ಕನ್ನಡಪ್ರಭ ವಾರ್ತೆ ಕೋಲಾರಕನ್ನಡ ಭಾಷೆಯನ್ನು ಉಳಿಸದೇ ಹೋದಲ್ಲಿ ದೇಶದ ಹಿಂದಿ ಆ ಜಾಗವನ್ನು ಆಕ್ರಮಿಸುತ್ತದೆ ಆದ್ದರಿಂದ ಪ್ರತಿ ಹಂತದಲ್ಲೂ ಭಾಷೆಯನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕರೆ ನೀಡಿದರು.ನಗರ ಹೊರವಲಯದ ಬೆಂಗಳೂರು ಉತ್ತರ ವಿವಿಯ ಟಮಕದ ಆಡಳಿತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕನ್ನಡ ಉಳಿಸುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ವಿವಿ ಕೈಗೊಂಡಿರುವ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ವಿವಿಯ ಕುಲಪತಿಗಲಾದ ಪ್ರೊ.ನಿರಂಜನ ಅವರ ಕನ್ನಡ ಪ್ರೇಮ ಶ್ಲಾಘನೀಯ. ಅವರಿರುವ ಕಡೆ ಕನ್ನಡದ ಏಳ್ಗೆ ಕುರಿತು ಚಿಂತೆ ಮಾಡುವ ಅಗತ್ಯವೇ ಇಲ್ಲ ಎಂದರು.ಭಾಷೆ ರಕ್ಷಣೆ ಎಲ್ಲರ ಹೊಣೆ
ಮೊರಸುನಾಡು ಕನ್ನಡ ನಿಘಂಟು
ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ವಿವಿಯ ಕನ್ನಡ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ, ವಿವಿಯಿಂದ ಸಾಹಿತಿ ಸಾ.ರಘುನಾಥ ಅವರ ಮೊರಸುನಾಡು ಕನ್ನಡ ನಿಘಂಟು ಹೊರತರುವ ಕೆಲಸವನ್ನು ವಿವಿಯಿಂದ ಮಾಡುತ್ತಿರುವುದಾಗಿ ತಿಳಿಸಿದರು. ಕನ್ನಡ ಸಂಸ್ಕೃತಿ, ಭಾಷೆ ಉಳಿಸುವ ನಿಟ್ಟಿನಲ್ಲಿ ವಿವಿಯಿಂದ ಅನೇಕ ಕೆಲಸ ಮಾಡಲಾಗಿದೆ, ಗಡಿ ಜಿಲ್ಲೆಯಲ್ಲೂ ರಾಜ್ಯದ ಶ್ರೀಮಂತ ಕರಾವಳಿ ಕಲೆ ಯಕ್ಷಗಾನವನ್ನು ಇಲ್ಲಿ ಪ್ರದರ್ಶಿಸಿ ಜನತೆಗೆ ಪ್ರೇರಣೆ ನೀಡಲಾಗಿದೆ ಎಂದರು.ವಿವಿಯಲ್ಲಿ ಕನ್ನಡಕ್ಕೆ ಆದ್ಯತೆ
ಉತ್ತರ ವಿವಿ ಮತ್ತು ತನ್ನ ವ್ಯಾಪ್ತಿಯ ಕಾಲೇಜುಗಳಲ್ಲಿ ಕನ್ನಡ ಉಳಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ, ಕನ್ನಡ ನಾಡು,ನುಡಿ,ನೆಲ,ಜಲ ರಕ್ಷಣೆಗೆ ವಿವಿ ಬದ್ದವಾಗಿದೆ, ಭಾಷೆಯನ್ನು ಬೆಳೆಸುವ ಕಾಯಕ ಮುಂದುವರೆಸಿದೆ ಎಂದು ತಿಳಿಸಿದರು.ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ತಿಮ್ಮೇಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಂತೋಷ್ ಹಾನಗಲ್, ಆಪ್ತ ಕಾರ್ಯದರ್ಶಿ ಟಿ.ಎಸ್.ಫಣಿಕುಮಾರ್, ವಿವಿಯ ಕುಲಸಚಿವ ಸಿ.ಎನ್.ಶ್ರೀಧರ್, ಮೌಲ್ಯಮಾಪನ ಕುಲಸಚಿವ ಪ್ರೊ.ತಿಪ್ಪೇಸ್ವಾಮಿ,ಹಣಕಾಸು ಅಧಿಕಾರಿ ವಸಂತಕುಮಾರ್, ಜೆ.ನಾಗರಾಜ್, ಸಿಂಡಿಕೇಟ್ ಸದಸ್ಯ ಬಸವರಾಜ್ ಅಲಗೂರು ಇದ್ದರು.