ನರಗುಂದ: ಭಾರತ ಮೊದಲು ಶಾಂತಿ ಬಯಸುತ್ತದೆ, ವೈರಿ ದೇಶ ನಮ್ಮನ್ನು ಕೆಣಕಿದರೆ ನಿಮ್ಮ ದೇಶ ಭೂಪಟದಲ್ಲಿ ಉಳಿಯುವದಿಲ್ಲ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಈಗಾಗಲೇ ಜಲ,ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳ ವ್ಯಾಪಾರ ವಹಿವಾಟು ನಿರ್ಬಂಧ ಹೇರಿದ್ದರಿಂದ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತ ಹೊಡತೆ ನಮ್ಮ ಪ್ರಧಾನಿ ನೀಡಿದ್ದಾರೆ. ಇಷ್ಟಕ್ಕೆ ಪಾಕಿಸ್ತಾನ ಸುಮ್ಮನಾಗದಿದ್ದರೆ ಮುಂದಿನ ದಿನಗಳಲ್ಲಿ ಪ್ರಧಾನಿಗಳು ಈ ದೇಶವನ್ನು ಭೂಪಟದಲ್ಲಿ ಉಳಿಯದಂತೆ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.
ದೇಶದ ವಿಷಯ ಬಂದಾಗ ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಪರ ಹೇಳಿಕೆ ನೀಡುತ್ತಿರುವುದು ಖಂಡನೀಯ. ಶೀಘ್ರ ಪಾಕಿಸ್ತಾನದಲ್ಲಿ ಅಲ್ಲಿಯ ಆಡಳಿತದ ವಿರುದ್ಧ ಜನ ದಂಗೆ ಎದ್ದು ಅಲ್ಲಿ ಸೇನಾ ಆಡಳಿತ ಬರುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಅಜ್ಜಪ್ಪ ಹುಡೇದ, ಬಿ.ಬಿ. ಐನಾಪೂರ, ಬಾಬುಗೌಡ ತಿಮ್ಮನಗೌಡ್ರ, ರಮೇಶಗೌಡ ಕರಕನಗೌಡ್ರ, ಎಸ್.ಆರ್. ಪಾಟೀಲ, ಎಸ್.ಬಿ.ಕರಿಗೌಡ್ರ, ಚಂದ್ರಶೇಖರ ದಂಡಿನ, ನಿಂಗಣ್ಣ ಗಾಡಿ, ಶಿವಪ್ಪ ಬೋಳಶಟ್ಟಿ, ಪ್ರಶಾಂತ ಜೋಶಿ, ರಾಚನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಬಸನಗೌಡ ಪಾಟೀಲ, ಮಹೇಶರಯ್ಯ ಸುರೇಬಾನ, ಪ್ರಕಾಶಗೌಡ ತಿರಕನಗೌಡ್ರ, ಶಿವಾನಂದ ಯಲಬಳ್ಳಿ, ಹನಮಂತ ಹದಗಲ್, ಅನೀಲ ಧರಿಯಣ್ಣವರ, ಬಿ.ಎಂ. ಕುರಗಣ್ಣವರ, ಕೊಟ್ರೀಶ ಕೊಟ್ರಶೆಟ್ಟರ ಸೇರಿದಂತೆ ಮುಂತಾದವರು ಇದ್ದರು.