ತಾಲೂಕು ವೀರಶೈವ ಸಮಾಜದ ಧ್ವನಿಯಾಗಿ ನಿಲ್ಲುವೆ: ಅಡಗೂರು ಬಸವರಾಜ್

KannadaprabhaNewsNetwork |  
Published : Jul 24, 2024, 12:15 AM IST
23ಎಚ್ಎಸ್ಎನ್6 : ಹಳೇಬೀಡು  ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೇಲೂರು ತಾಲೂಕು ವೀರಶೈವ ಸಮಾಜದಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಅಡಗೂರು ಬಸವರಾಜುರವರನ್ನು ಬಸವಬಳಗದ ಮುಖಂಡರು ಬಸವೇಶ್ವರರ ಭಾವಚಿತ್ರ ನೀಡಿ ಸನ್ಮಾಸಿದರು. | Kannada Prabha

ಸಾರಾಂಶ

ನನಗೆ ಗೆಲುವು ಸಾಧಿಸಲು ಸಹಕರಿಸಿ, ಕೈಜೋಡಿಸಿ, ಶ್ರಮಿಸಿದ ಎಲಾ ಕಾರ್ಯಕರ್ತರಿಗೂ ಹಾಗೂ ಮುಖಂಡರಿಗೂ ಧನ್ಯವಾದದೊಂದಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ವೀರಶೈವ ಸಮಾಜದ ಸಂಘಟನೆಗೆ ಹೆಚ್ಚು ಒತ್ತು ನೀಡಿ ವೀರಶೈವ ಸಮಾಜದಲ್ಲಿ ನೊಂದವರಿಗೆ, ಕಷ್ಟದಲ್ಲಿರುವವರಿಗೆ ಮತ್ತು ಅನ್ಯಾಯವಾದ ಸಂದರ್ಭದಲ್ಲಿ ಅವರ ಪರ ಧ್ವನಿಯಾಗಿ ನಿಂತು ನ್ಯಾಯ ಒದಗಿಸಲು ಬದ್ಧನಾಗಿರುತ್ತೇನೆ.

ಕನ್ನಡಪ್ರಭ ವಾರ್ತೆ ಹಳೇಬೀಡು

ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವ ಬಳಗದ ವತಿಯಿಂದ ಹಾಗೂ ಬೇಲೂರು ತಾಲೂಕು ವೀರಶೈವ ಸಮಾಜದ ನೂತನ ಅಧ್ಯಕ್ಷರಾದ ಎ.ಎಸ್.ಬಸವರಾಜ್ ಅವರಿಗೆ ಗೌರವ ಸಮರ್ಪಣೆಯೊಂದಿಗೆ ಬಸವೇಶ್ವರರ ಭಾವಚಿತ್ರ ನೀಡಿ ಸನ್ಮಾನಿಸಲಾಯಿತು.

ಬಸವ ಬಳಗದ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ವೀರಶೈವ ಸಮಾಜದ ತಾಲೂಕು ನಾಯಕರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಅಯ್ಕೆ ಮಾಡಬೇಕಿತ್ತು, ಆದರೆ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ನಮ್ಮ ಭಾಗದ ಬಸವರಾಜ್‌ರವರು ಸುಮಾರು ೨೫೨ ಹೆಚ್ಚು ಮತಗಳ ಅಂತರದಿಂದ ಗೆಂಡೇಹಳ್ಳಿ ಚೇತನ್‌ಕುಮಾರ್ ವಿರುದ್ಧ ಜಯಗಳಿಸಿದ್ದಾರೆ. ಬಸವರಾಜ್‌ರವರು ವೀರಶೈವ ಸಮಾಜವನ್ನು ತಾಲೂಕಿನಲ್ಲಿ ಮತ್ತಷ್ಟು ಗಟ್ಟಿಗೊಳಿಸಿ ಉತ್ತಮ ಕೆಲಸ, ಕಾರ್ಯಗಳನ್ನು ಸಮಾಜದ ಅಭಿವೃದ್ಧಿಗಾಗಿ ಮಾಡಲಿ ಎಂದು ತಿಳಿಸಿದರು.

ನೂತನ ತಾಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ಅಡಗೂರು ಬಸವರಾಜು ಮಾಧ್ಯಮದೊಂದಿಗೆ ಮಾತನಾಡಿ, ನನಗೆ ಗೆಲುವು ಸಾಧಿಸಲು ಸಹಕರಿಸಿ, ಕೈಜೋಡಿಸಿ, ಶ್ರಮಿಸಿದ ಎಲಾ ಕಾರ್ಯಕರ್ತರಿಗೂ ಹಾಗೂ ಮುಖಂಡರಿಗೂ ಧನ್ಯವಾದದೊಂದಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ವೀರಶೈವ ಸಮಾಜದ ಸಂಘಟನೆಗೆ ಹೆಚ್ಚು ಒತ್ತು ನೀಡಿ ವೀರಶೈವ ಸಮಾಜದಲ್ಲಿ ನೊಂದವರಿಗೆ, ಕಷ್ಟದಲ್ಲಿರುವವರಿಗೆ ಮತ್ತು ಅನ್ಯಾಯವಾದ ಸಂದರ್ಭದಲ್ಲಿ ಅವರ ಪರ ಧ್ವನಿಯಾಗಿ ನಿಂತು ನ್ಯಾಯ ಒದಗಿಸಲು ಬದ್ಧನಾಗಿರುತ್ತೇನೆ. ವೀರಶೈವ ಸಮಾಜದ ಸದಸ್ಯರ ನೋಂದಣಿ ಕೆಲಸ ಮಂದಗತಿಯಲ್ಲಿದ್ದು, ಬೇಲೂರು ತಾಲೂಕಿನಲ್ಲಿ ಕೇವಲ ೧೫೧೭ ವೀರಶೈವ ಸಮಾಜದ ಸಂಘದ ನೋಂದಣಿ ಆಗಿದ್ದು, ಹಾಸನ ಜಿಲ್ಲೆಯಲ್ಲಿ ಬೇಲೂರು ತಾಲೂಕು ಸಮಾಜದ ಸದಸ್ಯರ ನೋಂದಣಿ ಎರಡನೇ ಸ್ಥಾನದಲ್ಲಿದೆ .ನನ್ನ ೫ ವರ್ಷಗಳ ಅಧಿಕಾರದ ಅವಧಿಯಲ್ಲಿ ಸುಮಾರು ೧೦ ಸಾವಿರ ವೀರಶೈವ ಸಮಾಜ ಸಂಘದ ಸದಸ್ಯತ್ವ ನೋಂದಣಿ ಮಾಡುವ ಗುರಿ ಹೊಂದಿದ್ದೇನೆ. ಜತೆಗೆ ಹಳೇಬೀಡಿನಲ್ಲಿ ಬಸವ ಬಳಗದಿಂದ ನಿರ್ಮಾಣವಾಗುತ್ತಿರುವ ಬಸವೇಶ್ವರ ಸಮುದಾಯ ಭವನದ ಅಭಿವೃದ್ಧಿಗೆ ಆರ್ಥಿಕ ಸಂಪತ್ತನ್ನು ಕ್ರೂಢೀಕರಿಸಿ ಅಭಿವೃದ್ಧಿ ಮಾಡುವೆ ಎಂದರು. ಮುಖಂಡರಾದ ಬಸ್ತಿಹಳ್ಳಿ ಸೋಮಣ್ಣ ಮಲ್ಲಿಕಾರ್ಜುನ್, ರವಿರಾಜ್, ಪ್ರದೀಪ್, ಎಚ್. ಪರಮೇಶ್, ಬಸವ ಬಳಗ ಅಧ್ಯಕ್ಷ ಚೇತನ್, ಅರುಣ್, ರಂಜಿತ್, ಬಸವರಾಜು, ವಿನಯ್, ಮುಂತಾದವರು ಹಾಜರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ