ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮ ಹಣ ವಸೂಲಿ

KannadaprabhaNewsNetwork |  
Published : Apr 07, 2025, 12:31 AM IST
5ಎಚ್ಎಸ್ಎನ್19 : ಬೇಲೂರು  ಪಟ್ಟಣದ  ಜೆ.ಪಿ ನಗರ ನ್ಯಾಯಬೆಲೆ ಅಂಗಡಿ ಸಂಖ್ಯೆ 84 ರಲ್ಲಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ   ಮಾನವ ಹಕ್ಕು ಹೋರಾಟಗಾರರ ಒಕ್ಕೂಟ  ತಾಲೂಕು ಘಟಕದ ಪದಾಧಿಕಾರಿಗಳು ಬೇಟಿ ನೀಡಿ  ಪರಿಶೀಲಿಸಿ ಸಾರ್ವಜನಿಕರಿಂದ ಮಾಹಿತಿ ಪಡೆದರು. | Kannada Prabha

ಸಾರಾಂಶ

ಗ್ರಾಹಕರಿಂದ ಪ್ರತಿ ತಿಂಗಳು ಪಡಿತರ ಪಡೆಯಲು 20 ರು. ಮತ್ತು ಕೆವೈಸಿ ನೀಡಲು 30 ರು.ಗಳ ಹಣ ಪಡೆಯುತ್ತಿದ್ದಾರೆ ಎಂಬ ಸಾರ್ವಜನಿಕರ ಆರೋಪದ ಮೇರೆಗೆ ಮಾನವ ಹಕ್ಕು ಹೋರಾಟ ಒಕ್ಕೂಟದ ಪದಾಧಿಕಾರಿಗಳು ಆಹಾರ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆ ಅಧಿಕಾರಿಗಳಾದ ವೀಣಾ ಮತ್ತು ಗೀತಾಂಜಲಿ ಪರಿಶೀಲನೆ ನಡೆಸಿ, ಪಡಿತರ ನೀಡಲು ಯಾವುದೇ ಹಣ ಕೊಡುವಂತಿಲ್ಲ. ಅಕ್ರಮವಾಗಿ ಸಾರ್ವಜನಿಕರಿಂದ ಹಣ ವಸಲಿ ಮಾಡಿರುವುದು ತಪ್ಪು. ಹಾಗಾಗಿ ಅಕ್ರಮವಾಗಿ ಹಣ ಪಡೆದಿರುವ ಸೊಸೈಟಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಜೆ.ಪಿ. ನಗರ ನ್ಯಾಯಬೆಲೆ ಅಂಗಡಿ ಸಂಖ್ಯೆ 84ರಲ್ಲಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಾನವ ಹಕ್ಕು ಹೋರಾಟಗಾರರ ಒಕ್ಕೂಟದ ತಾಲೂಕು ಘಟಕದ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕರಿಂದ ಮಾಹಿತಿ ಪಡೆದರು.

ಗ್ರಾಹಕರಿಂದ ಪ್ರತಿ ತಿಂಗಳು ಪಡಿತರ ಪಡೆಯಲು 20 ರು. ಮತ್ತು ಕೆವೈಸಿ ನೀಡಲು 30 ರು.ಗಳ ಹಣ ಪಡೆಯುತ್ತಿದ್ದಾರೆ ಎಂಬ ಸಾರ್ವಜನಿಕರ ಆರೋಪದ ಮೇರೆಗೆ ಮಾನವ ಹಕ್ಕು ಹೋರಾಟ ಒಕ್ಕೂಟದ ಪದಾಧಿಕಾರಿಗಳು ಆಹಾರ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆ ಅಧಿಕಾರಿಗಳಾದ ವೀಣಾ ಮತ್ತು ಗೀತಾಂಜಲಿ ಪರಿಶೀಲನೆ ನಡೆಸಿ, ಪಡಿತರ ನೀಡಲು ಯಾವುದೇ ಹಣ ಕೊಡುವಂತಿಲ್ಲ. ಅಕ್ರಮವಾಗಿ ಸಾರ್ವಜನಿಕರಿಂದ ಹಣ ವಸಲಿ ಮಾಡಿರುವುದು ತಪ್ಪು. ಹಾಗಾಗಿ ಅಕ್ರಮವಾಗಿ ಹಣ ಪಡೆದಿರುವ ಸೊಸೈಟಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಮಾನವ ಹಕ್ಕು ಹೋರಾಟ ಒಕ್ಕೂಟದ ಹಾಸನ ಜಿಲ್ಲಾಧ್ಯಕ್ಷ ಎಂ. ಜಿ. ನಿಂಗರಾಜ್ ಮಾತನಾಡಿ, ಜೆ.ಪಿ ನಗರ ಬಡಾವಣೆಯ ಸೊಸೈಟಿಯಲ್ಲಿ ಮನಬಂದಂತೆ ಹಣ ಪಡೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಬಡ ಜನರಿಗಾಗಿ ಸರ್ಕಾರ ನೀಡಿರುವ ಉಚಿತ ಯೋಜನೆಗೆ ಹಣ ಪಡೆಯುತ್ತಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಜೆ.ಪಿ ನಗರ ಬಡಾವಣೆಯ ಸೊಸೈಟಿ ನಿರ್ವಾಹಕಿ ಪದ್ಮಮ್ಮ ರವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಮಾನವ ಹಕ್ಕು ಹೋರಾಟ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಅರುಣ್ ಕುಮಾರ್ ಐ. ಎನ್., ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಜಿ.ಎನ್., ಶಂಕರ್ ಪ್ರಸಾದ್ ಬಿ ಪಿ., ನಗರ ಪ್ರಧಾನ ಕಾರ್ಯದರ್ಶಿ ಕಿರಣ್, ದೀಕ್ಷಿತ್ ಆರ್., ರವೀಂದ್ರನಾಥ್ ಇನ್ನಿತರರು ಹಾಜರಿದ್ದರು.

---

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ