾಹಿತಿಗಳು ಕೂಡ ಕನ್ನಡದಲ್ಲಿ ಅನೇಕ ಕವಿ ಮತ್ತು ವಚನಗಳನ್ನು ಕೂಡ ಬರೆದಿದ್ದಾರೆ. ಕನ್ನಡ ಎಂಬುವುದು ಇಂದಿನಿಂದ ಹುಟ್ಟಿಲ್ಲ ಇದು ಬಹಳ ವರ್ಷಗಳ ಹಿಂದಿನಿಂದಲೂ ಹುಟ್ಟಿದೆ. ಇದಕ್ಕೆ ತನ್ನದೇ ಆದ ಸ್ಥಾನಮಾನಗಳನ್ನು ಒಳಗೊಂಡಿದೆ. ಕನ್ನಡವನ್ನು ಉಳಿಸಿ ಕನ್ನಡವನ್ನು ಬೆಳೆಸಿ ಎಂದರು.

ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದಂತಹ ಗಣ್ಯಾತಿಗಣ್ಯರಿಗೆ ಸನ್ಮಾನಿಸಲಾಯಿತು. ಮತ್ತು ೧೦ನೇ ತರಗತಿಯಲ್ಲಿ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಾಸಕ ಸಿ. ಎನ್. ಬಾಲಕೃಷ್ಣ, ಪುರಸಭಾ ಅಧ್ಯಕ್ಷ ಮೋಹನ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಹಡೇನಹಳ್ಳಿ, ರಾಜ್ಯ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಪ್ರಕಾಶ್‌ಗೌಡ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹರೀಶ್, ಪುರಸಭೆಯ ಮುಖ್ಯ ಅಧಿಕಾರಿ ಯತೀಶ್ ಕುಮಾರ್, ನಗರ ವೃತ್ತ ನಿರೀಕ್ಷಕ ರಘುಪತಿ ಭಟ್, ಜಬೀಉಲ್ಲಾಬೇಗ್, ರವಿಮಡಿವಾಳ್, ಯಶೋಧಜೈನ್, ಮಹದೇವ್ ಇನ್ನು ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ