ಕನ್ನಡಪ್ರಭ ವಾರ್ತೆ ಹೊಸದುರ್ಗ
ಗ್ಯಾರಂಟಿ ಯೋಜನೆಗಳಿಗೆ 65,000 ಕೋಟಿ ರು. ಖರ್ಚಾಗುತ್ತಿದ್ದು ಇಂತಹ ದೊಡ್ಡ ಸವಾಲುಗಳ ನಡುವೆಯೂ ಉತ್ತಮ ಆಡಳಿತ ನೀಡಲಾಗುತ್ತಿದೆ. ಸರ್ಕಾರದ ಕಾರ್ಯಕ್ರಮಗಳು ಯಶಸ್ವಿಯಾಗಲು ನಿಮ್ಮಗಳ ಸಹಕಾರ ಬಹಳ ಮುಖ್ಯವಾಗಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಯಶಸ್ವಿಯಾಗಲು ನಿಮ್ಮ ತಾಲೂಕಿನ ಕೊಡುಗೆ ಅಪಾರ ಈಗಾಗಲೇ ಚಿತ್ರದುರ್ಗ 4 ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಬರುವ ಜನವರಿ ಕೊನೆಯ ವಾರದಲ್ಲಿ ಸಿಎಂ ಹಾಗೂ ಡಿಸಿಎಂ ಗಳನ್ನು ಕರೆಸಿ ಉದ್ಘಾಟಿಸಲಾಗುವುದು ಎಂದರು.ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಕಂದಾಯ ಇಲಾಖೆಯಲ್ಲಿಇದ್ದ ಬ್ರಿಟಿಷ್ ಆಡಳಿತ ವೈಕರಿಯನ್ನು ಕೊನೆಗೊಳಿಸಿ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ಜಾರಿಗೆ ತರಲಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರು ಕಂದಾಯ ಇಲಾಖೆಯಲ್ಲಿ ನಿರಂತರವಾಗಿ ನಡೆಯುವ ಪೌತಿ ಖಾತೆ ಆಂದೋಲನದ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ದೊರಖಾಸ್ತು ಪೋಡಿಗಾಗಿ 10,000 ಅರ್ಜಿಗಳು ಬಾಕಿ ಇದ್ದು ಅವುಗಳ ಪೈಕಿ 600 ರೈತರಿಗೆ ಸಾಗುವಳಿ ಚೀಟಿ ನೀಡಲಾಗುವುದು. 94ಸಿ ಅಡಿಯಲ್ಲಿ 280 ಜನರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಸಾಮಾಜಿಕ ಭದ್ರತೆ ಯೋಜನೆ ಅಡಿಯಲ್ಲಿ 200 ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ ಎಂದರು.ತಾಲೂಕಿನ ರೈತರಿಗೆ ವಿದ್ಯುತ್ ಹಾಗೂ ನೀರು ಕೊಡುವ ಉದ್ದೇಶದಿಂದ ಭದ್ರಾ ಯೋಜನೆ ಜಾರಿಗೊಳಿಸಲಾಗಿದೆ ಹಾಗೆಯೇ ನಿರಂತರ ವಿದ್ಯುತ್ ಕೊಡಲು ಕೊಂಡಜ್ಜಿ ಸಮೀಪ 420 ಕೆವಿ ಸಾಮರ್ಥ್ಯದ ವಿದ್ಯುತ್ ರಿಸೀವಿಂಗ್ ಸ್ಟೇಷನ್ ಸ್ಥಾಪಿಸಲಾಗುವುದು ಅಲ್ಲದೆ ತಾಲೂಕಿನ 5 ಭಾಗದಲ್ಲಿ ಸಬ್ ಸ್ಟೇಷನ್ ಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಒಂದು ವರ್ಷದಲ್ಲಿ ಬಾಕಿ ಇರುವ ಕಂದಾಯ ಇಲಾಖೆಗಳ ಎಲ್ಲಾ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಒದಗಿಸಲಾಗುವುದು. ಈಗಾಗಲೇ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಎಲ್ಲಾ ದಾಖಲೆಗಳನ್ನು ಗಣಕೀಕರಣ ಗೊಳಿಸಲಾಗಿದೆ. ಜಿಲ್ಲೆಯಲ್ಲಿ ಬಾಕಿ ಇರುವ 40ಸಾವಿರ ಪೌತಿ ಖಾತೆಯನ್ನು ಶೀಘ್ರ ಮಾಡಿಕೊಡಲಾಗುವುದು ಎಂದರು.ಗ್ರಾಮೀಣ ಭಾಗದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಜನರಿಗೆ ಸಿಗುವಂತಾಗಲು ಗ್ರಾಪಂ ಕಚೇರಿ ಗಳಲ್ಲಿಯೇ ಜಾಗ ನೀಡಲಾಗಿದೆ .ಕಳೆದ 2 ವರ್ಷದಲ್ಲಿ ತಾಲೂಕಿಗೆ 4500ಕೋಟಿ ತಾಲೂಕಿಗೆ ತರಲಾಗಿದೆ .200 ಎಕರೆ ಜಾಗವನ್ನು ಗುರುತು ಮಾಡಿ ವಿವಿಧ ಇಲಾಖೆಗಳಿಗೆ ನೀಡಲಾಗಿದೆ ಎಂದರು.
ಶಾಸಕ ರಘುಮೂರ್ತಿ ಮಾತನಾಡಿ, ಶಾಸಕರು ಯಾರು ಬೇಕಾದರೂ ಆಗಬಹುದು ಆದರೆ ಶಾಸಕರಾದವರು ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಮಾತ್ರ ಅದು ಸಾರ್ಥಕವಾಗುತ್ತದೆ ಎಂದರು.ವೇದಿಕೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ತಾಂತ್ರಿಕ ಸಹಾಯಕ ರಾಮಾಂಜನೇಯ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು.