ಇಂದು ಅರಳೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Feb 13, 2025, 12:48 AM IST
ಶಿರ್ಷಿಕೆ.೧೨ಕೆ.ಎಂ.ಎಲ್ಆರ್.೩-ಸಾಹಿತಿ  ಕೆ.ಮುನಿಕೃಷ್ಣಪ್ಪ  | Kannada Prabha

ಸಾರಾಂಶ

ಅರಳೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಫೆ.೧೩ ರಂದು ನಡೆಯುವ ೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವು ನಡೆಯಲಿದ್ದು, ಬೆಳಗ್ಗೆ ೮ ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ, ಪರಿಷತ್ ಧ್ವಜಾರೋಹಣ ನಡೆಯಲಿದೆ. ೯ಗಂಟೆಗೆ ಗ್ರಾಪಂ ಕಚೇರಿಯ ಆವರಣದಿಂದ ಮೆರವಣಿಗೆ ಕಾರ್ಯಕ್ರಮ, ೧೦ ಗಂಟೆಗೆ ವೇಕೆಯ ಕಾರ್ಯಕ್ರಮ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಾಲೂರು

ತಾಲೂಕಿನ ಕಸಬಾ ಹೋಬಳಿಯ ಅರಳೇರಿ ಗ್ರಾಮದಲ್ಲಿ ಫೆ.೧೩ ರಂದು ಗುರುವಾರ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕೆ.ಮುನಿಕೃಷ್ಣಪ್ಪ ಅವರನ್ನು ಆಯ್ಕೆ ಮಾಡಿದ್ದು, ಕಾರ‍್ಯಕ್ರಮಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹಿರಿಯ ಸಾಹಿತಿ ಕೆ.ಮುನಿಕೃಷ್ಣಪ್ಪ ರಾಜ್ಯ ಅನಿಕೇತನ ಸಾಂಸ್ಕೃತಿಕ ವೇಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿ ಕಳೆದ ೩೫ ವರ್ಷಗಳಿಂದ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಸಾಹಿತಿ, ವಕೀಲ, ಕನ್ನಡ ನಾಡು ನುಡಿಗಾಗಿ ಹಲವು ಹೋರಾಟಗಳಲ್ಲಿ ಭಾಗವಹಿಸುವುದರ ಜತೆಗೆ ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ನಾಡಿನಾಧ್ಯಾಂತ ಪ್ರಚಾರ ಮಾಡುತ್ತಿದ್ದಾರೆ.

ಕನ್ನಡ ಸಾಹಿತ್ಯಕ್ಕೆ ಕೊಡುಗೆ

ತಾಲೂಕಿನಲ್ಲಿ ಕೆಮುಕೃ ಎಂದೇ ಪ್ರಸಿದ್ಧಿ ಪಡೆದಿರುವ ಕೆ.ಮುನಿಕೃಷ್ಣಪ್ಪ ಅವರು ತಾಲೂಕಿನ ಮಾಸ್ತಿ ಹೋಬಳಿಯ ರಾಜೇನಹಳ್ಳಿ ಗ್ರಾಮದಲ್ಲಿ ಕೆಂಚಪ್ಪ ಹಾಗೂ ಅಕ್ಕಮ್ಮ ದಂಪತಿಗಳ ೨ನೇ ಪುತ್ರರಾಗಿದ್ದಾರೆ. ಸಾಹಿತಿ ಕೆ.ಮುನಿಕೃಷ್ಣಪ್ಪ ನಿಸರ್ಗ ಕವನ ಸಂಕಲನ, ವೀಕ್ಷಣೆ ಲೇಖನಗಳ ಸಂಕಲನ, ಶುಭೋದಯ ಸ್ಮರಣ ಸಂಚಿಕೆ, ಜನನಿ ಸ್ಮರಣ ಸಂಚಿಕೆ, , ಮಧುರ ರಮ್ಯ ರಾಗ ಸಂಗಮ ಸ್ಮರಣ ಸಂಚಿಕೆ, ಅರ್ಚಕರಾದ ಪಿ.ನಾಗೇಶ್ವರರಾವ್ ಅವರ ಕಿರುಪರಿಚಯದ ಸಂಚಿಕೆ, ಗದಿಗೆದರಿದ ನವ್ಯಾಲೆ ಲೇಖನಗಳ ಸಂಕಲನ, ಕತ್ತಲನ್ನು ದೂಡಿದ ಬೆಳಕಿನ ಕಿರಣಗಳು, ಸಾಗರದ ಅಲೆಗಳು, ಮಾತೃ ಹೃದಯ-ಸಿ.ವಿ.ರಾಮಾನ್ ಜೀವನ ಚರಿತ್ರೆ, ಸಾಧನೆಯ ಹಾದಿಯಲ್ಲಿ, ಬೆಳಕಿನ ಅಲೆಗಳು ಸೇರಿದಂತೆ ಒಟ್ಟು ೧೩ ಕೃತಿಗಳನ್ನು ರಚಿಸಿ ಅವುಗಳನ್ನು ಪ್ರಕಟಿಸಿ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಇಂದು ಸಾಹಿತ್ಯ ಸಮ್ಮೇಳನ

ಅರಳೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಫೆ.೧೩ ರಂದು ನಡೆಯುವ ೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವು ನಡೆಯಲಿದ್ದು, ಬೆಳಗ್ಗೆ ೮ ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ, ಪರಿಷತ್ ಧ್ವಜಾರೋಹಣ ನಡೆಯಲಿದೆ. ೯ಗಂಟೆಗೆ ಗ್ರಾಪಂ ಕಚೇರಿಯ ಆವರಣದಿಂದ ಮೆರವಣಿಗೆ ಕಾರ್ಯಕ್ರಮ, ೧೦ ಗಂಟೆಗೆ ವೇಕೆಯ ಕಾರ್ಯಕ್ರಮ ನಡೆಯಲಿದೆ. ಶಾಸಕ ಕೆ.ವೈ.ನಂಜೇಗೌಡ, ಸಾಹಿತಿ ಡಾ.ಚಂದ್ರಶೇಖರನಂಗಲಿ, ಕಸಾಪ ಜಿಲ್ಲಾಧ್ಯಕ್ಷ ಗೋಪಾಲಗೌಡ, ತಾ.ಅಧ್ಯಕ್ಷ ಎಂ.ವಿ.ಹನುಮಂತಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ