ಬ್ಯಾಡಗಿ: ಬಿಜೆಪಿ ದೇಶದ ಅಭಿವೃದ್ಧಿ ಹಾಗೂ ಸುಧಾರಣೆ ಇನ್ನಿತರ ಸೈದ್ದಾಂತಿಕ ತತ್ವದ ಆಧಾರದ ಮೇಲೆ ಮುನ್ನಡೆಯುತ್ತಿದೆ. ನರೇಂದ್ರ ಮೋದಿಯವರಂತಹ ಮಹಾನ್ ನಾಯಕರನ್ನು ದೇಶಕ್ಕೆ ಪ್ರಧಾನಿಯನ್ನಾಗಿ ನೀಡುವ ಮೂಲಕ ವಿಶ್ವದಲ್ಲಿ ಭಾರತವನ್ನು ಮೊದಲ ಸ್ಥಾನಕ್ಕೆ ತರುವಲ್ಲಿ ಕಾರ‍್ಯಕರ್ತರ ಪಡೆದ ಸಜ್ಜಾಗಿರುವುದಾಗಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.ಭಾನುವಾರ ಪಟ್ಟಣದ ಬಿಜೆಪಿ ಕಾರ‍್ಯಾಲಯದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
1980ರ ದಶಕದ ಬಳಿಕ ಬಿಜೆಪಿ ದೇಶಾದ್ಯಂತ ಬಹುಬೇಗ ಜನಮನ್ನಣೆ ಪಡೆದಿದ್ದು, ಪಕ್ಷವು ರಾಷ್ಟ್ರೀಯತೆ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳದೇ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿದ್ದ ಅಧಿಕಾರವನ್ನು ಕಿತ್ತುಕೊಂಡಿದ್ದು, ಬರುವ 2040ನೇ ಇಸ್ವಿಯವರೆಗೆ ಹಿಂದುರುಗಿ ನೋಡದೇ ದೇಶದಲ್ಲಿ ಅಧಿಕಾರ ನಡೆಸಲಿದ್ದೇವೆ ಎಂದರು.ಈ ವೇಳೆ ಪುರಸಭೆ ಸದಸ್ಯರಾದ ವಿನಯ ಹಿರೇಮಠ, ಸರೋಜ ಉಳಾಗಡ್ಡಿ, ಕಲಾವತಿ ಬಡಿಗೇರ, ಮುಖಂಡರಾದ ಶಂಕರಗೌಡ್ರ ಪಾಟೀಲ, ಶಿವಾನಂದ ಯಮನಕ್ಕವರ, ನಿಂಗಪ್ಪ ಬಟ್ಟಲಕಟ್ಟೆ, ವಿಜಯ ಮಾಳಗಿ, ನಾಗರಾಜ ಹಾವನೂರು, ವಿಷ್ಣುಕಾಂತ ಬೆನ್ನೂರು, ವಿದ್ಯಾಶೆಟ್ಟಿ ಇತರರಿದ್ದರು.ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ: ಬೊಮ್ಮಾಯಿಹಾವೇರಿ: ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅವರು ಹೇಳಿದಷ್ಟೇ ಕಮಿಷನ್ ನಿರ್ಧಾರವಾಗುತ್ತಿದೆ. ಈ ವರ್ಷ ಬಜೆಟ್ ಇಲ್ಲದೇ ₹60 ಸಾವಿರ ಕೋಟಿ ಹೆಚ್ಚಿಗೆ ತೆರಿಗೆ ಹಾಕಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ 45ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಾಲು, ಡೀಸೆಲ್, ಕರೆಂಟ್ ಎಲ್ಲ ದರ ಹೆಚ್ಚಳ ಮಾಡಿದ್ದಾರೆ. ಅಭಿವೃದ್ಧಿ ಶೂನ್ಯ ಸರ್ಕಾರ ರಾಜ್ಯದಲ್ಲಿದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷವಾಗಿ ಅದರ ವಿರುದ್ಧ ಹೋರಾಟ ಮಾಡುವುದು ನಮ್ಮ ಕರ್ತವ್ಯ. ಯಾರಿಗೆ ಕರ್ತವ್ಯ ಮಾಡುವ ಬದ್ಧತೆ ಇದೆ ಅವರು ಮುಂದೆ ಬರಬೇಕು. ನಮಗೆ ಗಟ್ಟಿ ಕಾಳು ಬೇಕು. ಏನೇ ಕಷ್ಟ ಬರಲಿ. ನಾವು ಗಟ್ಟಿಯಾಗಿ ನಿಂತು ಹೋರಾಟ ಮಾಡಬೇಕು. ರಾಜ್ಯದಲ್ಲಿ ಇವತ್ತೇ ಚುನಾವಣೆ ನಡೆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಜಿಲ್ಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವವರೆಗೂ ವಿರಮಿಸುವುದಿಲ್ಲ ಎಂದರು.